ಬೆಂಗಳೂರು: ನೂತನ ಸರಣಿಯ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳನ್ನು ಸ್ಯಾಮ್‌ಸಂಗ್ ಕಳೆದ ವಾರ ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿತ್ತು. ಈ ಪೈಕಿ ಸ್ಯಾಮ್‌ಸಂಗ್ ಗ್ಯಾಲಕ್ಸಿ A53 5G ದೇಶದ ಮಾರುಕಟ್ಟೆಗೆ ಬಿಡುಗಡೆಯಾಗಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ A53 5G, 6.5 ಇಂಚಿನ ಫುಲ್ ಎಚ್‌ಡಿ+ ಸೂಪರ್ ಅಮೊಲಿಡ್ ಇನ್ಫಿನಿಟಿ–ಒ ಡಿಸ್‌ಪ್ಲೇ ಹೊಂದಿದೆ. ಗೊರಿಲ್ಲಾ ಗ್ಲಾಸ್ 5 ಶೀಲ್ಡ್ ಬೆಂಬಲ ಇದರಲ್ಲಿದೆ.
ಸ್ಯಾಮ್‌ಸಂಗ್ ಗ್ಯಾಲಕ್ಸಿ A53 5G
ಎಕ್ಸಿನೋಸ್ 1280 ಒಕ್ಟಾ ಕೋರ್ ಪ್ರೊಸೆಸರ್, ಆಂಡ್ರಾಯ್ಡ್ 12 ಆಧಾರಿತ ಒನ್ 4.1 ಓಎಸ್, 6 GB/8 GB RAM ಜತೆಗೆ, 128 GB/256 GB ಆಯ್ಕೆ ಹಾಗೂ 5,000mAh ಬ್ಯಾಟರಿ ಮತ್ತು 25W ಫಾಸ್ಟ್ ಚಾರ್ಜಿಂಗ್ ಇದರ ವಿಶೇಷತೆಯಾಗಿದೆ ಎಂದು ಕಂಪನಿ ಹೇಳಿದೆ.
ಹಿಂಭಾಗದಲ್ಲಿ ನಾಲ್ಕು ಕ್ಯಾಮೆರಾ ಇದ್ದು, 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲೆನ್ಸ್ ಜತೆಗೆ 12 ಎಂಪಿ+5 ಎಂಪಿ+ 5 ಎಂಪಿ ಮತ್ತು 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.
ಬೆಲೆ ಮತ್ತು ಲಭ್ಯತೆ
ಕಪ್ಪು, ಪೀಚ್, ತಿಳಿ ನೀಲಿ ಮತ್ತು ಬಿಳಿ ಎಂಬ ನಾಲ್ಕು ಬಣ್ಣಗಳಲ್ಲಿ ಹೊಸ ಸ್ಯಾಮ್‌ಸಂಗ್ ಗ್ಯಾಲಕ್ಸಿ A53 5G ಲಭ್ಯವಿದೆ.
6GB RAM + 128GB ಮಾದರಿಗೆ ₹34,499 ಮತ್ತು 8GB RAM + 128GB ಆವೃತ್ತಿಗೆ ₹35,999 ದರವಿದೆ. ಆರಂಭಿಕ ಕೊಡುಗೆಯಾಗಿ ಮಾರ್ಚ್ 21ರಿಂದ 31ರವರೆಗಿನ ಅವಧಿಯಲ್ಲಿ ಹೊಸ ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರಿಗೆ ₹3,000 ಕ್ಯಾಶ್‌ಬ್ಯಾಕ್ ದೊರೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.