ಬೆಂಗಳೂರು: ಟೆಕ್‌ನೊ ಸ್ಮಾರ್ಟ್‌ಫೋನ್‌ಗಳ ಪೈಕಿ ಕೈಗೆಟುಕುವ ಬೆಲೆಯ ಹಾಗೂ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಆಯ್ಕೆಗಳನ್ನು ಒಳಗೊಂಡಿರುವ ಸ್ಪಾರ್ಕ್ 5, ಮನೆ ಬಾಗಿಲಿಗೆ ತಲುಪುವ ವ್ಯವಸ್ಥೆಯನ್ನೂ ಹೊಂದಿದೆ. 6.6 ಇಂಚು ಎಚ್‌ಡಿ ಡಾಟ್–ಇನ್ ಡಿಸ್‌ಪ್ಲೇ ಹಾಗೂ 13 ಎಂಪಿ ಎಐ ಕ್ವಾಡ್–ಕ್ಯಾಮೆರಾ ಗಮನ ಸೆಳೆಯುತ್ತಿದೆ.
ಒಂದು ಬಾರಿ ಸ್ಕ್ರೀನ್ ಬದಲಿಸಿಕೊಡುವುದು ಹಾಗೂ 1 ತಿಂಗಳು ವಾರಂಟಿ ವಿಸ್ತರಣೆ (12+1 ತಿಂಗಳು) ಕೊಡುಗೆಯನ್ನು ಕಂಪನಿ ನೀಡುತ್ತಿದ್ದು, ಅಮೆಜಾನ್‌ನಲ್ಲಿ ಸ್ಪಾರ್ಕ್ 5 ಲಭ್ಯವಿದೆ. ಈ ಹೊಸ ಫೋನ್‌ಗೆ ₹7,999 ಬೆಲೆ ನಿಗದಿ ಪಡಿಸಲಾಗಿದೆ.
ಈ ಸ್ಮಾರ್ಟ್‌ಫೋನ್ ಐಸ್ ಜೇಡೈಟ್ ಮತ್ತು ಸ್ಪಾರ್ಕ್ ಆರೆಂಜ್ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಮೇ 25ರಿಂದ ಮಳಿಗೆಗಳಲ್ಲೂ ಫೋನ್ ಖರೀದಿಗೆ ಸಿಗಲಿದೆ ಅಥವಾ ಕಂಪನಿಯ ಅಧಿಕೃತ ವೆಬ್‌ಸೈಟ್ (www.tecno-mobile.in/home-delivery) ಮೂಲಕವೂ ಖರೀದಿಸಬಹುದಾಗಿದೆ.
ಹಿಂಬದಿಯಲ್ಲಿ ಕ್ವಾಡ್ ಕ್ಯಾಮೆರಾ ಇದ್ದು, 13ಎಂಪಿ+2ಎಂಪಿ+2ಎಂಪಿ+ಎಐ ಲೆನ್ಸ್ ಹಾಗೂ ಕ್ವಾಡ್ ಫ್ಲ್ಯಾಷ್ ಹೊಂದಿದೆ. ಎಐ ಬೆಳಕು ಹಾಗೂ ವಸ್ತುಗಳಿಗೆ ತಕ್ಕಂತೆ ಆಯ್ಕೆಗಳನ್ನು ಬದಲಿಸಿಕೊಂಡು ಉತ್ತಮ ಫೋಟೊ ಪಡೆಯಲು ಸಹಕಾರಿಯಾಗಿದೆ. ಸೆಲ್ಫಿಗಾಗಿ 8ಎಂಪಿ ಕ್ಯಾಮೆರಾದೊಂದಿಗೆ ಫ್ಲ್ಯಾಷ್ ಸಹ ನೀಡಲಾಗಿದೆ. ಫಿಂಗರ್‌ಪ್ರಿಂಟ್ ಸೆನ್ಸರ್ ಹಾಗೂ ಫೇಸ್ ಅನ್‌ಲಾಕ್ ಆಯ್ಕೆಗಳೂ ಇವೆ.
5000 ಎಂಎಎಚ್ ಬ್ಯಾಟರಿ ಇರುವುದರಿಂದ ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ, 16 ಗಂಟೆಗಳ ವಿಡಿಯೊ, 120 ಗಂಟೆ ಮ್ಯೂಸಿಕ್ ಅಥವಾ 35 ಗಂಟೆ ಕರೆ ಮಾಡಲು ಬಳಸಬಹುದು. 32 ಜಿಬಿ ಸಂಗ್ರಹ ಸಾಮರ್ಥ್ಯ ನೀಡಲಾಗಿದ್ದು, 256 ಜಿಬಿ ವರೆಗೂ ವಿಸ್ತರಿಸಿಕೊಳ್ಳಬಹುದಾಗಿದೆ. ಹೀಲಿಯೊ ಎ22 ಪ್ರೊಸೆಸರ್ ಹೊಂದಿದೆ.
ಟೆಕ್‌ನೊ ಸ್ಪಾರ್ಕ್ 5 ಗುಣಲಕ್ಷಣಗಳು:
* ಡಿಸ್‌ಪ್ಲೇ: 6.6 ಎಚ್‌ಡಿ+ಡಾಟ್–ಇನ್
* ಕ್ಯಾಮೆರಾ: ಸೆಲ್ಫಿಗಾಗಿ 8ಎಂಪಿ+ಎರಡು ಫ್ಲ್ಯಾಷ್; ಹಿಂಬದಿಯಲ್ಲಿ 13ಎಂಪಿ+2ಎಂಪಿ+2ಎಂಪಿ+ಎಐ ಲೆನ್ಸ್
* ಸಾಮರ್ಥ್ಯ: 2ಜಿಬಿ ರ್‍ಯಾಮ್; 32ಜಿಬಿ ಸಂಗ್ರಹ ಸಾಮರ್ಥ್ಯ
* ಬ್ಯಾಟರಿ: 5000ಎಂಎಎಚ್
* ಪ್ರೊಸೆಸರ್: ಹೀಲಿಯೊ ಎ22, ಕ್ವಾಡ್ ಕೋರ್–2ಗಿಗಾ ಹರ್ಟ್ಸ್ ಸಿಪಿಯು
* ಬೆಲೆ: ₹7,999
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.