ಬೆಂಗಳೂರು: ಸ್ಯಾಮ್‌ಸಂಗ್‌ನ Galaxy S23 ಸರಣಿಯ ಫೋನ್‌ಗಳು ಸ್ಮಾರ್ಟ್‌ಫೋನ್ ಅನುಭವವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿರುವ ವಿಶ್ವಾಸಾರ್ಹ ಪ್ರೀಮಿಯಂ ಮೊಬೈಲ್‌ಗಳಾಗಿವೆ.
ಪರಿಸರದ ಮೇಲೆ ಕಡಿಮೆ ಪ್ರಭಾವ ಹೊಂದಿರುವ ಈ ಸರಣಿಯ ಮೊಬೈಲ್ ಉತ್ಪಾದನೆಯಲ್ಲಿ ಬೆಂಗಳೂರಿನಲ್ಲಿರುವ ಸ್ಯಾಮ್‌ಸಂಗ್ ಆರ್ ಅಂಡ್ ಡಿ ಇನ್‌ಸ್ಟಿಟ್ಯೂಟ್(ಎಸ್‌ಆರ್‌ಐ–ಬಿ) ಯುವ ಎಂಜಿನಿಯರ್‌ಗಳು ಮಹತ್ವದ ಪಾತ್ರ ವಹಿಸಿದ್ದಾರೆ.
SRI-Bನ ಯುವ ಎಂಜಿನಿಯರ್‌ಗಳು ಕ್ಯಾಮರಾದಲ್ಲಿನ ಪ್ರಮುಖ ವೈಶಿಷ್ಟ್ಯಗಳ ಅಭಿವೃದ್ಧಿ, ಬಹು ಸಾಧನದ ಅನುಭವ, ಎಐ ಮತ್ತು Galaxy S23ನಲ್ಲಿನ ಇತರ ಸೇವೆಗಳ ಅಭಿವೃದ್ಧಿಯಲ್ಲಿ ಗಣನೀಯವಾಗಿ ಕೊಡುಗೆ ನೀಡಿದ್ದಾರೆ.
‘ನಮ್ಮ ಆವಿಷ್ಕಾರಗಳು ಯುವ ಗ್ರಾಹಕರಿಂದ ಸ್ಫೂರ್ತಿ ಪಡೆದಿವೆ. ಅವರ ಕುತೂಹಲ ಮತ್ತು ನಮ್ಮ ತಜ್ಞರ ಪರಿಣತಿ ಹಾಗೂ ಕೌಶಲ್ಯಗಳು ಸೇರಿ ಸ್ಮಾರ್ಟ್‌ಫೋನ್ ಕ್ಯಾಮೆರಾಗಳು, 5G ಮತ್ತು ಬಹು-ಸಾಧನದ ಅನುಭವದಲ್ಲಿ ಪ್ರಗತಿಯ ತಂತ್ರಜ್ಞಾನವನ್ನು ಸಾಧಿಸಲು ನಮಗೆ ಸಾಧ್ಯವಾಯಿತು. Galaxy S23 ಸರಣಿಯು ಖಂಡಿತಾ ನಮ್ಮ ಗ್ರಾಹಕರನ್ನು ಸಂತೋಷಪಡಿಸುತ್ತದೆ ಮತ್ತು ಹೊಸ ಉತ್ಸಾಹವನ್ನು ನೀಡುತ್ತದೆ’ ಎಂದು ಬೆಂಗಳೂರಿನ ಸ್ಯಾಮ್‌ಸಂಗ್ ಆರ್ ಅಂಡ್ ಡಿ ಇನ್‌ಸ್ಟಿಟ್ಯೂಟ್‌ನ ಸಿಟಿಒ ಮೋಹನ್ ರಾವ್ ಗೋಲಿ ಹೇಳಿದ್ದಾರೆ.
ಕ್ಯಾಮೆರಾ
ನ್ಯೂ ಗ್ಯಾಲಕ್ಸಿ ಎಸ್23 ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಪ್ರೋ–ಗ್ರೇಡ್ ಸರಣಿಯ ಎಐ ಕ್ಯಾಮೆರಾ ಸಿಸ್ಟಂ ಇದ್ದು, ಕಡಿಮೆ ಬೆಳಕಿನ ಸಮಯದಲ್ಲಿ ಅತ್ಯದ್ಭುತ ಚಿತ್ರ ಮತ್ತು ವಿಡಿಯೊಗಳನ್ನು ಸೆರೆಹಿಡಿಯಲಿದೆ. ನಮ್ಮ ಯುವ ಮತ್ತು ಪ್ರತಿಭಾವಂತ ಎಂಜಿನಿಯರ್‌ಗಳಿಂದ ಸ್ಫೂರ್ತಿ ಪಡೆದು ಸ್ಮಾರ್ಟ್‌ಫೋನ್‌ನಲ್ಲಿ ಉತ್ತಮ ಫೀಚರ್‌ಗಳನ್ನು ನೀಡುವ ದೃಷ್ಟಿಯಿಂದ ನಮ್ಮ ನುರಿತ ತಂತ್ರಜ್ಞರು ಅತ್ಯಂತ ಉತ್ಸಾಹದಿಂದ ಸ್ಪರ್ಧಾತ್ಮಕ ಫೋಟೊಗ್ರಫಿ ಮತ್ತು ವಿಷನ್ ಎಐ ತಂತ್ರಜ್ಞಾನ ನೀಡಲು ಶ್ರಮ ವಹಿಸಿದ್ದಾರೆ. ನೈಟೋಗ್ರಫಿ, ಪ್ರೋ ಗ್ರೇಡ್ ವಿಡಿಯೊ, ಹೈ ರೆಸಲ್ಯೂಶನ್ ಎಚ್‌ಡಿಆರ್ ಮತ್ತು ಆಸ್ಟ್ರೊ ಫೋಟೊಗ್ರಫಿ ಇದರಲ್ಲಿ ಒಳಗೊಂಡಿವೆ ಎಂದು ಮೋಹನ್ ರಾವ್ ಹೇಳಿದ್ದಾರ
ಸ್ಮಾರ್ಟ್ ಥಿಂಗ್ಸ್
Galaxy S23 ಸರಣಿಯಲ್ಲಿನ ಬಹು ಸಾಧನದ ಅನುಭವಗಳು ಬಳಕೆದಾರರಿಗೆ ತಮ್ಮ ದೈನಂದಿನ ಜೀವನವನ್ನು ಸುಧಾರಿಸಲು ವರ್ಧಿತ ಸಂಪರ್ಕ ಮತ್ತು ಗ್ರಾಹಕೀಕರಣವನ್ನು ನೀಡುತ್ತವೆ. ನಿರ್ದಿಷ್ಟವಾಗಿ ಹೇಳುವುದಾದರೆ, SRI-B ಅಭಿವೃದ್ಧಿಪಡಿಸಿದ ಸ್ಮಾರ್ಟ್ ಲೈಟಿಂಗ್ ಸೇವೆಯು ಬಳಕೆದಾರರ ವೈಯಕ್ತಿಕ ಅನುಕೂಲವನ್ನು ಕೇಂದ್ರೀಕರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.