ಬೆಂಗಳೂರು: ಕಡಿಮೆ ದರಕ್ಕೆ ಉತ್ತಮ ಫೀಚರ್ ಲಭ್ಯವಿರುವ 5G ಸ್ಮಾರ್ಟ್‌ಫೋನ್ ಅನ್ನು ಒದಗಿಸಲು ಗೂಗಲ್ ಜತೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ರಿಲಯನ್ಸ್ ಹೇಳಿದೆ.
ರಿಲಯನ್ಸ್ ಜಿಯೊ ಷೇರು ಹೂಡಿಕೆದಾರರ ವಾರ್ಷಿಕ ಸಮಾವೇಶದಲ್ಲಿ ಉದ್ಯಮಿ ಮುಕೇಶ್ ಅಂಬಾನಿ ಈ ಘೋಷಣೆ ಮಾಡಿದ್ದಾರೆ.
ಕಳೆದ ವರ್ಷ ಗೂಗಲ್ ಸಹಯೋಗದಲ್ಲಿ ರಿಲಯನ್ಸ್ ಜಿಯೊ 4G ಸ್ಮಾರ್ಟ್‌ಫೋನ್ ಪರಿಚಯಿಸಿತ್ತು. ಈ ಬಾರಿ, 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು, ರಿಲಯನ್ಸ್ ಜಿಯೊ ತಂಡ ಗೂಗಲ್ ಜತೆ ಕಾರ್ಯನಿರತವಾಗಿದೆ ಎಂದು ಸಂಸ್ಥೆ ಹೇಳಿದೆ.
ರಿಲಯನ್ಸ್ ಯಾವಾಗ 5G ಜಿಯೊ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ ಎನ್ನುವ ಬಗ್ಗೆ ಮಾಹಿತಿ ಬಹಿರಂಗಪಡಿಸಿಲ್ಲ.
ಜತೆಗೆ, ದೇಶದಲ್ಲಿ 5G ಸೇವೆ ಅಭಿವೃದ್ಧಿಪಡಿಸುವುದು ಮತ್ತು ಹೊಸ ಸಾಧ್ಯತೆಗಳನ್ನು ಜನರಿಗೆ ಪರಿಚಯಿಸುವ ನಿಟ್ಟಿನಲ್ಲಿ, ಮೆಟಾ, ಮೈಕ್ರೋಸಾಫ್ಟ್, ಇಂಟೆಲ್ ಮತ್ತು ಕ್ವಾಲ್ಕಂ ಕಂಪನಿಗಳ ಜತೆ ಜಿಯೊ ಕಾರ್ಯನಿರ್ವಹಿಸುತ್ತಿದೆ ಎಂದು ಮುಕೇಶ್ ಹೇಳಿದ್ದಾರೆ.
ಮೆಟಾ ಒಡೆತನದ ವಾಟ್ಸ್‌ಆ್ಯಪ್ ಮೂಲಕ ಜಿಯೊಮಾರ್ಟ್ ಶಾಪಿಂಗ್ ವ್ಯವಸ್ಥೆಯನ್ನು ಬಳಕೆದಾರರಿಗೆ ಒದಗಿಸಲಾಗುತ್ತದೆ ಎಂದು ರಿಲಯನ್ಸ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.