ADVERTISEMENT

ಭಾರತಕ್ಕೆ ಟೆಕ್ನೊ ಸ್ಪಾರ್ಕ್‌ ಸ್ಮಾರ್ಟ್‌ಫೋನ್‌

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 11:36 IST
Last Updated 29 ಆಗಸ್ಟ್ 2019, 11:36 IST
go
go   

ಟೆಕ್ನೊ ಕಂಪನಿಯು ಭಾರತದ ಮಾರುಕಟ್ಟೆಗೆ ’ಸ್ಪರ್ಕ್‌‘ ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. 6.1 ಎಚ್‌ಡಿ ಪ್ಲಸ್‌ ಡಾಟ್‌ ನಾಚ್‌ ಡಿಸ್‌ಪ್ಲೇ ಮತ್ತು ಎಐ ಫ್ರಂಟ್‌ ಫ್ಲ್ಯಾಷ್‌ ಹೊಂದಿರುವ ಹ್ಯಾಂಡ್‌ಸೆಟ್‌ ₹ 5,499 ರಿಂದ ಆರಂಭವಾಗಲಿದೆ.

ಆರಂಭಿಕ, ಮಧ್ಯಮ ಮತ್ತು ಪ್ರೀಮಿಯಂ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುವ ಕಂಪನಿಯು ಇದೀಗ ಹಬ್ಬದ ಸಂದರ್ಭದ ಕೊಡುಗೆಯಾಗಿ ಆರಂಭಿಕ ಬೆಲೆಯ ಹ್ಯಾಂಡ್‌ಸೆಟ್‌ ಬಿಡುಗಡೆ ಮಾಡಿದೆ.

ಈಚೆಗಷ್ಟೇ ಪ್ರೀಮಿಯಂ ವಿಭಾಗದಲ್ಲಿಫ್ಯಾಂಟಮ್‌ 9 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿರುವ ಕಂಪನಿಯು ತನ್ನ ಜಾಗತಿಕ ಉತ್ಪನ್ನವಾದ ’ಸ್ಪಾರ್ಕ್‌‘ ಅನ್ನು ಭಾರತದಲ್ಲಿಯೂ ಪರಿಚಯಿಸಿದೆ.ದೇಶದಾದ್ಯಂತ 35 ಸಾವಿರಕ್ಕೂ ಅಧಿಕ ರಿಟೇಲ್‌ ಮಳಿಗೆಗಳಲ್ಲಿ ಇಂದಿನಿಂದಲೇ ಖರೀದಿಗೆ ಲಭ್ಯವಾಗಿವೆ.

ADVERTISEMENT

ಟೆಕ್ನೊ ಸ್ಪಾರ್ಕ್‌ ಗೊ: ಬೆಲೆ ₹ 5,499. 8ಎಂಪಿ ಎಐ ರಿಯರ್‌ ಕ್ಯಾಮೆರಾ, 5ಎಂಪಿ ಸೆಲ್ಫಿ ಕ್ಯಾಮೆರಾ ಇದೆ. 2ಜಿಬಿ ರ್‍ಯಾಮ್ ಮತ್ತು 16 ಜಿಬಿ ರೋಮ್ 256 ಜಿಬಿವರೆಗೂ ವಿಸ್ತರಣೆ ಸಾಧ್ಯ.ಟೆಕ್ನೊ ಸ್ಪಾರ್ಕ್ ಗೊ ಖರೀದಿಸುವವರಿಗೆ ₹ 799ರ ಬೆಲೆಯ ಬ್ಲೂಟೂತ್ ಇಯರ್‌ಫೋನ್‌ ಉಚಿತವಾಗಿ ಸಿಗಲಿದೆ. ಈ ಕೊಡುಗೆಯು ಸೀಮಿತ ಅವಧಿಗೆ ಮಾತ್ರವೇ ಇರಲಿದೆ ಎಂದು ಕಂಪನಿ ತಿಳಿಸಿದೆ.

ಟೆಕ್ನೊ ಸ್ಪಾರ್ಕ್‌ 4 ಏರ್‌: ಬೆಲೆ ₹ 6,999.13ಎಂಪಿ ಡ್ಯುಯಲ್‌ ಲೆನ್ಸ್ ರಿಯರ್ ಕ್ಯಾಮೆರಾ, 5 ಎಂಪಿ ಸೆಲ್ಪಿ ಕ್ಯಾಮೆರಾ ಇದೆ. 3ಜಿಬಿ ರ್‍ಯಾಮ್‌ ಮತ್ತು 32 ಜಿಬಿ ರೋಮ್‌ 256 ಜಿಬಿವರೆಗೂ ವಿಸ್ತರಣೆ ಸಾಧ್ಯ.

ಎರಡೂ ಫೋನ್‌ಗಳು ಆಂಡ್ರಾಯ್ಡ್ 9.0 ಆಧಾರಿತHiOS,3000 ಎಂಎಎಚ್‌ ಬ್ಯಾಟರಿ ಹೊಂದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.