ಬೆಂಗಳೂರು: ದೇಶದಲ್ಲಿ ಫೀಚರ್ ಫೋನ್‌ಗಳ ಬಳಕೆ ಹೆಚ್ಚುತ್ತಿದ್ದು ಇದರ ಭಾಗವಾಗಿ ನೋಕಿಯಾ ಕಂಪನಿ ‘ನೋಕಿಯಾ 110 4G‘ ಹಾಗೂ ‘ನೋಕಿಯಾ 110 2G‘ ಫೀಚರ್ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಬೇಸಿಕ್ ಸೌಕರ್ಯಗಳಿರುವ ಈ ಫೀಚರ್ ಫೋನ್‌ಗಳ ಮೂಲಕ ಯುಪಿಐ ಹಾಗೂ ಸ್ಕ್ಯಾನ್ ಮೂಲಕ ಪಾವತಿ ಮಾಡಬಹುದಾದ ವೈಶಿಷ್ಟ್ಯವನ್ನು ಈ ಫೋನ್‌ಗಳು ಹೊಂದಿವೆ.
ಅತ್ಯುತ್ತಮ ಕಾರ್ಯಕ್ಷಮತೆ, ಗುಣಮಟ್ಟ, ಆಕರ್ಷಕ ವಿನ್ಯಾಸದೊಂದಿಗೆ ಈ ಫೋನ್‌ಗಳು ನಿರ್ಮಾಣವಾಗಿವೆ. ಬ್ಯಾಟರಿ ಬ್ಯಾಕಪ್ ಸಹ ಚೆನ್ನಾಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಫೋನ್‌ಗಳು,ಇನ್‌ಬಿಲ್ಟ್ ರಿಯರ್ ಕ್ಯಾಮೆರಾ, ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ 32GB ವರೆಗೆ ಸ್ಟೋರೇಜ್ ಸಾಮರ್ಥ್ಯ, ಆಟೊ ಕಾಲ್ ರೆಕಾರ್ಡರ್ ಹಾಗೂ ಹೆಚ್‌ಡಿ ವಾಯ್ಸ್ ಫೀಚರ್ಸ್‌ಗಳನ್ನು ಹೊಂದಿವೆ. ಮುಖ್ಯವಾಗಿ ಯುಪಿಐ ಪಾವತಿ ಮಾಡುವ ಫೀಚರ್ಸ್ ಇದೆ. ಸ್ಕ್ಯಾನ್ ಮತ್ತು ಯುಪಿಐ ಬಳಕೆ ಮಾಡಿಕೊಂಡು ಈ ಫೋನ್‌ಗಳಲ್ಲಿ ಡಿಜಿಟಲ್ ಪಾವತಿ ಮಾಡಬಹುದು.
ಆಕರ್ಷಕ ವಿನ್ಯಾಸ ಹೊಂದಿರುವ ಈ ಫೋನ್‌ಗಳು ಬಳಕೆದಾರರಿಗೆ ಅಗತ್ಯ ಇರುವ ಎಲ್ಲಾ ರೀತಿಯ ಸೇವೆಗಳನ್ನು ನೀಡುತ್ತವೆ ಎಂದು ನೋಕಿಯಾ ಕಂಪನಿ ಹೇಳಿದೆ. ನೋಕಿಯಾ 110–2G ಫೋನ್ 1000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ನೋಕಿಯಾ 110 4G ಫೋನ್ 1450 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು ಉತ್ತಮ ಬ್ಯಾಕಪ್ ಇರಲಿದೆ.
ನಮ್ಮ ಗ್ರಾಹಕರಿಗೆ ಅತ್ಯುತ್ತಮ ವೈಶಿಷ್ಟ್ಯಗಳಿರುವ ಫೀಚರ್ ಪೋನ್‌ಗಳನ್ನು ಪರಿಚಯಿಸಿರುವುದಕ್ಕೆ ನಮಗೆ ಸಂತಸವಾಗಿದೆ ಎಂದು ಕಂಪೆನಿಯ ಎಚ್‌ಎಂಡಿ ಗ್ಲೋಬಲ್‌ನ ಉಪಾಧ್ಯಕ್ಷ ರವಿ ಕುನ್ವರ್ ಹೇಳಿದ್ದಾರೆ.
ನಮ್ಮ ಬಳಕೆದಾರರಿಗೆ ಉತ್ತಮ ಫೋನ್‌ಗಳನ್ನು ನೀಡುವ ಭಾಗವಾಗಿ ಈ ಎರಡು ಫೀಚರ್ ಫೋನ್‌ಗಳನ್ನು ಪರಿಚಯಿಸಲಾಗಿದೆ. ಬದಲಾಗುತ್ತಿರುವ ಕಾಲಕ್ಕೆ ಸುಲಭವಾಗಿ ಹೊಂದಿಕೊಳ್ಳುವಂತಹ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ ಎಂದು ರವಿ ಕುನ್ವರ್ ಹೇಳಿದ್ದಾರೆ.
ನೋಕಿಯಾ 110 4G ನೀಲಿ ಮತ್ತು ನೇರಳೆ ಬಣ್ಣಗಳಲ್ಲಿ ಹಾಗೂ ನೋಕಿಯಾ 110 2G ಕಪ್ಪು ಮತ್ತು ಬೂದು ಬಣ್ಣಗಳಲ್ಲಿ ದೊರೆಯಲಿದೆ. ನೋಕಿಯಾ 110 4G ಬೆಲೆ ₹2499, ನೋಕಿಯಾ 110 2G ಬೆಲೆ ₹ 1699 ಇರಲಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಮೊಬೈಲ್‌ಗಳು ದೇಶದ ಎಲ್ಲಾ ಮಾದರಿಯ ಮಾರುಕಟ್ಟೆಗಳಲ್ಲಿ ದೊರೆಯಲಿದೆ. ಹೆಚ್ಚಿನ ಮಾಹಿತಿ ಪಡೆಯಲು ಈ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ವೆಬ್‌ಸೈಟ್: www.Nokia.com/phones
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.