ಗುರುಗ್ರಾಮ: ಸ್ಯಾಮ್‌ಸಂಗ್ ಕಂಪನಿಯು ತನ್ನ ಗ್ಯಾಲಕ್ಸಿ ವಾಚ್ ಸರಣಿಯ ಭಾಗವಾಗಿ ಡಿಜಿಟಲ್ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಬಯೋಎಲೆಕ್ಟ್ರಿಕ್ ಇಂಪೆಡೆನ್ಸ್ ಅನಾಲಿಸಿಸ್ ಸೆನ್ಸಾರ್ ಅನ್ನು ಬಿಡುಗಡೆ ಮಾಡಿದೆ.
ದೇಹದಲ್ಲಿ ಆರೋಗ್ಯದ ಏರುಪೇರಿನ ಕುರಿತು ಮಾಹಿತಿ ಕಲೆಹಾಕುವ ತಂತ್ರಾಂಶವುಳ್ಳ ಸ್ಮಾರ್ಟ್ ವಾಚ್ ಅನ್ನು ಲೂಯಿಸಿಯಾನ ಸ್ಟೇಟ್ ಯೂನಿವರ್ಸಿಟಿ, ಪೆನ್ನಿಂಗ್ಟನ್ ಬಯೋಮೆಡಿಕಲ್ ರೀಸರ್ಚ್ ಸೆಂಟರ್ ಮತ್ತು ಯೂನಿವರ್ಸಿಟಿ ಆಫ್ ಹವಾಯಿ ಕ್ಯಾನ್ಸರ್ ಸೆಂಟರ್‌ನ ತಂಡಗಳು ಜಂಟಿಯಾಗಿ ಅಧ್ಯಯನ ನಡೆಸಿದ್ದಾರೆ.
ಸ್ಥೂಲಕಾಯವನ್ನು ತಡೆಯುವ ನಿಟ್ಟಿನಲ್ಲಿ ಮತ್ತು ಕಡಿಮೆ ಮಾಡುವ ನಿಟ್ಟಿನಲ್ಲಿ ಬಳಕೆದಾರರಿಗೆ ಉತ್ತಮ ಫಲಿತಾಂಶವನ್ನು ಈ ಸ್ಮಾರ್ಟ್‌ಫೋನ್ ನೀಡುತ್ತದೆ ಎಂದು ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ಅಧ್ಯಯನ ವರದಿಯನ್ನು ಪ್ರಕಟಿಸಿದೆ.
ಗ್ಯಾಲಕ್ಸಿ ವಾಚ್ ಬಳಕೆದಾರರ ದೇಹದ ಆರೋಗ್ಯದ ಬಗ್ಗೆ ಹೆಚ್ಚು ನಿಖರವಾದ ವಿವರವನ್ನು ತೋರಿಸುತ್ತದೆ. ಅಗತ್ಯವಿದ್ದಲ್ಲಿ ಬಳಕೆದಾರರು ತಮ್ಮ ನಡವಳಿಕೆಗೆ ತಕ್ಕಂತೆ ವಾಚ್‌ಅನ್ನು ಹೊಂದಿಸಿಕೊಳ್ಳಬಹುದು ಎಂದು ಸ್ಯಾಮ್‌ಸಂಗ್ ಕಂಪನಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.