ವಾಟ್ಸ್ಆ್ಯಪ್ನಲ್ಲಿ ಗುಣಮಟ್ಟದ ಫೋಟೊ ಕಳಿಸಲು ಹೀಗೆ ಮಾಡಿ.
ವಾಟ್ಸ್ಆ್ಯಪ್‌ನಲ್ಲಿ ಫೋಟೊ ಕಳಿಸುವುದು ಸುಲಭ. ಮೊಬೈಲ್ ಫೋನ್‌ನಲ್ಲಿ ಕ್ಲಿಕ್ಕಿಸಿದ ಫೋಟೊ ಅಲ್ಲದೆ ಇತರ ಕ್ಯಾಮೆರಾಗಳಲ್ಲಿ ಕ್ಲಿಕ್ಕಿಸಿದ High resolution ಫೋಟೊಗಳನ್ನು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸುವಾಗ ಅವುಗಳು compress ಆಗಿ ಗುಣಮಟ್ಟ ಕಳೆದುಕೊಳ್ಳುತ್ತವೆ. ಈ ರೀತಿ High resolution ಫೋಟೊಗಳನ್ನು ವಾಟ್ಸ್‌ಆ್ಯಪ್ ಮಾಡುವಾಗ ಹೀಗೆ ಮಾಡಿ.
ನೀವು ಕಳುಹಿಸುವ ಫೋಟೊಗಳ ಫೈಲ್ ನೇಮ್ ಬದಲಿಸಿ.
ಫೋಟೊಗಳು .jpg extension ಹೊಂದಿರುತ್ತವೆ. ಈ jpg ಫೈಲ್ ಅನ್ನು .doc ಎಂದು ಬದಲಿಸಿ. ಉದಾಹರಣೆಗೆ ಫೈಲ್ ನೇಮ್ cat.jpg ಎಂದು ಇದ್ದರೆ cat.doc ಎಂದು ಬದಲಿಸಿ send ಮಾಡಿ.
ಈ ಫೈಲ್ ರಿಸೀವ್ ಮಾಡುವವರು ಫೈಲ್ ನೇಮ್ .jpg ಎಂದು ಬದಲಿಸುವಂತೆ ಹೇಳಿ.
ಹೆಚ್ಚು ಫೈಲ್‌ಗಳನ್ನು ಕಳಿಸುವಾಗ Zip File ಮಾಡಿ: ಒಂದಕ್ಕಿಂತ ಹೆಚ್ಚು ಫೈಲ್‌ಗಳನ್ನು ಕಳಿಸುವಾಗ Zip File ಮಾಡಿ ಕಳುಹಿಸುತ್ತೇವೆ. ವಾಟ್ಸ್‌ಆ್ಯಪ್‌ನಲ್ಲಿಯೂ ಇದೇ ರೀತಿ Zip File ಗಳನ್ನು ಕಳುಹಿಸಬಹುದು.
ಹೀಗೆ ಮಾಡಿ
ಫೈಲ್ ಮ್ಯಾನೇಜರ್ ಅಥವಾ ನಿಮ್ಮ ಮೊಬೈಲ್‌ನಲ್ಲಿ My Files ಎಂಬ ಫೋಲ್ಡರ್ ಕ್ಲಿಕ್ ಮಾಡಿ, ಅಲ್ಲಿ ಒಂದಕ್ಕಿಂತ ಹೆಚ್ಚು ಫೈಲ್‌ಗಳನ್ನು ಆಯ್ಕೆ ಮಾಡಿ.
ಬಲಭಾಗದಲ್ಲಿ ಮೇಲೆ More ಎಂಬ ಆಪ್ಶನ್ ಕ್ಲಿಕ್ ಮಾಡಿದಾಗ ಅಲ್ಲಿ Move, copy, Compress, Details ಎಂಬ ಆಪ್ಶನ್ ಕಾಣಿಸುತ್ತದೆ.
Compress ಕ್ಲಿಕ್ ಮಾಡಿ
create zip File -ಆಪ್ಶನ್‌ನಲ್ಲಿ zip fileಗೆ ಹೆಸರು ಕೊಡಿ. Compress ಎಂಬ ಆಯ್ಕೆಯನ್ನು ಒತ್ತಿದ ಕೂಡಲೇ zip ಫೈಲ್ ಕ್ರಿಯೇಟ್ ಆಗುತ್ತದೆ.
ಈ zip File ನ್ನು ಆಯ್ಕೆ ಮಾಡಿ share ಕ್ಲಿಕ್ ಮಾಡಿದ ಕೂಡಲೇ ಯಾರಿಗೆ, ಯಾವ ರೀತಿ ಶೇರ್ ಮಾಡಬೇಕೆಂಬ ಆಪ್ಶನ್‌ಗಳು ಕಾಣಿಸುತ್ತವೆ.
ನೀವು Zip File ಕಳುಹಿಸಲು ಬಯಸುವ ವ್ಯಕ್ತಿಗಳಿಗೆ ವಾಟ್ಸ್‌ಆ್ಯಪ್ ಅಥವಾ ಇಮೇಲ್ ಮೂಲಕವೂ ಇದನ್ನು ಕಳುಹಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.