ಭಾರತದ ಸ್ಮಾರ್ಟ್‌ವಾಚ್ ಮತ್ತು ಫಿಟ್ನೆಸ್ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಫೈರ್ ಬೋಲ್ಟ್ ಮಾದರಿಗಳು ಹೆಚ್ಚು ಜನಪ್ರಿಯತೆಗಳಿಸಿವೆ. ಬಜೆಟ್ ದರಕ್ಕೆ ಹೆಚ್ಚಿನ ಫೀಚರ್‌ಗಳನ್ನು ಬಳಕೆದಾರರಿಗೆ ಫೈರ್ ಬೋಲ್ಟ್ ಒದಗಿಸುತ್ತದೆ.
ಈ ಬಾರಿ ಭಾರತದ ಫಿಟ್ನೆಸ್ ಮತ್ತು ಗ್ಯಾಜೆಟ್ ಮಾರುಕಟ್ಟೆಗೆ ಫೈರ್ ಬೋಲ್ಟ್, ಟಾಕ್ ಅಲ್ಟ್ರಾ ಎನ್ನುವ ನೂತನ ಸ್ಮಾರ್ಟ್‌ವಾಚ್ ಅನ್ನು ಬಿಡುಗಡೆ ಮಾಡಿದೆ.
ಹೊಸ ಫೈರ್ ಬೋಲ್ಟ್ ಟಾಕ್ ಅಲ್ಟ್ರಾ, 1.39 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ, ಬ್ಲೂಟೂತ್ ಕಾಲಿಂಗ್ ಬೆಂಬಲ ಹೊಂದಿದೆ ಎಂದು ಕಂಪನಿ ತಿಳಿಸಿದೆ.
ಜತೆಗೆ, 123 ವಿವಿಧ ಬಗೆಯ ಫಿಟ್ನೆಸ್ ಮತ್ತು ಸ್ಪೋರ್ಟ್ಸ್ ಮೋಡ್ ಟ್ರ್ಯಾಕಿಂಗ್, ಹೃದಯ ಬಡಿತ ಮಾಪನ ಮತ್ತು ರಕ್ತದಲ್ಲಿ ಆಮ್ಲಜನಕದ ಪ್ರಮಾಣವನ್ನು ಅಳೆಯುವ ಸೆನ್ಸರ್‌ಗಳನ್ನು ಹೊಂದಿದೆ. IP68 ವಾಟರ್ ಮತ್ತು ಡಸ್ಟ್ ರೆಸಿಸ್ಟನ್ಸ್ ರೇಟಿಂಗ್ ಫೈರ್ ಬೋಲ್ಟ್ ಸ್ಮಾರ್ಟ್‌ವಾಚ್‌ನ ವಿಶೇಷತೆಯಾಗಿದೆ.
ಫೈರ್ ಬೋಲ್ಟ್ ಟಾಕ್ ಅಲ್ಟ್ರಾ ಸ್ಮಾರ್ಟ್‌ವಾಚ್, ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್ ಇಂಡಿಯಾ ಮೂಲಕ ದೊರೆಯುತ್ತದೆ ಎಂದು ಕಂಪನಿ ತಿಳಿಸಿದೆ.
ನೂತನ ಸ್ಮಾರ್ಟ್‌ವಾಚ್ ಕಪ್ಪು, ನೀಲಿ, ಕೆಂಪು, ಗ್ರೇ, ಪಿಂಕ್ ಮತ್ತು ಟೀಲ್ ಎಂಬ 6 ಆಕರ್ಷಕ ಬಣ್ಣಗಳಲ್ಲಿ ದೊರೆಯಲಿದೆ ಎಂದು ಫೈರ್ ಬೋಲ್ಟ್ ಹೇಳಿದ್ದು, ₹1,999 ದರಕ್ಕೆ ಲಭ್ಯವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.