ಎಚ್‌ಎಂಡಿ ಗ್ಲೋಬಲ್ ಕಂಪನಿಯು ಅಪ್‌ಗ್ರೇಡೆಡ್ ನೋಕಿಯಾ 105 ಮತ್ತು ಹೊಸ ನೋಕಿಯಾ 105 ಪ್ಲಸ್ ಫೀಚರ್ ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಉತ್ಪನ್ನಗಳು ಬ್ರಾಂಡ್‌ನ ಸಿಗ್ನೇಚರ್ ಮೌಲ್ಯ ಮತ್ತು ಅತ್ಯುತ್ತಮ ಬಳಕೆಯ ಅನುಭವದ ಭರವಸೆ ನೀಡುತ್ತವೆ ಎಂದು ಕಂಪನಿ ಹೇಳಿದೆ.
ನೋಕಿಯಾ 105 ಆರಾಮದಾಯಕವಾಗಿ ಕೈಯಲ್ಲಿ ಹಿಡಿದುಕೊಳ್ಳಬಲ್ಲ ಆಧುನಿಕ ವಿನ್ಯಾಸವನ್ನು ಹೊಂದಿದೆ. ವೈರ್‌ಲೆಸ್ ಎಫ್‌ಎಂ ರೇಡಿಯೊದಂತಹ ಹೊಚ್ಚ ಹೊಸ ವೈಶಿಷ್ಟ್ಯ, ಅಧಿಕ ಟಾಕ್ ಟೈಮ್ ಮತ್ತು ಗೇಮ್‌ಗಳನ್ನು ಆನಂದಿಸಲು ದೀರ್ಘಾವಧಿ ಬಾಳಿಕೆಯ ಬ್ಯಾಟರಿ ಇದೆ.
ನೋಕಿಯಾ 105 ಪ್ಲಸ್‌ನಲ್ಲಿ ಎಂಪಿ3 ಪ್ಲೇಯರ್, ಸ್ವಯಂ ಕರೆ ರೆಕಾರ್ಡಿಂಗ್ ಮತ್ತು ಮೆಮೊರಿ ಕಾರ್ಡ್ ವೈಶಿಷ್ಟ್ಯಗಳಿವೆ. ಬಜೆಟ್ ವರ್ಗದ ಫೋನ್‌ಗಳಿಗೆ ಇದು ಮೌಲ್ಯ ನೀಡಿದೆ.
ಕೈಗೆಟುಕುವ ಬೆಲೆ, ಮನರಂಜನೆಯ ಜೊತೆಗೆ ಉಪಯುಕ್ತವಾಗಿರುವ ಈ ಫೋನ್, ಕೊಡುವ ಹಣಕ್ಕೆ ತಕ್ಕ ಮೌಲ್ಯದ ಫೋನ್‌ಗಳನ್ನು ಹುಡುಕುತ್ತಿರುವ ಗ್ರಾಹಕರಿಗೆ ಸೂಕ್ತವಾಗಿದೆ. ಡಿಜಿಟಲ್ ಡಿಟಾಕ್ಸ್ ಅನ್ನು ಬಯಸುವ ಗ್ರಾಹಕರಿಗೆ ಇವುಗಳು ಪರಿಪೂರ್ಣ ಫೋನ್‌ಗಳಾಗಿವೆ. ಈ ಫೋನ್‌ಗಳು ಖಚಿತ ಗುಣಮಟ್ಟ ಮತ್ತು ಬಾಳಿಕೆ ಭರವಸೆ ನೀಡುತ್ತವೆ. ಒಂದು ವರ್ಷದ ಬದಲಿ ಗ್ಯಾರಂಟಿ ಸಹ ಇದೆ.
'ಇತ್ತೀಚಿನ ಐಡಿಸಿ ವರದಿಗಳ ಪ್ರಕಾರ ನೋಕಿಯಾ ಫೋನ್ ಮೌಲ್ಯ ಮತ್ತು ಜನಪ್ರಿಯತೆಯಲ್ಲಿ ಭಾರತದಲ್ಲಿ ನಂಬರ್ 1 ಫೀಚರ್ ಫೋನ್ ಬ್ರ್ಯಾಂಡ್ ಆಗಿದೆ ಮತ್ತು ನೋಕಿಯಾ 105 ಮತ್ತು ನೋಕಿಯಾ 105 ಪ್ಲಸ್ ಬಿಡುಗಡೆಯೊಂದಿಗೆ ನಾವು ಈ ವಿಭಾಗದಲ್ಲಿ ನಮ್ಮ ನಾಯಕತ್ವದ ಸರಣಿಯನ್ನು ಮುಂದುವರಿಸುತ್ತೇವೆ. ಫೀಚರ್ ಫೋನ್ ವಿಭಾಗದಲ್ಲಿ ನಮ್ಮ ಯಶಸ್ಸಿಗೆ ನಮ್ಮ ಜಾಗತಿಕ ಬೆಸ್ಟ್ ಸೆಲ್ಲರ್ ನೋಕಿಯಾ 105 ಕಾರಣವಾಗಿದೆ. ಇದು ಈಗ ದಕ್ಷ ವಿನ್ಯಾಸ ಮತ್ತು ವೈಶಿಷ್ಟ್ಯದೊಂದಿಗೆ ಹೊಸ ವಿನ್ಯಾಸ ನೀಡಲಾಗಿದೆ ಎಂದು ಎಚ್‌ಎಂಡಿ ಗ್ಲೋಬಲ್‌ನ ಉಪಾಧ್ಯಕ್ಷ ಸನ್ಮೀತ್ ಸಿಂಗ್ ಹೇಳಿದ್ದಾರೆ.
