ಬೆಂಗಳೂರು: ದೇಶದ ಜನಪ್ರಿಯ ಹಾಗೂ ಮುಂಚೂಣಿಯ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಸ್ಯಾಮ್‌ಸಂಗ್, ಅತಿ ನೂತನ ಗ್ಯಾಲಕ್ಸಿ ವಾಚ್5 ಪ್ರೊ ಹಾಗೂ ಗ್ಯಾಲಕ್ಸಿ ವಾಚ್5 ಸ್ಮಾರ್ಟ್‌ವಾಚ್ ಬಿಡುಗಡೆಗೂಳಿಸಿದೆ.
ದೇಶದ ಸ್ಮಾರ್ಟ್‌ವಾಚ್ ವಿಭಾಗದಲ್ಲಿ ನೂತನ ಗ್ಯಾಲಕ್ಸಿ ವಾಚ್5 ಶ್ರೇಣಿಯ ವಾಚ್‌ಗಳು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತವೆ.
ಗ್ಯಾಲಕ್ಸಿ ವಾಚ್5 ಪ್ರೊ ಹಾಗೂ ಗ್ಯಾಲಕ್ಸಿ ವಾಚ್5 ಸ್ಮಾರ್ಟ್‌ವಾಚ್ ಆಗಸ್ಟ್ 16ರಿಂದ ಖರೀದಿಗೆ ಲಭ್ಯವಾಗಲಿದೆ.
ಬೆಲೆ:
ಗ್ಯಾಲಕ್ಸಿ ವಾಚ್5:
ಬ್ಲೂಟೂತ್ (40ಎಂಎಂ): ₹27,999
ಎಲ್‌ಟಿಇ (40ಎಂಎಂ): ₹32,999
ಬ್ಲೂಟೂತ್ (44ಎಂಎಂ): ₹30,999
ಎಲ್‌ಟಿಇ (44ಎಂಎಂ): ₹35,999
ಗ್ಯಾಲಕ್ಸಿ ವಾಚ್5 ಪ್ರೊ:
ಬ್ಲೂಟೂತ್ (45ಎಂಎಂ): ₹44,999
ಎಲ್‌ಟಿಇ (45ಎಂಎಂ): ₹49,999
ಮುಂಗಡ ಬುಕ್ಕಿಂಗ್ ಆಫರ್:
ಗ್ಯಾಲಕ್ಸಿ ವಾಚ್5:
*₹11,999 ಬೆಲೆಯ ಗ್ಯಾಲಕ್ಸಿ ಬಡ್ಸ್ ₹2,999ಕ್ಕೆ ಲಭ್ಯ
*ಕ್ಯಾಶ್‌ಬ್ಯಾಕ್: ₹3,000
*ಎಕ್ಸ್‌ಚೇಂಜ್ ಬೋನಸ್: ₹3,000
ಗ್ಯಾಲಕ್ಸಿ ವಾಚ್5 ಪ್ರೊ:
*₹11999 ಬೆಲೆಯ ಗ್ಯಾಲಕ್ಸಿ ಬಡ್ಸ್ ₹2,999ಕ್ಕೆ ಲಭ್ಯ
*ಕ್ಯಾಶ್‌ಬ್ಯಾಕ್: ₹5,000
*ಎಕ್ಸ್‌ಚೇಂಜ್ ಬೋನಸ್: ₹5,000
ಬಯೋಆ್ಯಕ್ಟಿವ್ ಸೆನ್ಸಾರ್:
