ADVERTISEMENT

4ಜಿ ಫೋನ್‌ ಬಿಡುಗಡೆ: ₹999ಕ್ಕೆ ಜಿಯೊ ಭಾರತ್ ಫೋನ್

​ಪ್ರಜಾವಾಣಿ ವಾರ್ತೆ
Published 3 ಜುಲೈ 2023, 23:35 IST
Last Updated 3 ಜುಲೈ 2023, 23:35 IST
ರಿಲಯನ್ಸ್ ಜಿಯೊ (ಸಾಂದರ್ಭಿಕ ಚಿತ್ರ)
ರಿಲಯನ್ಸ್ ಜಿಯೊ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ರಿಲಯನ್ಸ್ ಜಿಯೊ ಕಂಪನಿಯು ಇಂಟರ್ನೆಟ್ ಸಂಪರ್ಕ ಇರುವ ‘ಜಿಯೊ ಭಾರತ್’ ಹೆಸರಿನ 4ಜಿ ಫೋನ್‌ ಬಿಡುಗಡೆ ಮಾಡಿದೆ. ಇದರ ಬೆಲೆ ₹999. ಕಂಪನಿಯು ಇದೇ 7ರಿಂದ 10 ಲಕ್ಷ ಇಂತಹ ಫೋನ್‌ಗಳ ಪ್ರಯೋಗಾರ್ಥ ಪರೀಕ್ಷೆ ಆರಂಭಿಸುವುದಾಗಿ ತಿಳಿಸಿದೆ.

‘ಇಂಟರ್ನೆಟ್ ಸೌಲಭ್ಯ ಇರುವ ಫೋನ್‌ ಇಷ್ಟು ಕಡಿಮೆ ಬೆಲೆಗೆ ಲಭ್ಯವಾಗುತ್ತಿರುವುದು ಇದೇ ಮೊದಲು’ ಎಂದು ಕಂಪನಿ ಹೇಳಿದೆ. ಈ ಫೋನ್‌ನಲ್ಲಿ ಜಿಯೊ ಪೇ ಮೂಲಕ ಯುಪಿಐ ಸೌಲಭ್ಯ ಬಳಸಬಹುದು. ಜಿಯೊ ಸಿನಿಮಾದಲ್ಲಿನ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.

ಭಾರತದಲ್ಲಿ 25 ಕೋಟಿ ಜನ ಈಗಲೂ ಫೀಚರ್ ಫೋನ್ ಬಳಸುತ್ತಿದ್ದಾರೆ. ಈ ಫೋನ್‌ಗಳಲ್ಲಿ ಇಂಟರ್ನೆಟ್ ಸೌಲಭ್ಯ ಇಲ್ಲ. ಜಿಯೊ ಭಾರತ್‌ ಫೋನ್‌ ಮೂಲಕ ಉತ್ತಮ ಗುಣಮಟ್ಟದ ಹಾಗೂ ಕೈಗೆಟಕುವ ದರದ ಇಂಟರ್ನೆಟ್ ಸಂಪರ್ಕವು ಪ್ರತಿ ಭಾರತೀಯನಿಗೆ ಸಿಗಲಿದೆ ಎಂದು ಕಂಪನಿ ಹೇಳಿದೆ.

ADVERTISEMENT

ಜಿಯೊ ಭಾರತ್‌ ಫೋನ್‌ಗೆ ನಿಗದಿ ಮಾಡಿರುವ ಶುಲ್ಕವು ಇತರ ಕಂಪನಿಗಳ ಫೀಚರ್ ಫೋನ್‌ಗಿಂತ ಶೇ 30ರವರೆಗೆ ಕಡಿಮೆ ಇದೆ. 7 ಪಟ್ಟು ಹೆಚ್ಚು ಡೇಟಾ ನೀಡುತ್ತದೆ ಎಂದು ಜಿಯೊ ಹೇಳಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.