ADVERTISEMENT

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಸ್23 ಸರಣಿಯ ಎಲ್ಲ ಫೋನ್‌ಗಳು ಭಾರತದಲ್ಲೇ ತಯಾರಿಕೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2023, 6:33 IST
Last Updated 2 ಫೆಬ್ರುವರಿ 2023, 6:33 IST
   

ದೇಶದ ಪ್ರಮುಖ ಎಲೆಕ್ಟ್ರಾನಿಕ್ಸ್‌ ಬ್ರಾಂಡ್‌ ಸ್ಯಾಮ್‌ಸಂಗ್‌, ಭಾರತದಲ್ಲಿ ಮಾರಾಟ ಮಾಡುವ ತನ್ನ ಗ್ಯಾಲಕ್ಸಿ S23 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲೇ ತಯಾರಿಸುವುದಾಗಿ ಹೇಳಿದೆ.

ನೋಯ್ಡಾದಲ್ಲಿರುವ ದೇಶದ ಅತೀ ದೊಡ್ಡ ಮೊಬೈಲ್‌ ತಯಾರಿಕ ಘಟಕದಲ್ಲಿ ಈ ಫೋನ್‌ಗಳು ಉತ್ಪಾದನೆಯಾಗಲಿದೆ. 2018ರಲ್ಲಿ ಈ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆಗೊಳಿಸಿದ್ದರು.

ಭಾರತದ ಉತ್ಪಾದನೆ ಹಾಗೂ ಬೆಳವಣಿಗೆ ಬೆಳವಣಿಗೆ ಹೊಂದುವ ಉದ್ದೇಶಕ್ಕೆ ಪೂರಕವಾಗಿ, ‘ಮೇಡ್‌ ಇನ್‌ ಇಂಡಿಯಾ‘ ಗ್ಯಾಲಕ್ಸಿ S23 ಮೊಬೈಲ್‌ ಫೋನ್‌ಗಳನ್ನು ಭಾರತದಲ್ಲಿಯೇ ತಯಾರಿಸಲಾಗುವುದು ಎಂದು ಸಾಮ್ಸಂಗ್‌ ಹೇಳಿದೆ.

ADVERTISEMENT

ಈ ಸ್ಮಾರ್ಟ್‌ಫೋನ್‌ಗಳಲ್ಲಿ Snapdragon 8 Gen ಪ್ರೊಸೆಸರ್ ಇರಲಿದ್ದು, ಅನೂಹ್ಯ ಅನುಭವ ನೀಡುವ ಗೇಮಿಂಗ್‌ ಫೀಚರ್‌ ಇರಲಿದೆ. ಇದಕ್ಕಾಗಿ ವಿಶ್ವದ ವೇಗದ ಮೊಬೈಲ್ ಗ್ರಾಫಿಕ್ಸ್‌ಗಳನ್ನು ಬಳಕೆ ಮಾಡಲಾಗಿದೆ.

ಈ ಮೊಬೈಲ್‌ನಲ್ಲಿ ಮರುಬಳಕೆ ಮಾಡಲಾದ ವಸ್ತುಗಳನ್ನು ಹೆಚ್ಚಾಗಿ ಬಳಸಲಾಗಿದ್ದು, 200MP ಅತ್ಯಾಧುನಿಕ ಕ್ಯಾಮೆರಾ ವ್ಯವಸ್ಥೆ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.