ನೋಕಿಯಾ 105 ಬಳಕೆದಾರರ ಕೈಗಳಿಗೆ ಹೊಂದಿಕೊಳ್ಳುವ ಆಧುನಿಕ ವಿನ್ಯಾಸವನ್ನು ಹೊಂದಿದೆ. ಇದರ ಅಂತರ್ಗತ ಬಣ್ಣವು ಸ್ಕ್ರಾಚ್‌ಗಳ ಗೋಚರತೆಯನ್ನು ಕಡಿಮೆ ಮಾಡುತ್ತದೆ. ವೈರ್‌ಲೆಸ್ ಎಫ್ಎಂ ರೇಡಿಯೊ ಇರುವುದರಿಂದ ಪ್ರಯಾಣದ ಸಮಯದಲ್ಲಿ ಹೆಡ್‌ಸೆಟ್ ಇಲ್ಲದೆ ಸುದ್ದಿ, ಕ್ರೀಡೆ ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಆಲಿಸಬಹುದು. ಸ್ನೇಕ್ ಗೇಮ್ ಸೇರಿದಂತೆ ಹಲವು ಪ್ರೀಲೋಡೆಡ್ ಗೇಮ್‌ಗಳು ಇದರಲ್ಲಿವೆ. ದೀರ್ಘಾವಧಿಯ ಬ್ಯಾಟರಿ ಇರುವುದರಿಂದ ನೀವು ಗಂಟೆಗಳ ಕಾಲ ಮಾತನಾಡಬಹುದು.
ನೋಕಿಯಾ 105 ಪ್ಲಸ್ ವೈಶಿಷ್ಟ್ಯಗಳು
ನೋಕಿಯಾ 105 ಪ್ಲಸ್. ವೈರ್‌ಲೆಸ್ ಎಫ್ಎಂ ರೇಡಿಯೊ ಜೊತೆಗೆ ಬಳಕೆಯ ಅನುಭವವನ್ನು ಮತ್ತಷ್ಟು ಉತ್ತಮಗೊಳಿಸಲು ವಿನ್ಯಾಸಗೊಳಿಸಲಾಗಿದೆ. ನೀವು ಹೆಡ್‌ಸೆಟ್ ಇಲ್ಲದೆ ಪ್ರಯಾಣದ ಸಮಯದಲ್ಲಿ ನಿಮ್ಮ ನೆಚ್ಚಿನ ಕ್ರೀಡೆಗಳು, ಸುದ್ದಿಗಳು ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ಆಲಿಸಬಹುದು. ಫೋನ್‌ನಲ್ಲಿ 1000 ಎಂಎಎಚ್ ಬ್ಯಾಟರಿ, ಎಸ್‌ಡಿ ಕಾರ್ಡ್ ಸ್ಲಾಟ್, ಎಂಪಿ3 ಮ್ಯೂಸಿಕ್ ಪ್ಲೇಯರ್ ಮತ್ತು ಸ್ವಯಂ ಕರೆ ರೆಕಾರ್ಡಿಂಗ್ ವೈಶಿಷ್ಟ್ಯ ಇದೆ.
ಬೆಲೆ ಮತ್ತು ಲಭ್ಯತೆ
ಭಾರತದ ಮಾರುಕಟ್ಟೆಯಲ್ಲಿ ಇಂದಿನಿಂದ ನೋಕಿಯಾ 105 ಚಾರ್ಕೊಲ್ ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯವಿದ್ದು, ಆರಂಭಿಕ ಬೆಲೆ ₹ 1299ಆಗಿದೆ.
ನೋಕಿಯಾ 105 ಪ್ಲಸ್ಚಾರ್ಕೊಲ್ ಮತ್ತು ನೀಲಿ ಬಣ್ಣಗಳಲ್ಲಿ ಲಭ್ಯವಿದ್ದು, ₹ 1399ರಿಂದ ಸಿಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.