ADVERTISEMENT

ಸ್ಯಾಮ್‌ಸಂಗ್‌ Galaxy F54 5G ಹೊಸ ಸ್ಮಾರ್ಟ್‌ಫೋನ್ ಆನಾವರಣ: ಬೆಲೆ ಎಷ್ಟು? ವಿಶೇಷ ಏನು?

ಸ್ಯಾಮ್‌ಸಂಗ್‌ F ಸರಣಿಯ ಪ್ರೀಮಿಯಂ ಸ್ಮಾರ್ಟ್ ಫೋನ್‌ ಇಂದು ಅನಾವರಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜೂನ್ 2023, 11:15 IST
Last Updated 6 ಜೂನ್ 2023, 11:15 IST
ಸ್ಯಾಮ್‌ಸಂಗ್‌ ಇಂಡಿಯಾ ಎಂ.ಎಕ್ಸ್‌ ಡಿವಿಷನ್‌ನ ಹಿರಿಯ ಉಪಾಧ್ಯಕ್ಷ ರಾಜು ಪುಲ್ಲಾನ್ ಹಾಗೂ ಫ್ಲಿಪ್‌ಕಾರ್ಟ್‌ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಅಜಯ್ ವೀರ್ ಯಾದವ್ Galaxy F54 5G ಅನಾವರಣ ಮಾಡಿದರು
ಸ್ಯಾಮ್‌ಸಂಗ್‌ ಇಂಡಿಯಾ ಎಂ.ಎಕ್ಸ್‌ ಡಿವಿಷನ್‌ನ ಹಿರಿಯ ಉಪಾಧ್ಯಕ್ಷ ರಾಜು ಪುಲ್ಲಾನ್ ಹಾಗೂ ಫ್ಲಿಪ್‌ಕಾರ್ಟ್‌ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಅಜಯ್ ವೀರ್ ಯಾದವ್ Galaxy F54 5G ಅನಾವರಣ ಮಾಡಿದರು   

ಗುರುಗ್ರಾಮ: ಜನಪ್ರಿಯ ‘ಸ್ಯಾಮ್‌ಸಂಗ್‌’ ಕಂಪನಿ ತನ್ನ ನೂತನ Galaxy F54 5G ಸ್ಮಾರ್ಟ್‌ಫೋನ್‌ ಅನ್ನು ಇಂದು (ಜೂನ್‌ 6) ಅನಾವರಣಗೊಳಿಸಿದೆ.

ಸ್ಯಾಮ್‌ಸಂಗ್‌ F ಸರಣಿಯ ಪ್ರೀಮಿಯಂ ಸ್ಮಾರ್ಟ್ ಫೋನ್‌ ಆಗಿರುವ Galaxy F54 5Gಯ ಪ್ರಮುಖ ಆಕರ್ಷಣೆ, ಅಲುಗಾಡದ 108 ಎಂಪಿ ಫ್ರಂಟ್‌ ಕ್ಯಾಮೆರಾ, 6,000mAh ಬ್ಯಾಟರಿ, ಅಮೋಲ್ಡ್‌ (Super AMOLED+ 120Hz) ಡಿಸ್‌ಪ್ಲೇ.

ಈ ನೂತನ ಡಿವೈಸ್‌ ಅನ್ನು ಮಂಗಳವಾರ ಗುರುಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಸ್ಯಾಮ್‌ಸಂಗ್‌ ಇಂಡಿಯಾ ಎಂ.ಎಕ್ಸ್‌ ಡಿವಿಷನ್‌ನ ಹಿರಿಯ ಉಪಾಧ್ಯಕ್ಷ ರಾಜು ಪುಲ್ಲಾನ್, ‘ನಮ್ಮ ಗ್ರಾಹಕರು ಶಕ್ತಿಶಾಲಿ ಡಿವೈಸ್‌ ಅನ್ನು ಹೊಂದುವುದು ನಮಗೆ ಮುಖ್ಯವಾಗುತ್ತದೆ. ಆ ಭರವಸೆಗಳನ್ನು ಈ ಹೊಸ Galaxy F54 5G ಪರಿಪೂರ್ಣಗೊಳಿಸುತ್ತದೆ. ಈ ಮೂಲಕ ಗ್ರಾಹಕರಿಗೆ ನಾವು ಕ್ರಾಂತಿಕಾರಕ ಅನುಭವ ನೀಡಲಿದ್ದೇವೆ’ ಎಂದು ಹೇಳಿದರು.

