ಬೆಂಗಳೂರು: ಆ್ಯಪಲ್ ನೂತನ ಐಫೋನ್ 14 ಸರಣಿ ಬಿಡುಗಡೆಗೆ ಸಜ್ಜಾಗಿರುವ ಬೆನ್ನಲ್ಲೇ, ಪ್ರತಿಸ್ಪರ್ಧಿ ಕಂಪನಿ ಸ್ಯಾಮ್‌ಸಂಗ್, ಹೊಸ ‘ಬಕಲ್ ಅಪ್‘ ಜಾಹೀರಾತಿನಲ್ಲಿ ಆ್ಯಪಲ್ ಅನ್ನು ಟೀಕಿಸಿದೆ.
ಆ್ಯಪಲ್, ಹೊಸ ವಿನ್ಯಾಸ ಮತ್ತು ಸಂಶೋಧನೆಗಳನ್ನು ಪ್ರಚುರಪಡಿಸುತ್ತಿಲ್ಲ ಎಂಬರ್ಥದಲ್ಲಿ ಸ್ಯಾಮ್‌ಸಂಗ್ ತನ್ನ ಜಾಹೀರಾತನ್ನು ಪ್ರಸ್ತುತಪಡಿಸಿದೆ.
ಸ್ಯಾಮ್‌ಸಂಗ್ ಬಿಡುಗಡೆ ಮಾಡಿರುವ ಗ್ಯಾಲಕ್ಸಿ ಝೆಡ್ ಫ್ಲಿಪ್ 4 ಮತ್ತು ಗ್ಯಾಲಕ್ಸಿ ಎಸ್22 ಅಲ್ಟ್ರಾ ಸ್ಮಾರ್ಟ್‌ಫೋನ್ ಜಾಹೀರಾತಿನಲ್ಲಿ 108 ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸರ್ ಮತ್ತು 120x ಸ್ಪೇಸ್ ಝೂಮ್ ವಿಶೇಷತೆಯನ್ನು ಜಾಹೀರಾತಿನ ಮೂಲಕ ಪ್ರಚಾರ ಮಾಡುತ್ತಿದೆ.
ಆದರೆ, ಆ್ಯಪಲ್ ಐಫೋನ್‌ಗಳಲ್ಲಿ ಅಷ್ಟೊಂದು ರೆಸೊಲ್ಯೂಶನ್ ಹೊಂದಿರುವ ಕ್ಯಾಮೆರಾ, ಸೆನ್ಸರ್ ಇರುವುದಿಲ್ಲ. ಝೂಮ್ ಕೂಡ ಇಲ್ಲ ಎನ್ನುವ ಅರ್ಥದಲ್ಲಿ, ಪರೋಕ್ಷವಾಗಿ ಸ್ಯಾಮ್‌ಸಂಗ್ ಟೀಕಿಸಿದೆ.
ಆ್ಯಪಲ್, ಸೆಪ್ಟೆಂಬರ್ 7ರಂದು ಈವೆಂಟ್ ನಡೆಸುತ್ತಿದ್ದು, ನೂತನ ಸರಣಿಯ ಐಫೋನ್ ಪರಿಚಯಿಸಲು ಸಜ್ಜಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.