ನವದೆಹಲಿ: ‘ಪ್ರತಿ ಮೂವರು ಭಾರತೀಯರಲ್ಲಿ ಒಬ್ಬರು ತಮ್ಮ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಪಾಸ್‌ವರ್ಡ್ ಮತ್ತು ಆಧಾರ್ ವಿವರಗಳನ್ನು ತಮ್ಮ ಮೊಬೈಲ್‌ನಲ್ಲಿ ಅಥವಾ ಕಂಪ್ಯೂಟರ್ ಅಥವಾ ಇ-ಮೇಲ್‌ನಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ. ಇದು ದತ್ತಾಂಶ ಕಳವಿಗೆ ಆಸ್ಪದ ಮಾಡಿಕೊಡುತ್ತದೆ’ ಎಂದು ಲೋಕಲ್ ಸರ್ಕಲ್ಸ್ ತನ್ನ ಸಮೀಕ್ಷಾ ವರದಿಯಲ್ಲಿ ಹೇಳಿದೆ.
ಮೊಬೈಲ್‌ಗಳಲ್ಲಿ, ಕಂಪ್ಯೂಟರ್‌ಗಳಲ್ಲಿ ಮತ್ತು ಇ-ಮೇಲ್‌ನಲ್ಲಿ ಈ ವಿವರಗಳನ್ನು ಸಂಗ್ರಹಿಸಿ ಇಡುವುದು, ಅಪಾಯಕ್ಕೆ ಆಹ್ವಾನ ನೀಡಿದಂತೆ. ಬಹುತೇಕ ಹ್ಯಾಕರ್‌ಗಳು ಇ-ಮೇಲ್, ಎಸ್‌ಎಂಎಸ್‌ಗಳ ಮೂಲಕ ಮಾಹಿತಿಗೆ ಕನ್ನ ಹಾಕುತ್ತಾರೆ. ಇಂತಹ ಮಹತ್ವದ ವಿವರವನ್ನು ಹೀಗೆ ಸಂಗ್ರಹಿಸಿ ಇಟ್ಟುಕೊಳ್ಳುವುದು, ಹ್ಯಾಕರ್‌ಗಳಿಗೆ ಬ್ಯಾಂಕ್ ಖಾತೆಯ ನಿರ್ವಹಣೆಗೆ ಅವಕಾಶ ನೀಡಿದ್ದಕ್ಕೆ ಸಮ ಎಂದು ಲೋಕಲ್ ಸರ್ಕಲ್ಸ್ ಕಳವಳ ವ್ಯಕ್ತಪಡಿಸಿದೆ.
ಸಮೀಕ್ಷೆಯಲ್ಲಿ ಭಾಗವಹಿಸಿದವರಲ್ಲಿ ಶೇ 11ರಷ್ಟು ಮಂದಿ ಈ ವಿವರಗಳನ್ನು ತಮ್ಮ ಮೊಬೈಲ್ ಕಾಂಟಾಕ್ಟ್ ಲಿಸ್ಟ್‌ನಲ್ಲಿ ಸಂಗ್ರಹಿಸಿ ಇಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಈಗ ಬಹುತೇಕ ಅಪ್ಲಿಕೇಷನ್‌ಗಳು ಕಾಂಟಾಕ್ಟ್ ಲಿಸ್ಟ್‌ನ ಆಕ್ಸೆಸ್ ಕೇಳುತ್ತವೆ. ಹೀಗಾಗಿ ಈ ವಿವರಗಳನ್ನು ಕಾಂಟಾಕ್ಟ್ ಲಿಸ್ಟ್‌ನಲ್ಲಿ ಸಂಗ್ರಹಿಸಿ ಇಡುವುದು ಅತ್ಯಂತ ಅಪಾಯಕಾರಿ ಎಂದು ಲೋಕಲ್ ಸರ್ಕಲ್ಸ್ ಕಳವಳ ವ್ಯಕ್ತಪಡಿಸಿದೆ. ಈ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸಲು ಭಾರತೀಯ ರಿಸರ್ವ್ ಬ್ಯಾಂಕ್ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು ಎಂದು ಲೋಕಲ್ ಸರ್ಕಲ್ಸ್ ಶಿಫಾರಸು ಮಾಡಿದೆ.
