ADVERTISEMENT

ಸ್ಯಾಮ್‌ಸಂಗ್‌ನಿಂದ ಎರಡು ಹೊಸ ಫೋಲ್ಡೆಬಲ್ ಫೋನ್‌ಗಳ ಅನಾವರಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜುಲೈ 2024, 7:22 IST
Last Updated 11 ಜುಲೈ 2024, 7:22 IST
   

ಬೆಂಗಳೂರು: ಸ್ಯಾಮ್‌ಸಂಗ್ ತನ್ನ ಹೊಸ ಫೋಲ್ಡೇಬಲ್ ಫೋನ್‌ಗಳಾದ ಗ್ಯಾಲಕ್ಸಿ ಝಡ್ ಫೋಲ್ಡ್‌ 6, ಗ್ಯಾಲಕ್ಸಿ ಝಡ್ ಫ್ಲಿಪ್ 6 ಮತ್ತು ಗ್ಯಾಲಕ್ಸಿ ಬಡ್ಸ್ 3 ಮತ್ತು ಗ್ಯಾಲಕ್ಸಿ ಬಡ್ಸ್ 3 ಪ್ರೊ ಅನ್ನು ಇಂದು (ಗುರುವಾರ) ಬಿಡುಗಡೆ ಮಾಡಿದೆ.

ಪ್ಯಾರಿಸ್‌ನಲ್ಲಿ ನಡೆದ ಗ್ಯಾಲಕ್ಸಿ ಅನ್‌ಪ್ಯಾಕ್ಡ್ ಕಾರ್ಯಕ್ರಮದಲ್ಲಿ ಈ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು.

ಹೊಸ ಗ್ಯಾಲಕ್ಸಿ ಎಐ ಅನ್ನು ಬಹುಮುಖವಾದ ಮತ್ತು ಹೊಂದಿಕೊಳ್ಳುವ ಗುಣವನ್ನು ಬಳಸಿಕೊಂಡು ವಿನ್ಯಾಸಗೊಳಿಸಿರುವುದರಿಂದ ಗ್ರಾಹಕರಿಗೆ ವಿಶಿಷ್ಟವಾದ ಮೊಬೈಲ್ ಅನುಭವವನ್ನು ಒದಗಿಸಲಿದೆ. ಗ್ಯಾಲಕ್ಸಿ ಎಐ ಸಂವಹನ, ಉತ್ಪಾದಕತೆ ಮತ್ತು ಸೃಜನಶೀಲತೆಯನ್ನು ತೀವ್ರಗೊಳಿಸಲು ಮತ್ತು ವೇಗಗೊಳಿಸಲು ಶಕ್ತಿಯುತವಾದ ಮತ್ತು ಬಾಳಿಕೆ ಬರುವ ಫೋಲ್ಡೇಬಲ್ ಸ್ಮಾರ್ಟ್ ಫೋನ್ ಅನುಭವವನ್ನು ಒದಗಿಸುತ್ತದೆ.

ADVERTISEMENT

ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ನ ಅಧ್ಯಕ್ಷ ಮತ್ತು ಮೊಬೈಲ್ ಎಕ್ಸ್‌ ಪೀರಿಯನ್ಸ್ ಬ್ಯುಸಿನೆಸ್ ಮುಖ್ಯಸ್ಥ ಟಿಎಂ ರೋಹ್ , ‘ಸ್ಯಾಮ್ ಸಂಗ್ ನ ಬಹುಕಾಲದ ನಾವೀನ್ಯತಾ ಇತಿಹಾಸವು ನಮಗೆ ಫೋಲ್ಡೇಬಲ್ ಸಾಮರ್ಥ್ಯವನ್ನು (ಫಾರ್ಮ್ ಫ್ಯಾಕ್ಟರ್) ಒದಗಿಸಿ ಮೊಬೈಲ್ ಎಐಯ ಹೊಸ ಅಧ್ಯಾಯವನ್ನು ಆರಂಭಿಸಲು ಅನುವು ಮಾಡಿಕೊಡುವ ಮೂಲಕ ಮೊಬೈಲ್ ಕ್ಷೇತ್ರದಲ್ಲಿ ಇನ್ನಷ್ಟು ಪ್ರಗತಿ ಸಾಧಿಸುವ ಅವಕಾಶವನ್ನು ಮಾಡಿಕೊಟ್ಟಿದೆ. ಪ್ರಸ್ತುತ ಈ ಎರಡು ಪೂರಕ ತಂತ್ರಜ್ಞಾನಗಳನ್ನು ಸಂಯೋಜಿಸಲು ಮತ್ತು ಪ್ರಪಂಚದಾದ್ಯಂತ ಇರುವ ಬಳಕೆದಾರರಿಗೆ ಹೊಸ ಸಾಧ್ಯತೆಗಳನ್ನು ಒದಗಿಸಲು ನಾವು ಉತ್ಸುಕರಾಗಿದ್ದೇವೆ’ ಎಂದು ಹೇಳಿದರು.

