ADVERTISEMENT

ಸ್ಯಾಮ್‌ಸಂಗ್ ಹೊಸ ಎ ಸೀರೀಸ್ ಬಿಡುಗಡೆ, 5ಜಿ ಫೋನ್‌ನಿಂದ ಶೇ.75 ವಹಿವಾಟು ನಿರೀಕ್ಷೆ

ಪಿಟಿಐ
Published 21 ಜನವರಿ 2023, 13:22 IST
Last Updated 21 ಜನವರಿ 2023, 13:22 IST
ಚಿತ್ರ ಕೃಪೆ: ಕೆವಿಎನ್ ರೋಹಿತ್
ಚಿತ್ರ ಕೃಪೆ: ಕೆವಿಎನ್ ರೋಹಿತ್   

ನವದೆಹಲಿ: ದೇಶದ ಮುಂಚೂಣಿಯ ಸ್ಮಾರ್ಟ್‌ಫೋನ್ ತಯಾರಕ ಸಂಸ್ಥೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ ಸಿರೀಸ್‌ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆಗೊಳಿಸಿದ್ದು, ಈ ವರ್ಷ 5ಜಿ ಸ್ಮಾರ್ಟ್‌ಫೋನ್ ಮಾರಾಟದಿಂದ ಶೇ 75ರಷ್ಟು ವಹಿವಾಟು ನಿರೀಕ್ಷೆಯಲ್ಲಿದೆ.

2022ರ ಜನವರಿ-ನವೆಂಬರ್ ನಡುವೆ ಸಂಸ್ಥೆಯ ಮೊಬೈಲ್ ವಹಿವಾಟು ಶೇ. 22ರಷ್ಟು ಹೆಚ್ಚಾಗಿದೆ. ದೇಶದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ವಹಿವಾಟು ಕುದುರಿಸಿಕೊಳ್ಳುವ ಗುರಿ ಹೊಂದಲಾಗಿದೆ ಎಂದು ಸ್ಯಾಮ್‌ಸಂಗ್ ಇಂಡಿಯಾದ ಮೊಬೈಲ್ ವ್ಯವಹಾರದ ಹಿರಿಯ ಉಪಾಧ್ಯಕ್ಷ ರಾಜು ಪುಲ್ಲನ್ ತಿಳಿಸಿದ್ದಾರೆ.

2023ರಲ್ಲಿ 5ಜಿಗೆ ಆದ್ಯತೆ ನೀಡುವುದಾಗಿ ಅವರು ತಿಳಿಸಿದರು. ಕಳೆದ ನಾಲ್ಕು ವರ್ಷಗಳಲ್ಲಿ 5ಜಿ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್ ಮುಂಚೂಣಿಯಲ್ಲಿದೆ. ಈ ವರ್ಷ 1.6 ಪಟ್ಟು ವಿಸ್ತರಿಸಲಿದ್ದೇವೆ. ಜನವರಿ ಆರಂಭದಲ್ಲೇ ಎ ಸಿರೀಸ್ ಸ್ಮಾರ್ಟ್‌ಫೋನ್ ಬಿಡುಗಡೆಗೊಳಿಸಿದ್ದೇವೆ. ಈ ಮೂಲಕ ಉತ್ತಮ ಆರಂಭವನ್ನು ಪಡೆದಿದ್ದೇವೆ ಎಂದು ಹೇಳಿದರು.

ADVERTISEMENT

ಗ್ಯಾಲಕ್ಸಿ ಎ14 5ಜಿ ಮತ್ತು ಗ್ಯಾಲಕ್ಸಿ ಎ23 5ಜಿ ಸ್ಮಾರ್ಟ್‌ಫೋನ್‌ಗಳ ಬಿಡುಗಡೆಯೊಂದಿಗೆ ಶೇಕಡಾ 75ರಷ್ಟು ವಹಿವಾಟು ನಿರೀಕ್ಷೆಯಲ್ಲಿರುವುದಾಗಿ ಹೇಳಿದರು.

ವಿಶ್ಲೇಷಕರ ಪ್ರಕಾರ, ಕಳೆದ ವರ್ಷ 5ಜಿಗಾಗಿ ಉದ್ಯಮದ ಕೊಡುಗೆ ಶೇ. 56ರಷ್ಟಾಗಿತ್ತು. ಮತ್ತೊಂದೆಡೆ 2022ರಲ್ಲಿ ಸ್ಯಾಮ್‌ಸಂಗ್ ಇಂಡಿಯಾದ ಮೊಬೈಲ್ ವಹಿವಾಟಿನಲ್ಲಿ 5ಜಿ ಪಾಲು ಶೇ. 61ರಷ್ಟಾಗಿತ್ತು.

ಬೆಲೆ ಎಷ್ಟು?
ಗ್ಯಾಲಕ್ಸಿ ಎ14 5ಜಿ: ₹14,999
ಗ್ಯಾಲಕ್ಸಿ ಎ23 5ಜಿ: ₹20,990

ವಿಶಿಷ್ಟತೆ:
6.6 ಇಂಚಿನ ಎಚ್‌ಡಿ ಡಿಸ್‌ಪ್ಲೇ,
50 ಮೆಗಾಪಿಕ್ಸೆಲ್ ಕ್ಯಾಮೆರಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.