ADVERTISEMENT

ಫ್ಲಿಪ್‌ಕಾರ್ಟ್‌ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಅಜಯ್ ವೀರ್ ಯಾದವ್ ಅವರು ಮಾತನಾಡಿ, ‘ಉನ್ನತೀಕರಿಸಿದ ಮೊಬೈಲ್ ತಂತ್ರಜ್ಞಾನಗಳು ಇಂದು ಪ್ರತಿಯೊಬ್ಬರಿಗೂ ಉಪಯುಕ್ತ ಹಾಗೂ ಅವಶ್ಯಕ. ಇದಕ್ಕೆ Galaxy F54 5G ಒಂದು ಮುಖ್ಯ ಉದಾಹರಣೆ ಆಗಿ ತೋರುತ್ತದೆ. ಫ್ಲಿಪ್‌ಕಾರ್ಟ್‌ನಲ್ಲಿ ಆಕರ್ಷಕ ಕೊಡುಗೆಗಳೊಂದಿಗೆ ಇಂದಿನಿಂದ ಮಾರಾಟಕ್ಕೆ ಲಭ್ಯವಿದೆ’ ಎಂದು ಹೇಳಿದರು.

ಈ ಮೊಬೈಲ್‌ನಲ್ಲಿ ಫೋಟೊ ಪ್ರಿಯರಿಗೆ ಉತ್ತಮ ಆಯ್ಕೆಯಾಗಿರುವ ಈ ಫೋನ್‌ನಲ್ಲಿ ನೈಟೋಗ್ರಫಿ ಫೀಚರ್ ಇರುವುದು ವಿಶೇಷ. ಮಂದ ಬೆಳಕಿನಲ್ಲಿಯೂ ಗುಣಮಟ್ಟದ ಫೋಟೊಗ್ರಫಿ ಇದರಿಂದ ಸಾಧ್ಯ ಎಂದು ಕಂಪನಿ ಹೇಳಿದೆ.

ಕ್ಯಾಮೆರಾ ನೋ ಶೇಕ್‌ ಫೀಚರ್ ಇರುವುದರಿಂದ ಉತ್ತಮ ಗುಣಮಟ್ಟದ ಫೋಟೊ ಹಾಗೂ ವಿಡಿಯೊ ಸಾಧ್ಯವಾಗಲಿದೆ. ಬ್ಲರ್‌ ಇಮೇಜ್‌ ಹಾಗೂ ವಿಡಿಯೊಗಳ ಸಮಸ್ಯೆ ಇಲ್ಲ ಎನ್ನುವುದು ಕಂಪನಿಯ ಹೇಳಿಕೆ.

GalaxyS23 ಸರಣಿಯಲ್ಲಿ ಇತ್ತೀಚೆಗೆ ‍‍ಪರಿಚಯಿಸಲಾದ ಆಸ್ಟ್ರೋಲ್ಯಾಪ್ಸ್ ಫೀಚರ್‌ನಿಂದಾಗಿ, ರಾತ್ರಿ ವೇಳೆ ಆಕಾಶ, ಚಂದ್ರ, ನಕ್ಷತ್ರಗಳ ಮಜಬೂತಾದ ಚಿತ್ರಗಳನ್ನು ಕ್ಲಿಕ್ಕಿಸಬಹುದು ಎಂದು ಹೇಳಿದೆ.

ಉತ್ತಮ ಸೆಲ್ಫಿ ಕ್ಯಾಮೆರಾ ಕೂಡ ಇದ್ದು, ವಿವಿಧ ಬೆಳಕಿನಲ್ಲಿ ಗುಣಮಟ್ಟದ ಫೋಟೊ ತೆಗೆದುಕೊಳ್ಳಬಹುದು.‌ ಇನ್‌ಬಿಲ್ಟ್‌ 16 ವಿವಿಧ ಫನ್‌ ಮೋಡ್‌ ಕೂಡ ಇದ್ದು ಹೊಸ ತಲೆಮಾರಿನ ಕ್ಯಾಮೆರಾ ಫ್ರೀಕ್‌ ಯುವಕರಿಗೆ ಇದು ಉತ್ತಮ ಮೊಬೈಲ್‌ ಆಗಬಹುದು ಎಂದು ಹೇಳಿದೆ.

ಫ್ಲಿಪ್‌ಕಾರ್ಟ್‌, ಕೆಲ ಆಯ್ದ ಸ್ಟೋರ್‌ಗಳು ಮತ್ತು Samsung.com ನಲ್ಲಿ ಮಾತ್ರ ₹ 27,999 ಕ್ಕೆ ಖರೀದಿಗೆ ಅವಕಾಶ ಇದೆ.

ಇದನ್ನೂ ಓದಿ..

ಸ್ಯಾಮ್‌ಸಂಗ್‌ ಗ್ಯಾಲಕ್ಸಿ F54 5G ಜೂನ್‌ 6ಕ್ಕೆ ಬಿಡುಗಡೆ: ಪ್ರೀ ಆರ್ಡರ್ ಆರಂಭ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.