ADVERTISEMENT

ಇಂದಿನಿಂದ ‘ರಿಯಲ್‌ಮಿ ಎಕ್ಸ್‌’ ಲಭ್ಯ: ಈ ಫೋನ್‌ನಲ್ಲಿ ಏನೆಲ್ಲಾ ಇದೆ?

​ಪ್ರಜಾವಾಣಿ ವಾರ್ತೆ
Published 15 ಜುಲೈ 2019, 7:14 IST
Last Updated 15 ಜುಲೈ 2019, 7:14 IST
   

ನವದೆಹಲಿ: ರಿಯಲ್‌ಮಿ ಮೊಬೈಲ್ ಕಂಪನಿಯುತನ್ನ ಪ್ರಮುಖ ಉತ್ಪನ್ನ ‘ರಿಯಲ್‌ಮಿ ಎಕ್ಸ್‌’ ಮೊಬೈಲ್‌ಗಳನ್ನು ಭಾರತದಲ್ಲಿ ಇಂದು ಮಧ್ಯಾಹ್ನ 12.30ರಿಂದ ಭಾರತದಲ್ಲಿ ಮಾರಾಟಕ್ಕೆ ಲಭ್ಯ ಎಂದು ಘೋಷಿಸಿತ್ತು. ಆದರೆ 12.40 ಆದರೂ ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಆರಂಭವಾಗಿರಲಿಲ್ಲ. ಫೋನ್ ಖರೀದಿಸಲು ಕಾಯುತ್ತಿದ್ದ ಅಭಿಮಾನಿಗಳು ನಿರೀಕ್ಷೆ ಮುಂದುವರಿಸಿದ್ದಾರೆ.

‘ರಿಯಲ್‌ಮಿ ಎಕ್ಸ್‌’ ಮೊಬೈಲನ್ನು ಕಂಪನಿಯು ‘ಪ್ರೀಮಿಯಂ’ ಎಂದು ಬಣ್ಣಿಸಿದೆ.‘ಎಂಐಕೆ 20’ ಜೊತೆಗೆ ಮಾರುಕಟ್ಟೆಯಲ್ಲಿ ಸ್ಪರ್ಧಿಸಲಿದೆ ಎನ್ನುವ ನಿರೀಕ್ಷೆಯನ್ನು ಹೊಂದಿದೆ. ಮೇ ತಿಂಗಳಲ್ಲಿ ರಿಯಲ್‌ಮಿ ಎಕ್ಸ್‌ ಚೈನಾದಲ್ಲಿ ಬಿಡುಗಡೆಯಾಗಿತ್ತು. ಆನ್‌ಲೈನ್ ಮಳಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಈ ಮೊಬೈಲ್ ಫೋನ್ ಸಿಗಲಿದೆ.

ಫೋನ್ ವೈಶಿಷ್ಟ್ಯ

ADVERTISEMENT

ಪರದೆ ಗಾತ್ರ: 6.53 ಇಂಚು,ಕ್ಯಾಮೆರ: 48 mp + 16 mp,ಬ್ಯಾಟರಿ: 3,765 ಎಂಎಚ್‌,ಒಎಸ್‌: ಆಂಡ್ರಾಯ್ಡ್‌ 9.0 ಪಿ,ಬೆಲೆ: 4 ಜಿಬಿರ್‍ಯಾಮ್,64 ಜಿಬಿ ರೋಮ್ ಇರುವ ಮೊಬೈಲ್‌ಗೆ₹16,400ಮತ್ತು 8 ಜಿಬಿ ರ್‍ಯಾಮ್128 ಜಿಬಿ ರೋಮ್ ಇರುವ ಮೊಬೈಲ್‌ಗೆ₹18,500.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.