ADVERTISEMENT

ಸ್ಯಾಮ್ಸಂಗ್‌, ರಿಯಲ್‌ ಮಿ: 4 ಹೊಸ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 13:55 IST
Last Updated 20 ಆಗಸ್ಟ್ 2019, 13:55 IST
   

ಬೆಂಗಳೂರು: ಸ್ಯಾಮ್ಸಂಗ್‌ ಕಂಪನಿಯ ಗ್ಯಾಲಕ್ಸಿ ನೋಟ್‌ 10 ಮತ್ತು 10 ಪ್ಲಸ್‌, ಚೀನಾದ ರಿಯಲ್‌ಮಿ ಕಂಪನಿಯ ರಿಯಲ್‌ ಮಿ 5 ಹಾಗೂ ರಿಯಲ್‌ಮಿ 5ಪ್ರೊ ಸ್ಮಾರ್ಟ್‌ಫೋನ್‌ಗಳು ಮಂಗಳವಾರ ಮಾರುಕಟ್ಟೆಗೆ ಬಿಡುಗಡೆಯಾಗಿವೆ.

ರಿಯಲ್‌ಮಿ 5 ಬೆಲೆ ₹ 9,999 ಇದೆ. 6.5 ಇಂಚು ಮಿನಿ ಡ್ರಾಪ್‌ ಫುಲ್‌ ಸ್ಕ್ರೀನ್‌, ಸ್ನ್ಯಾಪ್‌ಡ್ರ್ಯಾಗನ್‌ 665 ಎಐಇ ಆಕ್ಟಾ ಕೋರ್‌ 11ಎನ್‌ಎಂ ಪ್ರೊಸೆಸರ್‌, ಆಂಡ್ರಾಯ್ಡ್‌ ಪಿ ಆಧಾರಿತ ಕಲರ್‌ ಒಎಸ್‌ 6 ಇದೆ. 5000 ಎಂಎಎಚ್‌ ಬ್ಯಾಟರಿ ಹೊಂದಿದೆ. ಇದುವರೆಗೆ ಮಾರುಕಟ್ಟೆಯಲ್ಲಿರುವ ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗಿಂತಲೂ ಸಾಮರ್ಥ್ಯದಲ್ಲಿ ದೊಡ್ಡದಾದ ಬ್ಯಾಟರಿ ಇದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

12 ಎಂಪಿ ಎಐ ಕ್ವಾಡ್‌ ಕ್ಯಾಮೆರಾದ ಜತೆಗೆ ಪ್ರೈಮರಿ, ಅಲ್ಟ್ರಾವೈಡ್‌–ಆ್ಯಂಗಲ್‌, ಸೂಪರ್‌ ಮ್ಯಾಕ್ರೊ ಹಾಗೂ ಪೋರ್ಟ್‌ರೇಟ್‌ ಲೆನ್ಸ್‌ಗಳಿವೆ. 3ಜಿಬಿ+32 ಜಿಬಿ/4ಜಿಬಿ+64ಜಿಬಿ/4ಜಿಬಿ+128ಜಿಬಿ ಇದ್ದು, 256 ಜಿಬಿವರೆಗೆ ವಿಸ್ತರಣೆ ಸಧ್ಯ. 3.5ಎಂಎಂ ಹೆಡ್‌ಸೆಟ್‌ ಜಾಕ್‌, ಮೈಕ್ರೊ ಯುಎಸ್‌ಬಿ, ಡ್ಯುಯಲ್‌ ನ್ಯಾನೊ ಸಿಮ್‌ ಮತ್ತು ಟಿಎಫ್‌ ಕಾರ್ಡ್ ಒಳಗೊಂಡಿದೆ.

ADVERTISEMENT

ರಿಯಲ್‌ಮಿ 5 ಪ್ರೊ: ಇದರ ಬೆಲೆ ₹ 13,999 ಇದೆ. 6.5 ಇಂಚು ಡೀವ್‌ ಡ್ರಾಪ್‌ ಫುಲ್‌ ಸ್ಕ್ರೀನ್‌ ಎಲ್‌ಸಿಡಿ ಮಲ್ಟಿ ಟಚ್ ಡಿಸ್‌ಪ್ಲೇ ಹೊಂದಿದೆ. 48ಎಂಪಿ ಕ್ವಾಡ್‌ ಕ್ಯಾಮೆರಾ ಸ್ಪೀಡ್‌ಸ್ಟರ್‌ ಜತೆಗೆ ಪ್ರೈಮರಿ, ಅಲ್ಟ್ರಾವೈಡ್‌–ಆ್ಯಂಗಲ್‌, ಸೂಪರ್‌ ಮ್ಯಾಕ್ರೊ ಹಾಗೂ ಪೋರ್ಟ್‌ರೇಟ್‌ ಲೆನ್ಸ್‌ಗಳಿವೆ. 16 ಎಂಪಿ ಫ್ರಂಟ್‌ ಕ್ಯಾಮೆರಾ ಒಳಗೊಂಡಿದೆ.

