ಬೆಂಗಳೂರು: ಪ್ರೀಮಿಯಂ ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿರುವ ಒನ್‌ಪ್ಲಸ್, ನೂತನ ಮಾದರಿಯನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ.
ಒನ್‌ಪ್ಲಸ್ 11 5G ಈ ವರ್ಷದ ಮೊದಲ ಪ್ರೀಮಿಯಂ ಸ್ಮಾರ್ಟ್‌ಫೋನ್ ಆಗಿದೆ ಎಂದು ಕಂಪನಿ ಹೇಳಿದೆ. ಹಿಂಭಾಗದಲ್ಲಿ ವೃತ್ತಾಕಾರದ ದೊಡ್ಡ ವಿನ್ಯಾಸದ ಕ್ಯಾಮೆರಾ ಇದೆ.
ಒನ್‌ಪ್ಲಸ್ 11 5G
6.7 ಇಂಚಿನ ಕ್ವಾಡ್ ಎಚ್‌ಡಿ+ ಡಿಸ್‌ಪ್ಲೇ, ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಂದಿದೆ.
ಸ್ನ್ಯಾಪ್‌ಡ್ರ್ಯಾಗನ್ 8 ಜೆನ್ 2 ಪ್ರೊಸೆಸರ್ ಜತೆಗೆ ಅಡ್ರೆನೊ 740 ಗ್ರಾಫಿಕ್ಸ್ ಬೆಂಬಲ ಹೊಂದಿದೆ. 12GB ಮತ್ತು 16GB LPDDR5X RAM ಎಂಬ ಎರಡು ಆಯ್ಕೆ ಹಾಗೂ 256 GB ಮತ್ತು 512 GB ಸ್ಟೋರೇಜ್ ಜತೆಗೆ ದೊರೆಯಲಿದೆ. 5,000mAh ಬ್ಯಾಟರಿ ಮತ್ತು 100W SuperVOOC ಚಾರ್ಜಿಂಗ್ ಬೆಂಬಲ, ಆ್ಯಂಡ್ರಾಯ್ಡ್ 13 ಆಧಾರಿತ ಕಲರ್‌ಓಎಸ್ 13 ಮೂಲಕ ಹೊಸ ಒನ್‌ಪ್ಲಸ್ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಿಸುತ್ತದೆ.
ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜತೆಗೆ 48 ಮೆಗಾಪಿಕ್ಸೆಲ್ ವೈಡ್ ಆ್ಯಂಗಲ್ ಕ್ಯಾಮೆರಾ, 32 ಮೆಗಾಪಿಕ್ಸೆಲ್ ಟೆಲಿಫೋಟೊ ಲೆನ್ಸ್ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಇದರಲ್ಲಿದೆ.
ಒನ್‌ಪ್ಲಸ್ 11 5G ಸ್ಮಾರ್ಟ್‌ಫೋನ್ ಫೆಬ್ರುವರಿ 11ರಂದು ನವದೆಹಲಿಯಲ್ಲಿ ಬಿಡುಗಡೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.