ನವದೆಹಲಿ: ಥಾಮ್ಸನ್ ಭಾರತದಲ್ಲಿಯೇ ತಯಾರಿಸಿರುವ ಹೊಸ ಆ್ಯಂಡ್ರಾಯ್ಡ್ ಟಿವಿಗಳನ್ನು ಬಿಡುಗಡೆ ಮಾಡಿದೆ. ಗೂಗಲ್ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಪಾಥ್ (PATH) ಮತ್ತು ಓಥ್ (OATH) ಮಾದರಿಯ ಟಿವಿಗಳನ್ನು ಹೊರತರಲಾಗಿದೆ.
ಥಾಮ್ಸನ್ ಫಾಥ್ 9ಎ, 9ಆರ್ ಸರಣಿ ಹಾಗೂ ಓಥ್ ಪ್ರೊ ಮಾದರಿಯ ಟಿವಿಗಳು 32 ಇಂಚು, 40 ಇಂಚು, 43 ಇಂಚು, 50 ಇಂಚು, 55 ಇಂಚು ಹಾಗೂ 75 ಇಂಚುಗಳಲ್ಲಿ ಲಭ್ಯವಿರಲಿದೆ.
ಟಿವಿಯ ಆರಂಭಿಕ ಬೆಲೆ ₹10,999 ಹಾಗೂ 75 ಇಂಚಿನ ಆ್ಯಂಡ್ರಾಯ್ಡ್ ಟಿವಿಗೆ ₹99,999 ನಿಗದಿಯಾಗಿದೆ. ಆಗಸ್ಟ್ 6ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಟಿವಿಗಳು ಖರೀದಿಗೆ ಸಿಗಲಿವೆ.
4ಕೆ ಅಲ್ಟ್ರಾ ಎಚ್‌ಡಿ ರೆಸಲ್ಯೂಷನ್, ಕ್ವಾಡ್‌ಕೋರ್ ಸಿಪಿಯು ಒಳಗೊಂಡಿದೆ. ಆ್ಯಂಡ್ರಾಯ್ಡ್ 9.0 ಒಎಸ್, ಅಪ್ಲಿಕೇಷನ್ ಡೌನ್‌ಲೋಡ್ ಮಾಡಲು ಗೂಗಲ್ ಪ್ಲೇ ಸ್ಟೋರ್, 178 ಡಿಗ್ರಿ ವೀಕ್ಷಣೆ, ಅಮೆಜಾನ್ ಪ್ರೈಂ, ಯುಟ್ಯೂಬ್ ಹಾಗೂ ಗೂಗಲ್ ಅಸಿಸ್ಟಂಟ್‌ಗಾಗಿ ರಿಮೋಟ್‌ನಲ್ಲಿ ಪ್ರತ್ಯೇಕ ಬಟನ್ ನೀಡಲಾಗಿದೆ. ಯುಎಸ್‌ಬಿ, ಎಚ್‌ಡಿಎಂಐ ಹಾಗೂ ಬ್ಲೂಟೂಥ್ ಮೂಲಕ ಟಿವಿಗೆ ಸಂಪರ್ಕಿಸಬಹುದು. ಟಿವಿಗೆ ಕ್ರೋಮ್‌ಕಾಸ್ಟ್ ಮೂಲಕ ಮೊಬೈಲ್ ಸಂಪರ್ಕಿಸುವ ಆಯ್ಕೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.