ಬೆಂಗಳೂರು: ವಿಶಿಷ್ಟ ವಿನ್ಯಾಸದಲ್ಲಿ 'ಫಿಜೆಟ್ ಸ್ಪಿನ್ನರ್' ಆಟಿಕೆಯನ್ನು ಒಳಗೊಂಡಿರುವ ಭಾರತದ ಮೊದಲ ವೈರ್‌ಲೆಸ್ ಪವರ್ ಬ್ಯಾಂಕ್ 'ಸೈಬೋಟ್ರಾನ್ ಸ್ಪಿನ್' ಅನ್ನು ತಂತ್ರಜ್ಞಾನ ಉತ್ಪನ್ನಗಳ ಭಾರತೀಯ ಬ್ರ್ಯಾಂಡ್ ಆಗಿರುವ 'ನು ರಿಪಬ್ಲಿಕ್' ಬುಧವಾರ ಬಿಡುಗಡೆಗೊಳಿಸಿದೆ.
10,000mAh ಬ್ಯಾಟರಿ ಚಾರ್ಜ್ ಸಾಮರ್ಥ್ಯದ ಈ ಪವರ್‌ಬ್ಯಾಂಕ್, 22.5W ವೇಗದ ಚಾರ್ಜಿಂಗ್ ಬೆಂಬಲಿಸುತ್ತಿದ್ದು, ಟೈಪ್ ಸಿ, ಟೈಪ್ ಎ ಹಾಗೂ ಟೈಪ್ ಎಲ್ ಪೋರ್ಟ್‌ಗಳನ್ನು ಹೊಂದಿದೆ. ಹೀಗಾಗಿ ಅತ್ಯಾಧುನಿಕ ಹಾಗೂ ಹಳೆಯ ಆಂಡ್ರಾಯ್ಡ್ ಸಾಧನಗಳಲ್ಲದೆ, ಐಫೋನ್‌ಗಳ ಚಾರ್ಜಿಂಗ್‌ಗೂ ಅನುಕೂಲವನ್ನು ಹೊಂದಿದೆ. ಜೊತೆಗೆ, ಸ್ವತಃ ಪವರ್ ಬ್ಯಾಂಕ್ ಕೂಡ ವೇಗವಾಗಿ ಚಾರ್ಜ್ ಆಗುತ್ತದೆ. ಬೆಂಬಲಿಸುವ ಆಧುನಿಕ ಸಾಧನಗಳನ್ನು ವೈರ್‌ಲೆಸ್ ಆಗಿಯೂ ಚಾರ್ಜ್ ಮಾಡಬಹುದಾಗಿದೆ.
ಬೇಕಾದಲ್ಲಿಗೆ ಒಯ್ಯಬಹುದಾಗಿರುವ ಸೈಬೋಟ್ರಾನ್ ಸ್ಪಿನ್ ಪವರ್‌ಬ್ಯಾಂಕ್ ಮೂಲಕ ಎರಡು ಸಾಧನಗಳನ್ನು ಏಕಕಾಲದಲ್ಲಿ ಚಾರ್ಜ್ ಮಾಡಬಹುದಾಗಿರುವುದು ಇದರ ಇನ್ನೊಂದು ವಿಶೇಷತೆ ಆಗಿದ್ದು, ಇದರ ಬೆಲೆ ₹2499. ಬ್ಲಿಂಕಿಟ್ ಹಾಗೂ 'ನು ರಿಪಬ್ಲಿಕ್ (Nu Republic)' ಜಾಲತಾಣಗಳಲ್ಲಿ ಲಭ್ಯವಿದೆ.
ಹೊಸದಾಗಿ ಬಿಡುಗಡೆಯಾಗಿರುವ ನು ರಿಪಬ್ಲಿಕ್ ಸೈಬೋಟ್ರಾನ್ ಸ್ಪಿನ್ ಪವರ್ ಬ್ಯಾಂಕನ್ನು ವಿಶ್ವದಾದ್ಯಂತ ಬಿಡುಗಡೆಗೊಳಿಸಲಾಗಿದ್ದು, ಅದರ ಗಾತ್ರ, ತೂಕ ಮತ್ತು ಫಿಜೆಟ್ ಸ್ಪಿನ್ನರ್ ವಿನ್ಯಾಸದಿಂದ ಗಮನ ಸೆಳೆಯಲಿದೆ ಎಂದು ನು ರಿಪಬ್ಲಿಕ್ ಸಂಸ್ಥಾಪಕ ಉಜ್ವಲ್ ಜೈನ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.