ಎಲ್ಲೆಲ್ಲಿ ಸಂಗ್ರಹ
33 %ಮೊಬೈಲ್, ಕಂಪ್ಯೂಟರ್, ಇ-ಮೇಲ್‌ನಲ್ಲಿ ಬ್ಯಾಂಕ್, ಡೆಬಿಟ್ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ವಿವರ ಸಂಗ್ರಹಿಸಿ ಇಡುತ್ತೇವೆಎಂದವರ ಪ್ರಮಾಣ
7 %ಮೊಬೈಲ್ ಫೋನ್‌ಗಳಲ್ಲಿ ಈ ವಿವರ ಸಂಗ್ರಹಿಸಿ ಇಡುವವರ ಪ್ರಮಾಣ
15 %ಕಂಪ್ಯೂಟರ್ ಅಥವಾ ಇ-ಮೇಲ್‌ಲ್ಲಿ ಸಂಗ್ರಹಿಸಿ ಇಡುವವರ ಪ್ರಮಾಣ
11 %ಫೋನ್, ಕಂಪ್ಯೂಟರ್ ಮತ್ತು ಇಮೇಲ್ ಮೂರರಲ್ಲೂ ಸಂಗ್ರಹಿಸಿಇಡುತ್ತೇವೆ ಎಂದವರ ಪ್ರಮಾಣ
21 %ಇಂತಹ ವಿವರಗಳನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುತ್ತೇವೆ ಎಂದವರು
39 %ಕಾಗದಗಳಲ್ಲಿ ಈ ವಿವರಗಳನ್ನು ಬರೆದು ಇಟ್ಟುಕೊಳ್ಳುತ್ತೇವೆ ಎಂದವರು
ಮೊಬೈಲ್ ಮೊರೆ ಹೋಗಲು ಕಾರಣಗಳು
lಅತ್ಯಂತ ಕಷ್ಟಕರವಾದ ಪಾಸ್‌ವರ್ಡ್‌ಗಳನ್ನು ರಚಿಸಬಹುದು. ಆದರೆ ಅವುಗಳನ್ನು ನೆನಪಿನಲ್ಲಿ ಇರಿಸಿಕೊಳ್ಳುವುದು ಕಷ್ಟಸಾಧ್ಯ. ಹೀಗಾಗಿ ಮೊಬೈಲ್‌ನಲ್ಲಿ ಅವನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ
lಹಲವು ಬ್ಯಾಂಕ್ ಖಾತೆಗಳು, ಹಲವು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಪಾಸ್‌ವರ್ಡ್‌ಗಳನ್ನು ನೆನಪಿನಲ್ಲಿ ಇರಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಅವನ್ನು ಮೊಬೈಲ್, ಕಂಪ್ಯೂಟರ್ ಅಥವಾ ಇ-ಮೇಲ್‌ನಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ.
ಮೊಬೈಲ್ ಮೊರೆ ಹೋಗಲು ಕಾರಣಗಳು
lಅತ್ಯಂತ ಕಷ್ಟಕರವಾದ ಪಾಸ್‌ವರ್ಡ್‌ಗಳನ್ನು ರಚಿಸಬಹುದು. ಆದರೆ ಅವುಗಳನ್ನು ನೆನಪಿನಲ್ಲಿ ಇರಿಸಿಕೊಳ್ಳುವುದು ಕಷ್ಟಸಾಧ್ಯ. ಹೀಗಾಗಿ ಮೊಬೈಲ್‌ನಲ್ಲಿ ಅವನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ
lಹಲವು ಬ್ಯಾಂಕ್ ಖಾತೆಗಳು, ಹಲವು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಪಾಸ್‌ವರ್ಡ್‌ಗಳನ್ನು ನೆನಪಿನಲ್ಲಿ ಇರಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಅವನ್ನು ಮೊಬೈಲ್, ಕಂಪ್ಯೂಟರ್ ಅಥವಾ ಇ-ಮೇಲ್‌ನಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ
ಪಾಸ್‌ವರ್ಡ್ ವಿವರ ಹಂಚಿಕೆ
ರಷ್ಟು ಜನರು ತಮ್ಮ ಬ್ಯಾಂಕ್, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಪಾಸ್‌ವರ್ಡ್ ವಿವರಗಳನ್ನು ತಮ್ಮ ಹತ್ತಿರದ ಸಂಬಂಧಿಗಳು ಮತ್ತು ಆಪ್ತ ಸಹಾಯಕರ ಜತೆಗೆ ಹಂಚಿಕೊಳ್ಳುತ್ತೇವೆ ಎಂದಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.