ಬೆಂಗಳೂರು: ಶಓಮಿ ಗ್ರೂಪ್‌ನಿಂದ ಪ್ರತ್ಯೇಕಗೊಂಡ ಬಳಿಕ, ಪೋಕೊ ಗ್ಯಾಜೆಟ್ ಮಾರುಕಟ್ಟೆಗೆ ವಿವಿಧ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.
ಈ ಬಾರಿ ಪೋಕೊ, ಭಾರತದ ಮಾರುಕಟ್ಟೆಗೆ C50 ಎಂಬ ಆಕರ್ಷಕ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ.
ಬಜೆಟ್ ದರದಲ್ಲಿ ಹೊಸ ಮಾದರಿ ಬಯಸುವವರಿಗೆ ಪೋಕೊ C50 ಉತ್ತಮ ಆಯ್ಕೆ ಎಂದು ಕಂಪನಿ ತಿಳಿಸಿದೆ.
ಹೊಸ ಪೋಕೊ C50
ನೂತನ ಸ್ಮಾರ್ಟ್‌ಫೋನ್‌ನಲ್ಲಿ 6.52 ಇಂಚಿನ ಎಚ್‌ಡಿ+ ಡಿಸ್‌ಪ್ಲೇ, ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸೆಕ್ಯುರಿಟಿ ಸೆನ್ಸರ್ ಇದೆ.
ಮೀಡಿಯಾಟೆಕ್ ಹಿಲಿಯೊ A22 ಒಕ್ಟಾ ಕೋರ್ ಪ್ರೊಸೆಸರ್, 2GB ಮತ್ತು 3GB LPDDR4X RAM ಆಯ್ಕೆ ಹಾಗೂ 32GB ಸ್ಟೋರೇಜ್ ಇದರಲ್ಲಿದೆ. ಆ್ಯಂಡ್ರಾಯ್ಡ್ 12 ಗೊ ಎಡಿಶನ್, ಹಿಂಭಾಗದಲ್ಲಿ 8 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.
ಪೋಕೊ C50 ಸ್ಮಾರ್ಟ್‌ಫೋನ್‌ನಲ್ಲಿ 5,000mAh ಬ್ಯಾಟರಿ ಮತ್ತು 10W ಚಾರ್ಜಿಂಗ್ ಬೆಂಬಲವಿದೆ ಎಂದು ಕಂಪನಿ ಹೇಳಿದೆ.
ಕಂಟ್ರಿ ಗ್ರೀನ್ ಮತ್ತು ರಾಯಲ್ ಬ್ಲೂ ಎಂಬ ಎರಡು ಬಣ್ಣಗಳಲ್ಲಿ ಹೊಸ ಫೋನ್ ದೊರೆಯಲಿದೆ.
ಬೆಲೆ ವಿವರ
2GB RAM + 32GB ಮಾದರಿಗೆ ₹6,499 ಮತ್ತು 3GB RAM + 32GB ಆವೃತ್ತಿಗೆ ₹7,299 ದರವಿದೆ ಎಂದು ಪೋಕೊ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.