ಬೆಂಗಳೂರು: ಮೂರು ದಿನಗಳ ಬಾಳಿಕೆ ಬರುವ ಬ್ಯಾಟರಿ ಸಹಿತ ಹೊಸ ಸ್ಮಾರ್ಟ್‌ಫೋನ್ ಅನ್ನು ನೋಕಿಯಾ ಬಿಡುಗಡೆ ಮಾಡಿದೆ.
ಝೆಸ್ ಆಪ್ಟಿಕ್ಸ್ ಇರುವ 48 ಮೆಗಾಪಿಕ್ಸೆಲ್ ಸಹಿತ ನಾಲ್ಕು ಕ್ಯಾಮರಾ ಹೊಸ ನೋಕಿಯಾ G20 ಸ್ಮಾರ್ಟ್‌ಫೋನ್‌ನಲ್ಲಿದೆ.
ಜಿ ಸರಣಿಯಲ್ಲಿ ನೋಕಿಯಾ ನೂತನ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದು, ಆಕರ್ಷಕ ವಿನ್ಯಾಸ ಹೊಂದಿದೆ.
ನೋಕಿಯಾ G20 ತಾಂತ್ರಿಕ ವೈಶಿಷ್ಟ್ಯ
ನೋಕಿಯಾ ಹೊಸ ಸ್ಮಾರ್ಟ್‌ಫೋನ್‌ನಲ್ಲಿ ಮೀಡಿಯಾಟೆಕ್ G35 ಪ್ರೊಸೆಸರ್, ಮೂರು ದಿನಗಳ ಬ್ಯಾಟರಿ ಬಾಳಿಕೆ ವೈಶಿಷ್ಟ್ಯ ಇದೆ ಎಂದು ಕಂಪನಿ ಹೇಳಿದೆ.
ಆಂಡ್ರಾಯ್ಡ್ 11, 6.5 ಇಂಚಿನ ಎಚ್‌ಡಿ+ ಸ್ಕ್ರೀನ್, 48 ಮೆಗಾಪಿಕ್ಸೆಲ್ ಹಿಂಬದಿ ಮುಖ್ಯ ಕ್ಯಾಮರಾ ಮತ್ತು 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮರಾ ಕೂಡ ಇದರಲ್ಲಿದೆ.
ಬೆಲೆ ವಿವರ
ಹೊಸ ನೋಕಿಯಾ G20 ಫೋನ್, ಅಮೆಜಾನ್ ಮತ್ತು ನೋಕಿಯಾ ಡಾಟ್ ಕಾಂ. ಮೂಲಕ ಜುಲೈ 15ರಿಂದ ದೊರೆಯಲಿದೆ. ದೇಶದಲ್ಲಿ ನೂತನ ಸ್ಮಾರ್ಟ್‌ಫೋನ್ ಬೆಲೆ ₹12,999 ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.