ರಿಯಲ್‌ಮಿ 5 ಪ್ರೊ

ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್‌ 712 ಎಐಇ ಆಕ್ಟಾ ಕೋರ್‌ ಪ್ರೊಸೆಸರ್‌, ಆಂಡ್ರಾಯ್‌ ಪಿ ಆಧಾರಿತ ಕಲರ್‌ ಒಎಸ್‌ 6ನಿಂದ ಕಾರ್ಯನಿರ್ವಹಿಸುತ್ತದೆ.

4ಜಿಬಿ+64ಜಿಬಿ/6ಜಿಬಿ+64ಜಿಬಿ ಹಾಗೂ 8ಜಿಬಿ+128ಜಿಬಿಗಳಲ್ಲಿ ಲಭ್ಯ. 256 ಜಿಬಿವರೆಗೆ ವಿಸ್ತರಣೆ ಸಾಧ್ಯ. 4,035 ಎಂಎಎಚ್‌ ಬ್ಯಾಟರಿ ಒಳಗೊಂಡಿದೆ. ವೇಗವಾಗಿ ಚಾರ್ಜ್‌ ಆಗಲು vooc ಫ್ಲ್ಯಾಷ್‌ ಚಾರ್ಜ್ರ್ 3.0 ಒಳಗೊಂಡಿದೆ. 30 ನಿಮಿಷಗಳಲ್ಲಿ ಶೇ 55ರಷ್ಟು ಚಾರ್ಜ್‌ ಆಗುತ್ತದೆ. 3.5ಎಂಎಂ ಹೆಡ್‌ಸೆಟ್‌ ಜಾಕ್‌, ಟಡೈಪ್‌ ಸಿ ಇದೆ. ಡ್ಯುಯಲ್‌ ನ್ಯಾನೊ ಸಿಮ್‌ ಮತ್ತು ಟಿಎಫ್‌ ಕಾರ್ಡ್‌ ಆಯ್ಕೆಗಳಿವೆ.

ಸ್ಯಾಮ್ಸಂಗ್‌ ಗ್ಯಾಲಕ್ಸಿ ನೋಟ್‌ 10, 10 ಪ್ಲಸ್

ಸ್ಯಾಮ್ಸಂಗ್‌ ಕಂಪನಿಯು ಗ್ಯಾಲಕ್ಸಿ ನೋಟ್‌ 10 ಮತ್ತು 10 ಪ್ಲಸ್‌ ಎಂಬ ಎರಡು ಹೊಸ ಹ್ಯಾಂಡ್‌ಸೆಟ್‌ಗಳನ್ನು ಬಿಡುಗಡೆ ಮಾಡಿದೆ. ನೋಟ್‌ 10 ಬೆಲೆ ₹ 69,999 ಮತ್ತು 10 ಪ್ಲಸ್‌ ಬೆಲೆ ₹ 79,999 ಇದೆ. ಎರಡರಲ್ಲಿಯೂ ಎಸ್‌ ಪೆನ್‌ ಇದೆ. ಶುಕ್ರವಾರದಿಂದ ಖರೀದಿಗೆ ಲಭ್ಯವಾಗಲಿವೆ.

ನೋಟ್‌ 10: 8ಜಿಬಿ ರ್‍ಯಾಮ್‌ ಇದ್ದು, 256 ಜಿಬಿ ವರೆಗಿನ ಆಂತರಿಕ ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. 3,500 ಎಂಎಎಚ್‌ ಬ್ಯಾಟರಿ ಇದೆ. 16 ಎಂಪಿ+12ಎಂಪಿ+12ಎಂಪಿ ಕ್ಯಾಮೆರಾ ಹಾಗೂ 10ಎಂಪಿ ಫ್ರಂಟ್‌ ಕ್ಯಾಮೆರಾ ಒಳಗೊಂಡಿದೆ.

ನೋಟ್‌ 10 ಪ್ಲಸ್: 12 ಜಿಬಿ ರ್‍ಯಾಮ್‌ ಇದ್ದು, 256 ಜಿಬಿ ಮತ್ತು 512 ಜಿಬಿವರೆಗಿನ ಆಂತರಿಕ ಸಂಗ್ರಹಣಾ ಸಾಮರ್ಥ್ಯದಲ್ಲಿ ಲಭ್ಯವಿದೆ. 4,300 ಎಂಎಎಚ್‌ ಬ್ಯಾಟರಿ ಇದೆ. 16ಎಂಪಿ+12ಎಂಪಿ+12 ಎಂಪಿ ರಿಯರ್‌ ಕ್ಯಾಮೆರಾ ಹಾಗೂ 10ಎಂಪಿ ಫ್ರಂಟ್‌ ಕ್ಯಾಮೆರಾ ಒಳಗೊಂಡಿದೆ.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.