ADVERTISEMENT

ಗೇಮರ್‌ಗಳೊಂದಿಗೆ ಆಟವಾಡಿದ ಮೋದಿ: ಉದ್ಯಮದ ಬೆಳವಣಿಗೆ ಕುರಿತು ಚರ್ಚೆ

ಪಿಟಿಐ
Published 11 ಏಪ್ರಿಲ್ 2024, 11:36 IST
Last Updated 11 ಏಪ್ರಿಲ್ 2024, 11:36 IST
<div class="paragraphs"><p>ವಿಆರ್ ಸಾಧನದೊಂದಿಗೆ ಗೇಮಿಂಗ್‌ನಲ್ಲಿ ನರೇಂದ್ರ ಮೋದಿ</p></div>

ವಿಆರ್ ಸಾಧನದೊಂದಿಗೆ ಗೇಮಿಂಗ್‌ನಲ್ಲಿ ನರೇಂದ್ರ ಮೋದಿ

   

ನವದೆಹಲಿ: ‘ಭಾರತದ ಗೇಮಿಂಗ್ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಪ್ರಮುಖ ಯುವ ಗೇಮರ್‌ಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಭೇಟಿ ಮಾಡಿ, ಚರ್ಚಿಸಿದ್ದಾರೆ’ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ತಿಳಿಸಿದ್ದಾರೆ.

ಈ ಕುರಿತು ಎಕ್ಸ್ ಖಾತೆಯಲ್ಲಿ ಕಿರು ವಿಡಿಯೊ ತುಣುಕಿನೊಂದಿಗೆ ಮಾಹಿತಿ ಹಂಚಿಕೊಂಡಿರುವ ಅವರು, ‘ಗೇಮಿಂಗ್ ಕ್ಷೇತ್ರದಲ್ಲಿ ಹೊಸ ಬೆಳವಣಿಗೆ ಕುರಿತ ಚರ್ಚೆಯ ಜತೆಗೆ ಪ್ರಧಾನಿ ಮೋದಿ ಅವರ ಕೊಡುಗೆಯಿಂದ ಈ ಕ್ಷೇತ್ರದಲ್ಲಿ ಆಗಿರುವ ಬದಲಾವಣೆ, ಕೌಶಲಭರಿತ ಗೇಮರ್‌ಗಳಿಂದ ಉದ್ಯಮದ ಬೆಳವಣಿಗೆ ಮೂಲಕ ಆಗುತ್ತಿರುವ ಲಾಭದ ಕುರಿತೂ ಚರ್ಚೆ ನಡೆದಿದೆ’ ಎಂದಿದ್ದಾರೆ.

ADVERTISEMENT

‘ಜೂಜು ಮತ್ತು ಗೇಮಿಂಗ್‌ ನಡುವಿನ ವ್ಯತ್ಯಾಸ ಕುರಿತು ಇದೇ ವೇಳೆ ಚರ್ಚೆ ನಡೆಯಿತು. ಜತೆಗೆ ಈ ಕ್ಷೇತ್ರದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕುರಿತೂ ಗೇಮರ್‌ಗಳು ಪ್ರಧಾನಿಯೊಂದಿಗೆ ಮಾಹಿತಿ ಹಂಚಿಕೊಂಡರು’ ಎಂದಿದ್ದಾರೆ.

‘ಪಿಸಿ ಮತ್ತು ವಿಆರ್ ಗೇಮ್‌ಗಳನ್ನು ಆಡುವ ಭಾರತದ ಮುಂಚೂಣಿಯ ಗೇಮರ್‌ಗಳಾದ ತೀರ್ಥ್‌ ಮೆಹ್ತಾ, ಪಾಯಲ್ ಧಾರೆ, ಅನಿಮೇಶ್ ಅಗರವಾಲ್, ಅನ್ಶು ಬಿಷ್ತ್, ನಮನ್ ಮಾಥೂರ್, ಮಿಥಿಲೇಶ್ ಪಠಾಣಕರ್, ಗಣೇಶ ಗಂಗಾಧರ ಅವರು ಪ್ರಧಾನಿಯೊಂದಿಗಿನ ಸಂವಾದದಲ್ಲಿ ಪಾಲ್ಗೊಂಡಿದ್ದರು. ಈ ಸಂವಾದದ ಪೂರ್ಣ ಪಾಠ ಶೀಘ್ರದಲ್ಲಿ ಪ್ರಸಾರವಾಗಲಿದೆ’ ಎಂದು ಮಾಳವಿಯಾ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.