ಬೆಂಗಳೂರು: ಭಾರತೀಯ ಯುವಜನರನ್ನು ಕೇಂದ್ರೀಕರಿಸಿ ಸ್ಮಾರ್ಟ್ ಫೋನ್‌ಗಳನ್ನು ತಯಾರಿಸುತ್ತಿರುವ ರಿಯಲ್‌ಮಿ, ಸ್ಮಾರ್ಟ್‌ಫೋನ್, ಸ್ಮಾರ್ಟ್‌ವಾಚ್ ಹಾಗೂ ಇಯರ್‌ಬಡ್ಸ್ ಸಹಿತ ನಾಲ್ಕು ಉತ್ಪನ್ನಗಳನ್ನು ಗುರುವಾರ ಭಾರತೀಯ ಮಾರುಕಟ್ಟೆಗೆ ಘೋಷಿಸಿದೆ.
ಅತ್ಯಾಧುನಿಕ ತಾಂತ್ರಿಕತೆ ಮತ್ತು ಕೃತಕ ಬುದ್ಧಿಮತ್ತೆಯ ಬಳಕೆಯೊಂದಿಗೆ ರಿಯಲ್‌ಮಿ 13 ಪ್ರೊ, ರಿಯಲ್‌ಮಿ 13 ಪ್ರೊ ಪ್ಲಸ್ ಸ್ಮಾರ್ಟ್‌ಫೋನ್‌ಗಳು, ರಿಯಲ್‌ಮಿ ವಾಚ್ ಎಸ್-2 ಮತ್ತು ರಿಯಲ್‌ಮಿ ಬಡ್ಸ್ ಟಿ 310 ಉತ್ಪನ್ನಗಳನ್ನು ರೂಪಿಸಲಾಗಿದೆ ಎಂದು ರಿಯಲ್‌ಮಿ ಉತ್ಪಾದನಾ ವಿಭಾಗದ ವ್ಯವಸ್ಥಾಪಕ ಬಾಜುಲ್ ಕೋಚಾರ್ ಅವರು ಹೇಳಿದರು.
ರಿಯಲ್‌ಮಿ 13 ಪ್ರೊ ಸರಣಿಯ 5ಜಿ ಫೋನ್‌ಗಳು ಎರಡು ಮಾದರಿಗಳನ್ನು ಒಳಗೊಂಡಿದೆ: ರಿಯಲ್‌ಮಿ 13 ಪ್ರೊ + 5 ಜಿ ಮತ್ತು ರಿಯಲ್‌ಮಿ 13 ಪ್ರೊ 5 ಜಿ. ಇವು ಕೃತಕ ಬುದ್ಧಿಮತ್ತೆ (ಎಐ) ಜೊತೆಗೆ ಅಲ್ಟ್ರಾ ಕ್ಲಿಯರ್ ಕ್ಯಾಮೆರಾವನ್ನು ಹೊಂದಿದೆ. 512GB ಮೆಮೊರಿ ಆಯ್ಕೆಯಿದ್ದು, IP65 ಪ್ರಮಾಣಕ್ಕೆ ಅನುಗುಣವಾಗಿ ನೀರು ಮತ್ತು ಧೂಳು ಪ್ರತಿರೋಧವನ್ನು ಹೊಂದಿರುತ್ತದೆ.
ಸುಗಮವಾದ ಮಲ್ಟಿಟಾಸ್ಕಿಂಗ್ ಮತ್ತು ತಡೆರಹಿತ ಸಂಪರ್ಕಕ್ಕಾಗಿ ಅನುಕೂಲಕರ ಎಐ ಹೊಂದಿರುವ ಸ್ನ್ಯಾಪ್ ಡ್ರ್ಯಾಗನ್® 7 ಎಸ್ ಜೆನ್ 2 ಪ್ರೊಸೆಸರ್, ಗೇಮಿಂಗ್, ಅದ್ಭುತ ಫೋಟೋ ಮತ್ತು ವೀಡಿಯೊ ಸೆರೆಹಿಡಿಯುವಿಕೆ ಇತ್ಯಾದಿ ಕೆಲಸ ಕಾರ್ಯಗಳಿಗೆ ಪೂರಕವಾಗಿದೆ.
ರಿಯಲ್‌ಮಿ 13 ಪ್ರೊ + 5 ಜಿ ಫೋನ್‌ನಲ್ಲಿ ಹೈಪರ್ ಇಮೇಜ್ + ಕ್ಯಾಮೆರಾ ಸಿಸ್ಟಮ್ ಇದ್ದು, ಅವಳಿ 50 MP ಸೋನಿ ಎಐ ಕ್ಯಾಮೆರಾಗಳಿದ್ದು, ಎರಡು ಬಣ್ಣಗಳಲ್ಲಿ ಲಭ್ಯವಿದೆ: ಮೊನೆಟ್ ಗೋಲ್ಡ್ ಮತ್ತು ಎಮರಾಲ್ಡ್ ಗ್ರೀನ್ ಬಣ್ಣಗಳಲ್ಲಿ ಮತ್ತು ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿದೆ. 8GB + 256 GB ಬೆಲೆ ₹ 29,999, 12 GB + 256GB ಬೆಲೆ ₹ 31,999. ಹಾಗೂ 12GB + 512GB ಮಾದರಿಯ ಬೆಲೆ ₹ 33,999.
