ADVERTISEMENT

ಫಿಜೆಟ್ ಸ್ಪಿನ್ನರ್‌ + ಏರ್‌ಬಡ್‌: ನೂ ರಿಪಬ್ಲಿಕ್‌ನ ಹೊಸ ಉತ್ಪನ್ನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜೂನ್ 2024, 13:30 IST
Last Updated 3 ಜೂನ್ 2024, 13:30 IST
   

ಬೆಂಗಳೂರು: ಭಾರತದ ಟೆಕ್‌ ಬ್ರ್ಯಾಂಡ್‌ ‘ನೂ ರಿಪಬ್ಲಿಕ್‌’(Nu Republic) ಅದ್ಭುತವಾದ ಒಂದು ಉತ್ಪನ್ನವನ್ನು ಪರಿಚಯಿಸಲು ಮುಂದಾಗಿದೆ. ಎರ್‌ ಬಡ್‌ ಹಾಗೂ ಫಿಜೆಟ್ ಸ್ಪಿನ್ನರ್‌ ಆಗಿಯೂ ಉಪಯೋಗಿಸಬಲ್ಲ ‘ಸೈಬರ್‌ಸ್ಟುಡ್‌ ಸ್ಪಿನ್‌’ (Cyberstud SPIN) ಎನ್ನುವ ಗ್ಯಾಜೆಟ್‌ ಅನ್ನು ಶೀಘ್ರವೇ ಬಿಡುಗಡೆಗೊಳಿಸುವುದಾಗಿ ಹೇಳಿದೆ.

ಭಾರತ ಸೇರಿ ಹಲವು ರಾಷ್ಟ್ರಗಳಲ್ಲಿ ಇದು ಲಭ್ಯವಾಗಲಿದೆ ಎಂದು ಕಂಪನಿ ಹೇಳಿದೆ.

ಸೈಬರ್‌ಸ್ಟಡ್ ಸ್ಪಿನ್ ಅನ್ನು 360-ಡಿಗ್ರಿ ಫಿಜೆಟ್ ಸ್ಪಿನ್ನರ್‌ನಂತೆ ವಿನ್ಯಾಸಗೊಳಿಸಲಾಗಿದೆ. ಬಿಡುಗಡೆಗೂ ಮುನ್ನ ಬಂದಿರುವ ಪೋಸ್ಟರ್‌ನಲ್ಲಿ ಗ್ಯಾಜೆಟ್‌ ಗಾಢ ಬಣ್ಣದಲ್ಲಿ ಇರುವುದು ಕಾಣಬಹುದಾಗಿದೆ. ಅಧಿಕೃತ ವಿನ್ಯಾಸದ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ADVERTISEMENT

ಸೈಬರ್‌ಸ್ಟಡ್ ಸ್ಪಿನ್ ಇಯರ್‌ಬಡ್‌ಗಳಲ್ಲಿ ಮೆಟಲ್ ಗ್ಲೈಡರ್‌ಗಳಿವೆ. ನಿರ್ದಿಷ್ಟವಾಗಿ ಗೇಮರ್‌ಗಳನ್ನು ಗುರಿಯಾಗಿಸಿಕೊಂಡು ವಿನ್ಯಾಸಗೊಳಿಸಲಾಗಿದೆ. ಫೀಚರ್‌ಗಳು ಉತ್ತಮ ಗೇಮಿಂಗ್‌ ಅನುಭವ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಶೀಘ್ರವೇ ಭಾರತದಲ್ಲಿ ಇದು ಬಿಡುಗಡೆಯಾಗಲಿದ್ದು, ದರ ₹ 3 ಸಾವಿರ ಇರಬಹುದು ಎಂದು ಅಂದಾಜಿಸಲಾಗಿದೆ. ಭಾರತದ ಜೊತೆಗೆ ನೇಪಾಳ, ಶ್ರೀಲಂಕಾ ಹಾಗೂ ಯು.ಎ.ಇಯಲ್ಲೂ ಇದು ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.