ADVERTISEMENT

ಸ್ಯಾಮ್‌ಸಂಗ್‌ ಹೊಸ 5ಜಿ ಫೋನ್‌ಗಳ ಅನಾವರಣ; ಗ್ಯಾಲಕ್ಸಿ A53, A33

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಮಾರ್ಚ್ 2022, 16:35 IST
Last Updated 17 ಮಾರ್ಚ್ 2022, 16:35 IST
ಸ್ಯಾಮ್‌ಸಂಗ್‌ 'ಗ್ಯಾಲಕ್ಸಿ ಎ33'
ಸ್ಯಾಮ್‌ಸಂಗ್‌ 'ಗ್ಯಾಲಕ್ಸಿ ಎ33'   

ನವದೆಹಲಿ: ಸ್ಯಾಮ್‌ಸಂಗ್‌ ಎಲೆಕ್ಟ್ರಾನಿಕ್ಸ್‌ ಹೊಸ 5ಜಿ ಫೋನ್‌ಗಳನ್ನು ಗುರುವಾರ ಅನಾವರಣ ಮಾಡಿದೆ. ಅತ್ಯಾಧುನಿಕ ಫೀಚರ್‌ಗಳೊಂದಿಗೆ 'ಗ್ಯಾಲಕ್ಸಿ ಎ53' 5ಜಿ ಮತ್ತು 'ಗ್ಯಾಲಕ್ಸಿ ಎ33' 5ಜಿ ಗಮನ ಸೆಳೆದಿದೆ.

'ಗ್ಯಾಲಕ್ಸಿ ಎ53' 5ಜಿ ಫೋನ್‌ ಏಪ್ರಿಲ್‌ 1ರಿಂದ ಹಾಗೂ 'ಗ್ಯಾಲಕ್ಸಿ ಎ33' 5ಜಿ ಫೋನ್‌ ಏಪ್ರಿಲ್‌ 22ರಿಂದ ಖರೀದಿಗೆ ಸಿಗಲಿದೆ. ಭಾರತದಲ್ಲಿ ಇದರ ಲಭ್ಯತೆ ಹಾಗೂ ಬೆಲೆಯ ವಿವರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.

ಈ ಹೊಸ ಫೋನ್‌ಗಳು 'ಆ್ಯಂಡ್ರಾಯ್ಡ್‌ 12' ಆಪರೇಟಿಂಗ್‌ ಸಿಸ್ಟಮ್‌ ವ್ಯವಸ್ಥೆಯೊಂದಿಗೆ ಕಾರ್ಯಾಚರಿಸಲಿವೆ. ಫೋನ್‌ನ ಹೊರ ಕವಚವು ನೀರಿನ ಹನಿಗಳು ಮತ್ತು ದೂಳಿನಿಂದ ರಕ್ಷಣೆ ನೀಡುತ್ತದೆ. 5,000ಎಂಎಎಚ್‌ ಬ್ಯಾಟರಿ ಮತ್ತು 25ವ್ಯಾಟ್‌ ಫಾಸ್ಟ್ ಚಾರ್ಜಿಂಗ್‌ ವ್ಯವಸ್ಥೆ ಒಳಗೊಂಡಿವೆ.

ADVERTISEMENT

ಎರಡೂ ಫೋನ್‌ಗಳ ಬೆಲೆ ₹40,000ಕ್ಕಿಂತ ಕಡಿಮೆ ಇರಲಿದೆ.

'ಗ್ಯಾಲಕ್ಸಿ ಎ53' 5ಜಿ ಫೋನ್‌:

6.5 ಇಂಚು ಎಫ್‌ಎಚ್‌ಡಿ+ಸೂಪರ್‌ ಅಮೊಲೆಡ್‌ ಇನ್ಫಿನಿಟಿ–ಒ ಡಿಸ್‌ಪ್ಲೇ, 120 ಹರ್ಟ್ಸ್ ರಿಫ್ರೆಷ್‌ ರೇಟ್‌, ಗೊರಿಲ್ಲಾ ಗ್ಲಾಸ್‌ 5 ಸುರಕ್ಷತೆ ಇದೆ. 5 ನ್ಯಾನೊಮೀಟರ್‌ ಎಕ್ಸಿನೋಸ್‌ 1280 ಚಿಪ್‌, 8ಜಿಬಿ ರ್‍ಯಾಮ್‌ ಮತ್ತು 258ಜಿಬಿ ಸಂಗ್ರಹ ಸಾಮರ್ಥ್ಯ ಹೊಂದಿದೆ.

ಫೋನ್‌ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾಗಳಿವೆ. 64ಎಂಪಿ ಮುಖ್ಯ ಕ್ಯಾಮೆರಾ, 12ಎಂಪಿ ಅಲ್ಟ್ರಾ ವೈಡ್‌ ಸೆನ್ಸರ್‌, 5ಎಂಪಿ ಡೆಪ್ತ್‌ ಸೆನ್ಸರ್‌, 5ಎಂಪಿ ಮ್ಯಾಕ್ರೊ ಸೆನ್ಸರ್‌ ಒಳಗೊಂಡಿದೆ. ವಿಡಿಯೊ ಕರೆ ಮತ್ತು ಸೆಲ್ಫಿಗಾಗಿ 32ಎಂಪಿ ಕ್ಯಾಮೆರಾ ನೀಡಲಾಗಿದೆ.

'ಗ್ಯಾಲಕ್ಸಿ ಎ33' 5ಜಿ ಫೋನ್‌:

6.4 ಇಂಚು ಎಫ್‌ಎಚ್‌ಡಿ+ಸೂಪರ್‌ ಅಮೊಲೆಡ್‌ ಇನ್ಫಿನಿಟಿ–ಯು ಡಿಸ್‌ಪ್ಲೇ, 90 ಹರ್ಟ್ಸ್ ರಿಫ್ರೆಷ್‌ ರೇಟ್‌, ಗೊರಿಲ್ಲಾ ಗ್ಲಾಸ್‌ 5 ಸುರಕ್ಷತೆ ಇದೆ. ಇದರಲ್ಲೂ 5 ನ್ಯಾನೊಮೀಟರ್‌ ಎಕ್ಸಿನೋಸ್‌ 1280 ಚಿಪ್‌ ಇದ್ದು, ಗರಿಷ್ಠ 8ಜಿಬಿ ರ್‍ಯಾಮ್‌ ಮತ್ತು 258ಜಿಬಿ ಸಂಗ್ರಹ ಸಾಮರ್ಥ್ಯ ಇರಲಿದೆ.

ಫೋನ್‌ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾಗಳಿವೆ. 48ಎಂಪಿ ಮುಖ್ಯ ಕ್ಯಾಮೆರಾ, 8ಎಂಪಿ ಅಲ್ಟ್ರಾ ವೈಡ್‌ ಸೆನ್ಸರ್‌, 2ಎಂಪಿ ಡೆಪ್ತ್‌ ಸೆನ್ಸರ್‌, 5ಎಂಪಿ ಮ್ಯಾಕ್ರೊ ಸೆನ್ಸರ್‌ ಒಳಗೊಂಡಿದೆ. ವಿಡಿಯೊ ಕರೆ ಮತ್ತು ಸೆಲ್ಫಿಗಾಗಿ 13ಎಂಪಿ ಕ್ಯಾಮೆರಾ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.