ನವದೆಹಲಿ: ಭಾರತದ ಮುಂಚೂಣಿ ಸ್ಮಾರ್ಟ್‌ಫೋನ್ ಕಂಪನಿ ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಸರಣಿಯ ಎರಡು ಹೊಸ ಸ್ಮಾರ್ಟ್ಫೋನ್ಗಳನ್ನು ಇಂದು (ಬುಧವಾರ) ಬಿಡುಗಡೆ ಮಾಡಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ ಸರಣಿಯಲ್ಲಿ A34 5ಜಿ ಮತ್ತು A54 5ಜಿ ಎಂಬ ಎರಡು ಹೊಸ ಮಾದರಿಗಳು ಮಾರುಕಟ್ಟೆಗೆ ಲಗ್ಗೆ ಇರಿಸಿವೆ. A34 5G A54 5G ಸ್ಮಾರ್ಟ್‌ಫೋನ್‌ನಲ್ಲಿ ನೈಟೋಗ್ರಫಿ ವೈಶಿಷ್ಟ್ಯವನ್ನು ಕಂಪನಿ ಪರಿಚಯಿಸುತ್ತಿದೆ.
ಗ್ಯಾಲಕ್ಸಿ A34 ವೈಶಿಷ್ಟತೆಗಳು...
ಗ್ಯಾಲಕ್ಸಿ A34 ಸ್ಮಾರ್ಟ್‌ಫೋನ್‌ನಲ್ಲಿ 6.6 ಇಂಚಿನ ಎಚ್‌ಡಿ+ ಡಿಸ್‌ಪ್ಲೇ, ಮೀಡಿಯಾಟೆಕ್ ಡೈಮೆನ್ಸಿಟಿ 1080 ಚಿಪ್‌ಸೆಟ್ ಅನ್ನು ಹೊಂದಿದೆ. ಜತೆಗೆ ಗ್ರಾಫಿಕ್ಸ್ ಬೆಂಬಲವೂ ಹೊಂದಿದೆ. ಅಲ್ಲದೆ, 6GB/8GB RAM ಮತ್ತು 128GB / 256GB ಸ್ಟೋರೇಜ್ ಆಯ್ಕೆಗಳು ಕೂಡ ದೊರೆಯಲಿದೆ.
ಹಿಂಭಾಗದಲ್ಲಿ 13 ಮೆಗಾಪಿಕ್ಸೆಲ್ ಕ್ಯಾಮೆರಾ ಹಾಗೂ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, 5,000mAh ಬ್ಯಾಟರಿ ಇದೆ ಎಂದು ಕಂಪನಿ ಹೇಳಿದೆ.
ಗ್ಯಾಲಕ್ಸಿ A54 ವೈಶಿಷ್ಟತೆಗಳು...
ನೂತನ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ನಲ್ಲಿ 6.4 ಇಂಚಿನ ಎಚ್‌ಡಿ ಡಿಸ್‌ಪ್ಲೇ, Exynos 1380 ಚಿಪ್‌ಸೆಟ್ ಅಳವಡಿಸಲಾಗಿದೆ. ಗ್ರಾಫಿಕ್ಸ್ ಬೆಂಬಲವೂ ಹೊಂದಿದೆ.
6GB /8GB RAM ಮತ್ತು 128GB / 256GB ಸ್ಟೋರೇಜ್ ಬೆಂಬಲ ಇದ್ದು, ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಸೆನ್ಸರ್ ಜತೆಗೆ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ, 5,000mAh ಬ್ಯಾಟರಿ ಬೆಂಬಲ ಹೊಂದಿದೆ ಎಂದು ಸ್ಯಾಮ್‌ಸಂಗ್ ತಿಳಿಸಿದೆ.
ಬೆಲೆ ಮತ್ತು ಲಭ್ಯತೆ: ಬಿಳಿ, ನೇರಳೆ, ಲೈಮ್, ಗ್ರ್ಯಾಫೈಟ್ ಎಂಬ ನಾಲ್ಕು ಬಣ್ಣಗಳಲ್ಲಿ ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ A34, A54 ಲಭ್ಯವಿದೆ.
ಗ್ಯಾಲಕ್ಸಿ A34 ₹35,000 ರಷ್ಟಿದರೆ, ಗ್ಯಾಲಕ್ಸಿ A54 ಬೆಲೆ ₹45,000 ರಷ್ಟಿದೆ. ಭಾರತದ ಮಾರುಕಟ್ಟೆಯಲ್ಲಿ ಈ ಎರಡೂ ಫೋನ್‌ಗಳು ನಾಳೆಯಿಂದ (ಮಾ.16) ದೊರೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.