ADVERTISEMENT

ನು ರಿಪಬ್ಲಿಕ್‌ನ Cyberstud Spin ಇಯರ್‌ಬಡ್ಸ್ ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜೂನ್ 2024, 15:02 IST
Last Updated 12 ಜೂನ್ 2024, 15:02 IST
   

ಬೆಂಗಳೂರು: ಭಾರತದ ನು ರಿಪಬ್ಲಿಕ್‌ ಕಂಪನಿಯು ಸೈಬರ್‌ಸ್ಟಡ್ ಸ್ಪಿನ್ ಇಯರ್‌ಬಡ್ ಬಿಡುಗಡೆ ಮಾಡಿದೆ.

ಇದು ಭಾರತದ ಕಂಪನಿಯೊಂದು ತಯಾರಿಸಿರುವ ಮೊದಲ ವೈರ್‌ಲೆಸ್ ಇಯರ್‌ಬಡ್ಸ್ ಆಗಿದ್ದು, ಫಿಡ್ಜೆಟ್ ಸ್ಪಿನ್ನರ್ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಚಾರ್ಜಿಂಗ್ ಕೇಸ್ ಅನ್ನು ಫಿಡ್ಜೆಟ್ ಸ್ಪಿನ್ನರ್ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಮೆಟಾಲಿಕ್ ಫಿನಿಶ್ ಹೊಂದಿದೆ. ಕೆಲಸ ಮಾಡುತ್ತಲೇ ಇಷ್ಟದ ಹಾಡು ಅಥವಾ ಯಾವುದೇ ಆಡಿಯೊ ಕೇಳುತ್ತಾ ಆನಂದಿಸಲು ಅನುವಾಗುವಂತೆ ವಿನ್ಯಾಸಗೊಳಿಸಲಾಗಿದೆ. ನು ರಿಪಬ್ಲಿಕ್‌ನ ಎಕ್ಸ್ ಬಾಸ್ ಟೆಕ್ನಾಲಜಿಯನ್ನು ಈ ಬಡ್ಸ್ ಒಳಗೊಂಡಿದೆ.

ADVERTISEMENT

ವೈಶಿಷ್ಟ್ಯಗಳು

* ವಿನ್ಯಾಸ: 360° ಫಿಡ್ಜೆಟ್ ಸ್ಪಿನ್ನರ್, ಸ್ವೂಶ್ ಸೌಂಡ್ ಜೊತೆ ಮೆಟಲ್ ಗ್ಲೈಡರ್ಸ್

* ತಂತ್ರಜ್ಞಾನ: 13 ಎಂಎಂ ನಿಯೋಡೈಮಿಯಮ್ ಜೊತೆ X-BASS ತಂತ್ರಜ್ಞಾನ ಒಳಗೊಂಡಿದೆ

* ಗೇಮಿಂಗ್: 40 ಎಂಎಸ್ ಅಲ್ಟ್ರಾ ಲೋ–ಲೇಟೆನ್ಸಿ

* ಕನೆಕ್ಟಿವಿಟಿ: ಬ್ಲೂಟೂತ್ ವಿ5.3; 15ಎಂ ಶ್ರೇಣಿ

*ಇಎನ್‌ಸಿ: ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸಲೇಶನ್ I ಡುಯಲ್ ಮೋಡ್ (ಗೇಮ್/ಮ್ಯೂಸಿಕ್)

*ಪ್ಲೇ ಟೈಮ್ 70 ಗಂಟೆವರೆಗೆ

ಬೆಲೆ

₹2,499ಗೆ ಈ ಇಯರ್ ಬಡ್ಸ್ ಲಭ್ಯವಿದ್ದು, ಫ್ಲೆಕ್ಸಿಬಿಲಿಟಿ ಜೊತೆಗೆ ಅತ್ಯಾಧುನಿಕ ಫೀಚರ್‌ಗಳ ಅನುಭವವನ್ನು ಪಡೆಯಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.