ನವದೆಹಲಿ: ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆಗಿರುವ ರಿಯಲ್‌ಮಿ, ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್ 5ಜಿ ಬಿಡುಗಡೆ ಮಾಡಿದೆ. ಸಾಟಿಯಿಲ್ಲದ ವೇಗದೊಂದಿಗೆ ರಿಯಲ್‌ಮಿ 13 ಸೀರಿಸ್ 5ಜಿ ಉದ್ಯಮದಲ್ಲಿ ಕಾರ್ಯಕ್ಷಮತೆಯ ಮಾನದಂಡಗಳನ್ನು ಮರುವ್ಯಾಖ್ಯಾನಿಸಲು ಸಜ್ಜಾಗಿದೆ.
ರಿಯಲ್‌ಮಿ 13 ಪ್ಲಸ್ ಹಾಗೂ ರಿಯಲ್‌ಮಿ 13 ಮಾದರಿಗಳ ಬಿಡುಗಡೆ ಬಗ್ಗೆ ಮಾತನಾಡಿದ ಮೀಡಿಯಾಟೆಕ್‌ನ ಮಾರ್ಕೆಟಿಂಗ್ ಮತ್ತು ಕಮ್ಯುನಿಕೇಷನ್ಸ್ ನಿರ್ದೇಶಕ ಅನುಜ್ ಸಿದ್ಧಾರ್ಥ್, 'ಮೀಡಿಯಾಟೆಕ್ ಡೈಮೆನ್ಸಿಟಿ 7300 ಎನರ್ಜಿ ಫ್ಲ್ಯಾಗ್‌ಶಿಪ್-ಗ್ರೇಡ್ ಚಿಪ್‌ಸೆಟ್ ಆಗಿದೆ. ಶಕ್ತಿಶಾಲಿಯಾಗಿ ಮತ್ತು ದಕ್ಷತೆಯಿಂದ ಕೆಲಸ ಮಾಡಲು ಇದು ನೆರವಾಗುತ್ತದೆ' ಎಂದು ಹೇಳಿದರು.
ಸುಗಮ ಮಲ್ಟಿಟಾಸ್ಕಿಂಗ್‌ಗಾಗಿ 26GBವರೆಗೆ RAM ವಿಸ್ತರಿಸುವ ಅವಕಾಶವಿದೆ. ಗೇಮಿಂಗ್‌ಗೆ ಹೆಚ್ಚಿನ ಬಲ ನೀಡುವುದಕ್ಕಾಗಿ ಜಿಟಿ ಮೋಡ್ ಇದರಲ್ಲಿದೆ. 80W ಅಲ್ಟ್ರಾ ಚಾರ್ಜ್ ವೈಶಿಷ್ಟ್ಯದೊಂದಿಗೆ, ಇದು ಕೇವಲ ಐದು ನಿಮಿಷಗಳ ಚಾರ್ಜಿಂಗ್‌ನಿಂದ ಒಂದು ಗಂಟೆ ಗೇಮ್ ಆಡಬಹುದಾಗಿದೆ. ಹೆಚ್ಚು ಬಳಕೆಯ ಸಮಯದಲ್ಲಿ ಸ್ಮಾರ್ಟ್ ಫೋನ್ ಬಿಸಿಯಾಗದಂತೆ ತಡೆಯಲು ಸ್ಟೇನ್‌ಲೆಸ್ ಸ್ಟೀಲ್ ವೇಪರ್ ಕೂಲಿಂಗ್ ಸಿಸ್ಟಮ್ ಇದರಲ್ಲಿದೆ.
ರಿಯಲ್‌ಮಿ 13 ಪ್ಲಸ್ 5ಜಿ LYT-600 ಕ್ಯಾಮೆರಾ ಹೊಂದಿದೆ. ಅಲ್ಟ್ರಾ-ಸ್ಲಿಮ್ ಎಂದರೆ 7.6mm ದಪ್ಪವಿದ್ದು, ಮೂರು ಅದ್ಭುತ ಬಣ್ಣಗಳಲ್ಲಿ ಬರುತ್ತದೆ: ವಿಕ್ಟರಿ ಗೋಲ್ಡ್, ಸ್ಪೀಡ್ ಗ್ರೀನ್ ಮತ್ತು ಡಾರ್ಕ್ ಪರ್ಪಲ್
ಸ್ಟೊರೇಜ್, ಬೆಲೆ:
8GB+128GB, ಬೆಲೆ: ₹22,999
8GB+256GB, ಬೆಲೆ ₹24,999
12GB+256GB, ಬೆಲೆ: ₹26,999.
ಇನ್ನು, ರಿಯಲ್‌ಮಿ 13 5ಜಿ ಮಾದರಿಯಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 6300 5ಜಿ ಚಿಪ್‌ಸೆಟ್ ಇದ್ದು, ಸ್ಟೇನ್‌ಲೆಸ್ ಸ್ಟೀಲ್ ವೇಪರ್ ಕೂಲಿಂಗ್ ಸಿಸ್ಟಮ್ ಇದೆ. 45W ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ, 120Hz ಐ ಕಂಫರ್ಟ್ ಡಿಸ್‌ಪ್ಲೇ ಇದರಲ್ಲಿದ್ದು ಗೇಮಿಂಗ್ ಮತ್ತು ಮಲ್ಟಿಮೀಡಿಯಾ ಬಳಕೆಗೆ ಅನುಕೂಲವಾಗಿದೆ.
ಇದರಲ್ಲಿ 50MP OIS ಕ್ಯಾಮೆರಾ ಇದ್ದು, ಎರಡು ಆಕರ್ಷಕ ಬಣ್ಣಗಳಲ್ಲಿ ಬರುತ್ತದೆ. ಸ್ಪೀಡ್ ಗ್ರೀನ್ ಮತ್ತು ಡಾರ್ಕ್ ಪರ್ಪಲ್.
ಸ್ಟೋರೇಜ್, ಬೆಲೆ:
8GB+128GB, ಬೆಲೆ: ₹17,999
8GB+256GB, ಬೆಲೆ: ₹19,999
ಸೆಪ್ಟೆಂಬರ್ 5 ರವರೆಗೆ ರಿಯಲ್‌ಮಿ ಡಾಟ್ ಕಾಂ, ಫ್ಲಿಪ್ ಕಾರ್ಟ್ ಮತ್ತು ಮೈನ್‌ಲೈನ್ ಚಾನೆಲ್‌ಗಳಲ್ಲಿ ರಿಯಲ್‌ಮಿ 13 ಸೀರಿಸ್ 5ಜಿ ಅನ್ನು ಮುಂಚಿತವಾಗಿ ಕಾಯ್ದಿರಿಸಬಹುದು ಮತ್ತು ₹3000ಗಳವರೆಗೆ ಕೊಡುಗೆಗಳನ್ನು ಪಡೆಯಬಹುದು.
ಇದೇ ವೇಳೆ, ರಿಯಲ್‌ಮಿ ಬಡ್ಸ್ ಟಿ 01 ಕೂಡ ಬಿಡುಗಡೆಯಾಗಿದ್ದು, ಇದು 13 ಎಂಎಂ ಡೈನಾಮಿಕ್ ಬಾಸ್ ಡ್ರೈವ್‌ನಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಒಟ್ಟು 28 ಗಂಟೆಗಳ ಪ್ಲೇಬ್ಯಾಕ್ ಸಮಯದ ಬ್ಯಾಟರಿ ಇದೆ. ಕಪ್ಪು ಮತ್ತು ಬಿಳಿ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿರುವ ಈ ಬಡ್ಸ್ ಬೆಲೆ ₹1299.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.