ಮುಂಬೈ: ಭಾರತದಲ್ಲಿ ಪ್ರೊಮೇಟ್ ಕಂಪನಿಯು ಎಕ್ಸ್‌ವಾಚ್ ಸರಣಿಯಲ್ಲಿ ನೂತನ S19 ಸ್ಮಾರ್ಟ್‌ವಾಚ್ ಬಿಡುಗಡೆ ಮಾಡಿದೆ.
ದೊಡ್ಡ ಸ್ಕ್ರೀನ್ ಹಾಗೂ ಟಿಎಫ್‌ಟಿ ಡಿಸ್‌ಪ್ಲೆನಲ್ಲಿ S19 ಸ್ಮಾರ್ಟ್‌ವಾಚ್ ಬಿಡುಗಡೆಯಾಗಿದೆ. ಮುಖ್ಯವಾಗಿ ಫಿಟ್ನೆಸ್ ಪ್ರಿಯರು ಇಷ್ಟಪಡುವಂತಹ ವಿನ್ಯಾಸದಲ್ಲಿ ಈ ಸ್ಮಾರ್ಟ್‌ವಾಚ್ ರೂಪಿಸಲಾಗಿದೆ ಎಂದು ಪ್ರೊಮೇಟ್ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಮಿಲಿಟರಿ ಗ್ರೀನ್ ಸೇರಿದಂತೆ ವಿವಿಧ ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ₹3999 ಬೆಲೆಯ ಈ ವಾಚ್ ಅಮೆಜಾನ್ ಸೇರಿದಂತೆ ಭಾರತದ ಎಲ್ಲಾ ಮಾದರಿಯ ಮಾರುಕಟ್ಟೆಗಳಲ್ಲಿ ಖರೀದಿಗೆ ಲಭ್ಯವಿದೆ.
S19 ಸ್ಮಾರ್ಟ್‌ವಾಚ್ ಹಲವು ಪ್ರಯೋಗಿಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಿ ಮಾರುಕಟ್ಟೆಗೆ ಪ್ರವೇಶ ಪಡೆದಿದೆ. ಒಮ್ಮೆ ಚಾರ್ಜ್ ಮಾಡಿದರೆ 10 ರಿಂದ 12 ದಿನಗಳವರೆಗೆ ಬ್ಯಾಟರಿ ಬ್ಯಾಕ್‌ಆಪ್ ಇರಲಿದೆ. 1.95 ಇಂಚಿನ ದೊಡ್ಡ ಟಿಎಫ್‌ಟಿ ಡಿಸ್‌ಪ್ಲೆ ಸ್ಮಾರ್ಟ್‌ವಾಚ್ ಪ್ರಿಯರಿಗೆ ಇಷ್ಟವಾಗಲಿದೆ. ಕೇವಲ 40 ಗ್ರಾಂ ತೂಕದ ಈ ವಾಚ್ ಗಟ್ಟಿಮುಟ್ಟಾದ ಪ್ರೇಮ್ ಹೊಂದಿದೆ. ಧೂಳು ಮತ್ತು ನೀರು ನಿರೋಧಕತೆ ವೈಶಿಷ್ಟ್ಯಗಳು ಈ ವಾಚ್‌ನಲ್ಲಿವೆ.
ಸಾಹಸ ಪ್ರಿಯರು, ಚಾರಣಿಗರು, ಟ್ರಕ್ಕಿಂಗ್ ಮಾಡುವವರು, ವಿವಿಧ ಪ್ರದೇಶಗಳಿಗೆ ಪ್ರಯಾಣ ಮಾಡುವವರು ಹಾಗೂ ನಿತ್ಯ ಬಳಕೆ ಮಾಡುವವರಿಗೆ ಅನುಕೂಲವಾಗುವ ರೀತಿಯಲ್ಲಿ ಈ ಸ್ಮಾರ್ಟ್‌ವಾಚ್‌ಗಳನ್ನು ವಿನ್ಯಾಸ ಮಾಡಲಾಗಿದೆ.
ನಡಿಗೆಯ ಹೆಜ್ಜೆಗಳ ಸಂಖ್ಯೆ, ವೇಗ, ಹೃದಯದ ಬಡಿತ, ನಿದ್ರೆಯ ಸ್ಥಿತಿ-ಗತಿ, ವ್ಯಾಯಾಮದ ಅವಧಿ, ಉಸಿರಾಟದ ನಿಯಂತ್ರಣ ಸೇರಿದಂತೆ ಆರೋಗ್ಯ ಮತ್ತು ಫಿಟ್ನೆಸ್ ವೈಶಿಷ್ಟ್ಯಗಳನ್ನು ಹೊಂದಿದೆ. ಕ್ರೀಡಾ ಮೋಡ್‌ಗಳನ್ನು ಬೆಂಬಲಿಸುವ ಈ ವಾಚ್ ಫಿಟ್ನೆಸ್ ಪ್ರಿಯರು, ಮ್ಯಾಯಾಮ ಮಾಡುವವರಿಗೆ ನೈಜ-ಸಮಯದ ಟ್ರ್ಯಾಕಿಂಗ್ ಮತ್ತು ಒಳನೋಟಗಳನ್ನು ಒದಗಿಸುತ್ತದೆ.
5.1 ಬ್ಲೂಟೂತ್ ತಂತ್ರಜ್ಞಾನ, ಪರಿಣಾಮಕಾರಿ ಹ್ಯಾಂಡ್ಸ್-ಫ್ರೀ ಬ್ಲೂಟೂತ್ ಕರೆಯ ಬೆಂಬಲ, ಆ್ಯಂಡ್ರಾಯ್ಡ್, ಮತ್ತು ಐಒಎಸ್ ಸಾಧನಗಳೊಂದಿಗೆ ಸಲೀಸಾಗಿ ಸಿಂಕ್ ಮಾಡುವುದು, ಕರೆಗಳು ಮತ್ತು ಸಂದೇಶಗಳನ್ನು ಸ್ವೀಕರಿಸಲು ಸುಲಭವಾಗುವ ವಿನ್ಯಾಸದಲ್ಲಿ ಈ ವಾಚ್ ನಿರ್ಮಾಣ ಮಾಡಲಾಗಿದೆ.
ಆಕರ್ಷಕ ವಿನ್ಯಾಸ, ಅತ್ಯಾಧುನಿಕ ವೈಶಿಷ್ಟ್ಯಗಳು ಹಾಗೂ ಸದ್ಯದ ಜೀವನ ಶೈಲಿಗೆ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಿ ಬಿಡುಗಡೆ ಮಾಡಲಾಗಿದೆ. ಯುವ ಜನಾಂಗ ಸೇರಿದಂತೆ ಎಲ್ಲರಿಗೂ ಈ ವಾಚ್ ಇಷ್ಟವಾಗಲಿದೆ ಎಂಬ ವಿಶ್ವಾಸವಿದೆ ಎಂದು ಕಂಪನಿಯ ಮುಖ್ಯಸ್ಥ ಗೋಪಾಲ್ ಜಯರಾಜ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.