ನವದೆಹಲಿ: ತಂತ್ರಜ್ಞಾನದ ಹೊಸ ಆವಿಷ್ಕಾರಗಳಿಗೆ ಪೂರಕವಾಗಿರುವ ಒಪ್ಪೊ 'ಬ್ಯಾಂಡ್ ಸ್ಟೈಲ್' ಬಿಡುಗಡೆಯಾಗಿದೆ. ಈ ಬ್ಯಾಂಡ್ ನಿರಂತರವಾಗಿ ಎಸ್‌ಪಿಒ2 ನಿಗಾ, ನಿದ್ದೆಯಲ್ಲಿ ಇರುವಾಗ ಮತ್ತು ಓಡುವಾಗಿನ ಉಸಿರಾಟಸ ಮಟ್ಟವನ್ನು ಮೌಲ್ಯಮಾಪನ ನಡೆಸಲಿದೆ.
1.1 ಇಂಚು ಸಂಪೂರ್ಣ ವರ್ಣಮಯ ಅಮೊಲೆಡ್ ಪರದೆ ಇದೆ. ಬೇಸಿಕ್ ಸ್ಪೋಟ್ಸ್ ಮತ್ತು ಸ್ಟೈಲ್ ಮಾದರಿಯಲ್ಲಿ ಇರಲಿದ್ದು, ಬಳಕೆದಾರರು ತಮಗಿಷ್ಟದ ಬ್ಯಾಂಡ್ ಬದಲಿಸುವ ಅವಕಾಶ ಒದಗಿಸಲಿದೆ. ಇದರ ₹2,999 ಬೆಲೆ ನಿಗದಿಯಾಗಿದೆ.
ಬ್ಯಾಂಡ್ ಆರೋಗ್ಯದ ಮೇಲೆ ನಿಗಾ ಇರಿಸುವ ಸೌಲಭ್ಯವು ನಿದ್ದೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುರುತಿಸಲಿದೆ. ಇದು ನಿಖರವಾಗಿ ನಿದ್ದೆಯ, ಹೃದಯಬಡಿತ ಮತ್ತು ನಿರಂತರವಾಗಿ ಎಸ್‌ಪಿಒ2 ನಿಗಾ ಇರಿಸಿ ಎಲ್ಲ ಬಗೆಯ ಮಾಹಿತಿ ಒದಗಿಸಿ ಬಳಕೆದಾರರ ನಿದ್ದೆಯ ಆರೋಗ್ಯ ವಿಶ್ಲೇಷಿಸಲಿದೆ. ಓಟ, ನಡಿಗೆ, ಸೈಕಲ್ ಸವಾರಿ, ಈಜು, ಬ್ಯಾಡ್ಮಿಂಟನ್, ಕ್ರಿಕೆಟ್, ಯೋಗ ಸೇರಿದಂತೆ ಯುವ ಜನರಲ್ಲಿ ಜನಪ್ರಿಯವಾಗಿರುವ ಕ್ರೀಡೆಗಳಿಗೆ ಸಂಬಂಧಿಸಿದ 12 ಅಂತರ್ಗತ ವರ್ಕ್ಔಟ್ ಮೋಡ್‌ಗಳನ್ನು ಒಳಗೊಂಡಿದೆ.
ಬಳಕೆದಾರರು ಸಂದರ್ಭಕ್ಕೆ ಅನುಗುಣವಾಗಿ ವಾಚ್‌ನ ಫೇಸ್ ಬದಲಿಸುವ ಅವಕಾಶವಿದೆ. ಸಂದೇಶ, ಕರೆ ಸೂಚನೆ, ಸಂಗೀತ ನಿಯಂತ್ರಣ ಮತ್ತು ಬ್ಯಾಂಡ್ ನೆರವಿನಿಂದ ಮೊಬೈಲ್ ಅನ್ನು ಪತ್ತೆ ಹಚ್ಚಬಹುದು. 100ಎಂಎಎಚ್ ಬ್ಯಾಟರಿ ಹೊಂದಿದ್ದು, 1.5 ಗಂಟೆಗಳಲ್ಲಿ ಬ್ಯಾಂಡ್ ಸಂಪೂರ್ಣವಾಗಿ ಚಾರ್ಜ್ ಆಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.