ಆರೋಗ್ಯ ಹಾಗೂ ಫಿಟ್ನೆಸ್ ಮಹತ್ವವನ್ನು ಅರಿತುಕೊಂಡಿರುವ ಸ್ಯಾಮ್‌ಸಂಗ್, ಅತಿ ವಿಶಿಷ್ಟ ಬಯೋಆ್ಯಕ್ಟಿವ್ ಸೆನ್ಸಾರ್ ವೈಶಿಷ್ಟ್ಯವನ್ನು ಪರಿಚಯಿಸಿದೆ. ಆರೋಗ್ಯ ಮಾನಿಟರ್ ಮಾಡಲು ಮುಂದಿನ ಜನಾಂಗದ ತಂತ್ರಜ್ಞಾನ ಅವಿಷ್ಕರಿಸಲಾಗಿದ್ದು, ಆಪ್ಟಿಕಲ್ ಹೃದಯ ಬಡಿತ, ಎಲೆಕ್ಟ್ರಿಕಲ್ ಹಾರ್ಟ್ ಸಿಗ್ನಲ್, ಬಯೋಮೆಟ್ರಿಕಲ್ ಇಂಪೆಡೆನ್ಸ್ ಅನಾಲಿಸಿಸ್ ಎಂಬ ಮೂರು ಆರೋಗ್ಯ ಸಂವೇದಕಗಳನ್ನು ಸಂಯೋಜಿಸುವ ವಿಶಿಷ್ಟ ಚಿಪ್ ಹೊಂದಿರುತ್ತದೆ. ಹೃದಯ ಬಡಿತ, ರಕ್ತದಲ್ಲಿ ಆಮ್ಲಜನಕದ ಮಟ್ಟ ಹಾಗೂ ಒತ್ತಡದ ಮಟ್ಟ ಮೇಲ್ನೋಟ ಮಾಡಬಹುದಾಗಿದೆ.
ಹೆಲ್ತ್ ಇನ್‌ಸೈಟ್, ಸ್ಲೀಪ್ ಟ್ರ್ಯಾಕಿಂಗ್:
ಗ್ಯಾಲಕ್ಸಿ ವಾಚ್5 ಶ್ರೇಣಿಯ ಸ್ಮಾರ್ಟ್‌ವಾಚ್, ಫಿಟ್ನೆಸ್ ಚುಟುವಟಿಕೆಗಳಿಗೂ ಹೊರತಾಗಿಯೂ ಸಮಗ್ರ ಆರೋಗ್ಯ ವಿವರಗಳನ್ನು ನೀಡುತ್ತದೆ. ದೇಹ ಸಂಯೋಜನೆಯ ಉಪಕರಣವು ಒಟ್ಟಾರೆ ಆರೋಗ್ಯ ವಿವರಗಳನ್ನು ಒದಗಿಸುತ್ತದೆ. ವೈಯಕ್ತಿಕ ವರ್ಕೌಟ್ ಹಾಗೂ ಟ್ರ್ಯಾಕಿಂಗ್ ಸೌಲಭ್ಯವು ಇರುತ್ತದೆ.
ದೀರ್ಘ ಬಾಳಿಕೆ:
ಗ್ಯಾಲಕ್ಸಿ ವಾಚ್5 ಪ್ರೀಮಿಯಂ ಹಾಗೂ ದೃಢವಾದ ನಿರ್ಮಾಣ ಗುಣಮಟ್ಟವನ್ನು ಹೊಂದಿದ್ದು, ದೀರ್ಘ ಬಾಳಿಕೆಯನ್ನು ಖಚಿತಪಡಿಸುತ್ತದೆ. ಗ್ಯಾಲಕ್ಸಿ ವಾಚ್‌ಗಳ ಪೈಕಿ ಅತ್ಯಂತ ಸಮರ್ಪಕ ಬ್ಯಾಟರಿ ಹೊಂದಿದ್ದು, ಕೇವಲ ಎಂಟು ನಿಮಿಷಗಳ ಚಾರ್ಜಿಂಗ್‌ನೊಂದಿಗೆ ಎಂಟು ತಾಸು ಸ್ಲೀಪ್ ಟ್ರ್ಯಾಕಿಂಗ್ ಅನ್ನು ಒದಗಿಸುತ್ತದೆ.
ಗೂಗಲ್ ಅಸಿಸ್ಟನ್ಸ್ ಬಳಸಿ ನಿಮ್ಮ ಮೆಚ್ಚಿನ ಹಾಡು ಹುಡುಕುವುದು ಹಾಗೂ ಗೂಗಲ್ ಮ್ಯಾಪ್ ಸೌಲಭ್ಯ ಪಡೆಯಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.