ಬೆಂಗಳೂರು: ರಿಲಯನ್ಸ್ ಸಮೂಹದ ಜಿಯೊ, ದೇಶದ ಮಾರುಕಟ್ಟೆಗೆ ಹೊಸ ಲ್ಯಾಪ್‌ಟಾಪ್ ಪರಿಚಯಿಸಲು ಮುಂದಾಗಿದೆ.
‘ಜಿಯೊಬುಕ್’ ಹೆಸರಿನ ಲ್ಯಾಪ್‌ಟಾಪ್, ದೇಶದಲ್ಲಿ ವಿವಿಧ ಉತ್ಪನ್ನಗಳಿಗೆ ಪ್ರಮಾಣೀಕರಣ ನೀಡುವ ‘ಬ್ಯೂರೋ ಆಫ್ ಸ್ಟಾಂಡರ್ಡ್ಸ್’ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿದೆ.
ಹೊಸ ರಿಲಯನ್ಸ್ ಜಿಯೊಬುಕ್ ಲ್ಯಾಪ್‌ಟಾಪ್ ಮೂರು ವಿವಿಧ ಆವೃತ್ತಿಗಳಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.
ತಾಂತ್ರಿಕ ವೈಶಿಷ್ಟ್ಯ (ನಿರೀಕ್ಷಿತ)
ಜಿಯೊಬುಕ್, ಸ್ನ್ಯಾಪ್‌ಡ್ರ್ಯಾಗನ್ 665 ಪ್ರೊಸೆಸರ್, 4 GB RAM ಮತ್ತು 64 GB ಸ್ಟೋರೇಜ್ ಹೊಂದಿರುವ ಸಾಧ್ಯತೆಯಿದೆ.
ಬಜೆಟ್ ದರಕ್ಕೆ ಲಭ್ಯವಾಗುವಂತೆ, ಜಿಯೊಬುಕ್ ದೇಶದ ಮಾರುಕಟ್ಟೆಯಲ್ಲಿ ದೊರೆಯುವ ನಿರೀಕ್ಷೆಯಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.