ಇನ್ನು ರಿಯಲ್‌ಮಿ 13 ಪ್ರೊ ಫೋನ್‌ನಲ್ಲಿ ಹೈಪರ್ ಇಮೇಜ್ + ಕ್ಯಾಮೆರಾ ಸಿಸ್ಟಮ್, 50MP ಸೋನಿ ಪ್ರಧಾನ ಸೆನ್ಸರ್ ಇದ್ದು, ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ: ಮೊನೆಟ್ ಗೋಲ್ಡ್, ಮೊನೆಟ್ ಪರ್ಪಲ್ ಮತ್ತು ಎಮರಾಲ್ಡ್ ಗ್ರೀನ್ ಹಾಗೂ ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ದೊರೆಯುತ್ತದೆ. 8GB+128GB ಬೆಲೆ ₹ 23,999, 8GB + 256 GB ಬೆಲೆ ₹ 25,999. ಮತ್ತು 12 GB+ 512 GB ಮಾದರಿಯ ಬೆಲೆ ₹ 28,999.
ರಿಯಲ್‌ಮಿ 13 ಪ್ರೊ ಫೋನ್‌ಗಳಲ್ಲಿ 6.7 ಇಂಚಿನ 120Hz ರೀಫ್ರೆಶ್ ರೇಟ್ ಇರುವ ಸ್ಕ್ರೀನ್, 8-ಕೋರ್ 64-ಬಿಟ್ ಪ್ರೊಸೆಸರ್, 5200mAh ಬ್ಯಾಟರಿ ಹೊಂದಿದ್ದು, 80W ಸೂಪರ್ ವೂಕ್ ವೇಗದ ಚಾರ್ಜಿಂಗನ್ನು ಬೆಂಬಲಿಸುತ್ತದೆ. ಎರಡೂ ಸಾಧನಗಳು ಆಗಸ್ಟ್ 6, ಮಧ್ಯಾಹ್ನ 12 ರಿಂದ ಮಾರುಕಟ್ಟೆಯಲ್ಲಿ ಲಭ್ಯವಿದೆ.
ರಿಯಲ್‌ಮಿ ವಾಚ್ ಎಸ್ 2 ಮಾದರಿಯು ಸೂಪರ್ ಎಐ ಎಂಜಿನ್ ಹೊಂದಿದ್ದು, 1.43 ಇಂಚಿನ ಅಮೋಲೆಡ್ ಡಿಸ್‌ಪ್ಲೇ ಇದೆ. ಈ ಸ್ಮಾರ್ಟ್ ವಾಚ್ IP 68 ಡಸ್ಟ್ & ವಾಟರ್ ರೆಸಿಸ್ಟೆಂಟ್ ಆಗಿದ್ದು, 20 ದಿನಗಳ ಬ್ಯಾಟರಿ ಬಾಳಿಕೆಯೊಂದಿಗೆ ಮೆಟಾಲಿಕ್ ಗ್ರೇ, ಮಿಡ್ ನೈಟ್ ಬ್ಲ್ಯಾಕ್ ಮತ್ತು ಓಷಿಯನ್ ಸಿಲ್ವರ್ ಎಂಬ ಮೂರು ಬಣ್ಣಗಳಲ್ಲಿ ದೊರೆಯಲಿದೆ. ಈ ಸ್ಮಾರ್ಟ್‌ವಾಚ್ ಬೆಲೆ ₹ 4,499. ಆಗಸ್ಟ್ 5ರ ಮಧ್ಯಾಹ್ನದಿಂದ ಮಾರಾಟಕ್ಕೆ ಲಭ್ಯವಿದೆ.
ರಿಯಲ್‌ಮಿ ಬಡ್ಸ್ ಟಿ 310 ಅಸಾಧಾರಣ ಆಡಿಯೊ ಅನುಭವಗಳನ್ನು ಒದಗಿಸುತ್ತದೆ. 46 dB ಹೈಬ್ರಿಡ್ ನಾಯ್ಸ್ ಕ್ಯಾನ್ಸಲೇಶನ್ ವೈಶಿಷ್ಟ್ಯವಿದ್ದು, 360° ಆಡಿಯೊ ಪರಿಣಾಮವನ್ನು ಒದಗಿಸುತ್ತದೆ. ರಿಯಲ್‌ಮಿ ಬಡ್ಸ್ ಟಿ 310 40 ಗಂಟೆಗಳವರೆಗೆ ಬ್ಯಾಟರಿ ಚಾರ್ಜ್ ಬಾಳಿಕೆ ಇದೆ. ಏಕಕಾಲಕ್ಕೆ ಎರಡು ಸಾಧನಕ್ಕೆ ಸಂಪರ್ಕಿಸಬಹುದಾಗಿದೆ. ಮೊನೆಟ್ ಪರ್ಪಲ್, ವೈಬ್ರೆಂಟ್ ಬ್ಲ್ಯಾಕ್ ಮತ್ತು ಅಗೈಲ್ ವೈಟ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿದ್ದು, ಈ ಇಯರ್ ಬಡ್‌ಗಳ ಬೆಲೆ ₹ 2199. ಆಗಸ್ಟ್ 5ರ ಮಧ್ಯಾಹ್ನದಿಂದ ಮಾರುಕಟ್ಟೆಯಲ್ಲಿ ದೊರೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.