ಮೊಬೈಲ್ ಬಳಕೆದಾರರಿಗೆ ಸೋನಿ ಇಂಡಿಯಾ ಸಿಹಿಸುದ್ದಿಯನ್ನು ನೀಡಿದ್ದು, ಸೋನಿ ಇಂಡಿಯಾದ ಹೊಸ ಉತ್ಪನ್ನ WH-CH520 ಹೆಡ್ ಪೋನ್‌ಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿವೆ.
WH-CH520 ವಯರ್ ಲೆಸ್ ಹೆಡ್ ಪೋನ್ ಆಗಿದ್ದು, ಹೆಡ್ ಪೋನ್‌ಗಳು ಸುಮಾರು 50 ಗಂಟೆಗಳ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ. ಅಲ್ಲದೇ ಈ ಹೆಡ್‌ಪೋನ್‌ಗಳನ್ನು ತ್ವರಿತವಾಗಿ ಚಾರ್ಚ್ ಮಾಡಬಹುದಾಗಿದೆ. ಬ್ಯಾಟರಿ ಆಯುಷ್ಯ ದೀರ್ಘ ಕಾಲ ಉಳಿಯುವುದರಿಂದ ಸಂಗೀತ ಆಲಿಸುವವರಿಗೆ ಕಲಾವಿದರಿಗೆ ಇದೊಂದು ಉತ್ತಮ ಗ್ಯಾಜೆಟ್ ಆಗಿದೆ. ದೀರ್ಘ ಪ್ರಯಾಣ ಮಾಡುವವರಿಗೆ ಇದರಿಂದ ಉಪಯೋಗವಾಗಲಿದೆ ಎಂದು ಕಂಪೆನಿ ತಿಳಿಸಿದೆ.
ಮೃದುವಾದ ಇಯರ್ ಪ್ಯಾಡ್ ಮತ್ತು ಹಗುರವಾದ ವಿನ್ಯಾಸದೊಂದಿಗೆ ಹೊಂದಾಣಿಕೆ ಮಾಡಬಹುದಾದ ಹೆಡ್ ಬ್ಯಾಂಡ್‌ಳನ್ನು ಈ ಹೆಡ್‌ಪೋನ್ ಒಳಗೊಂಡಿದೆ ಎಂದು ಕಂಪೆನಿ ತಿಳಿಸಿದೆ. ₹4,490 ಬೆಲೆಯ ಈ ಹೆಡ್‌ಪೋನ್‌ಗಳು 2023 ಏಪ್ರಿಲ್ 11ರಿಂದ ಮಾರುಕಟ್ಟೆಗೆ ಲಗ್ಗೆ ಇಡಲಿವೆ.
ಈ ಹೆಡ್‌ಪೋನ್‌ನ ವೈಶಿಷ್ಟ್ಯಗಳು:
1 50 ಗಂಟೆಗಳ ಬ್ಯಾಟರಿ ಬಾಳಿಕೆ ಮತ್ತು ತ್ವರಿತ ಚಾರ್ಜಿಂಗ್ : ಇದರಿಂದ ದೂರ ಪ್ರಯಾಣ ಮಾಡುವವರಿಗೆ ಅನುಕೂಲವಾಗಲಿದೆ.
2. ಮಲ್ಟಿಪಾಯಿಂಟ್ ಸಂಪರ್ಕ ಇರುವುದರಿಂದ ಎರಡು ಸಾಧನಗಳ ನಡುವೆ ತ್ವರಿತವಾಗಿ ಬದಲಾಯಿಸಬಹುದಾಗಿದೆ.
3. ಧ್ವನಿ ಗುಣಮಟ್ಟ ಉತ್ತಮವಾಗಿರುವುರಿಂದ ಸಂಗೀತ ಆಲಿಸುವುವರಿಗೆ, ಕರೆಯಲ್ಲಿ ಮಾತನಾಡುವವರಿಗೆ ಅನುಕೂಲವಾಗಲಿದೆ.
4. ಕಾಂಪ್ಯಾಕ್ಟ್ ಮ್ಯೂಸಿಕ್ ಫೈಲ್ಸ್‌ಗಳ ಗುಣಮಟ್ಟವನ್ನು ಸುಲಭವಾಗಿ ಹೆಚ್ಚಿಸುಬಹುದಾಗಿದೆ.
5 ಈ ಹೆಡ್‌ಪೋನ್‌ಗಳು ಹಗುರವಾಗಿದ್ದು, ದಿನಪೂರ್ತಿ ಬಳಕೆ ಮಾಡುವ ಹಾಗೆ ವಿನ್ಯಾಸಗೊಳಿಸಲಾಗಿದೆ.
6. ಇನ್‌ಬಿಲ್ಟ್ ಮೈಕ್‌ನೊಂದಿಗೆ ಕ್ರಿಸ್ಟಲ್ ಕ್ಲಿಯರ್ ಹ್ಯಾಂಡ್ಸ್-ಫ್ರೀ ಕರೆ ಸೌಲಭ್ಯವನ್ನು ನೀಡಲಾಗಿದೆ.
7. ಫಾಸ್ಟ್ ಪೇರ್ ನೆರವಿನಿಂದ ಹೆಡ್‌ಪೋನ್‌ಗಳನ್ನು ಸುಲಭವಾಗಿ ಹುಡುಕಬಹುದಾಗಿದೆ.
8. ಸ್ವಿಫ್ಟ್ ಪೇರ್ ನೆರವಿನಿಂದ ಕಂಪ್ಯೂಟರ್‌ಗೆ ಸುಲಭವಾಗಿ ಜೋಡಿಸಬಹುದಾಗಿದೆ.
9. 360 ರಿಯಾಲಿಟಿ ಆಡಿಯೊ ಹೊಂದಾಣಿಕೆಯೊಂದಿಗೆ ಸುತ್ತಲಿನ ಧ್ವನಿಯನ್ನು ಮ್ಯೂಟ್ ಮಾಡಿ ಆನಂದಿಸಬಹುದಾಗಿದೆ.
10. ಇತರ ಪರಿಕರಗಳ ಜೊತೆಗೆ ಹೆಡ್‌ಪೋನ್ ಕೊಂಡೊಯ್ಯಲು ಅನುಕೂಲವಾಗುವ ಹಾಗೆ ಸ್ವಿವೆಲ್ ವಿನ್ಯಾಸದಲ್ಲಿ ರೂಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.