ಗ್ಯಾಲಕ್ಸಿ ಝಡ್ ಫೋಲ್ಡ್‌ 6 ಮತ್ತು ಝಡ್ ಫ್ಲಿಪ್ 5 ಗಳು ತೆಳ್ಳಗಿರುವ ಮತ್ತು ಹಗುರವಾದ ಗ್ಯಾಲಕ್ಸಿ ಝಡ್ ಸರಣಿಯಾಗಿದ್ದು, ಆರಾಮವಾಗಿ ಕೊಂಡೊಯ್ಯಲು ಸಾಧ್ಯವಾಗುವಂತೆ ರೂಪುಗೊಳಿಸಲಾಗಿದೆ. ಸಿಮ್ಮೆಟ್ರಿಕಲ್ (ಎರಡು ಭಾಗಗಳಿದ್ದು, ಎರಡೂ ಒಂದೇ ಥರ ಇರುತ್ತವೆ) ವಿನ್ಯಾಸವನ್ನು ಹೊಂದಿರುವ, ನೇರವಾದ ಎಡ್ಜ್ ಅನ್ನು ಹೊಂದಿರುವ ಈ ಫೋನ್ ಗಳು ಕಲಾತ್ಮಕವಾಗಿ ನಯವಾದ ಫಿನಿಶಿಂಗ್ ಹೊಂದಿವೆ.

ಗ್ಯಾಲಕ್ಸಿ ಝಡ್ ಫೋಲ್ಡ್‌ 6 ಮತ್ತು ಫ್ಲಿಪ್ 6 ಎರಡನ್ನೂ ಗ್ಯಾಲಕ್ಸಿ ಸ್ನ್ಯಾಪ್ ಡ್ರಾಗನ್® 8 ಜೆನ್ 3 ಮೊಬೈಲ್ ಪ್ಲಾಟ್‌ಫಾರ್ಮ್‌ ಬಳಸಿಕೊಂಡು ಸಜ್ಜುಗೊಳಿಸಲಾಗಿದೆ. ಇದು ಇನ್ನೂ ಅತ್ಯಾಧುನಿಕ ಸ್ನಾಪ್‌ಡ್ರಾಗನ್ ಮೊಬೈಲ್ ಪ್ರೊಸೆಸರ್ ಆಗಿದ್ದು, ವಿಭಾಗದಲ್ಲಿಯೇ ಅತ್ಯುತ್ತಮ ಕ್ಲಾಸ್ ಇನ್ ಸಿಪಿಯು, ಜಿಪಿಯು ಮತ್ತು ಎನ್ ಪಿ ಯು ಕಾರ್ಯಕ್ಷಮತೆ ಒದಗಿಸುತ್ತದೆ.

ಹೊಸ 50 ಎಂಪಿ ವೈಡ್ ಮತ್ತು 12ಎಂಪಿ ಅಲ್ಟ್ರಾ ವೈಡ್ ಸೆನ್ಸರ್‌ಗಳು ಉತ್ತಮ ಕ್ಯಾಮೆರಾ ಅನುಭವ ಒದಗಿಸುತ್ತದೆ. 50ಎಂಪಿ ಸೆನ್ಸರ್ ನಾಯ್ಸ್ ಫ್ರೀ ಫೋಟೋ 2x ಆಪ್ಟಿಕಲ್ ಜೂಮ್ ಹೊಂದಿದೆ. ಅತ್ಯಾಧುನಿಕ ಶೂಟಿಂಗ್ ಅನುಭವ ಪಡೆಯಲು 10x ಜೂಮ್‌ ಮೂಲಕ ಎಐ ಜೂಮ್ ಕೂಡ ಲಭ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.