ಬೆಂಗಳೂರು: ಚೀನಾ ಮೂಲದ ಸ್ಮಾರ್ಟ್‌ಫೋನ್ ತಯಾರಿಕ ಸಂಸ್ಥೆ ವಿವೊ, ದೇಶದಲ್ಲಿ ವಿ ಸರಣಿಯಲ್ಲಿ ಹೊಸ ಮಾದರಿಯನ್ನು ಪರಿಚಯಿಸಿದೆ.
ವಿವೊ V25 5G ಬಿಡುಗಡೆಯಾಗಿದ್ದು, 6.44 ಇಂಚಿನ ಫುಲ್‌ಎಚ್‌ಡಿ+ ಅಮೊಲೆಡ್ ಡಿಸ್‌ಪ್ಲೇ, ಇನ್ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಹೊಸ ವಿವೊ ಫೋನ್ ವಿಶೇಷತೆಯಾಗಿದೆ.
ನೂತನ ವಿವೊ ಫೋನ್‌ನಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 900 ಪ್ರೊಸೆಸರ್ ಇದ್ದು, Mali-G68 MC4 GPU ಗ್ರಾಫಿಕ್ಸ್ ಬೆಂಬಲ ಹೊಂದಿದೆ. ಆ್ಯಂಡ್ರಾಯ್ಡ್ 12 ಆಧಾರಿತ ಫನ್‌ಟಚ್ ಓಎಸ್ 12, ಅಲ್ಲದೆ, 8 GB/12 GB LPDDR4x RAM ಆಯ್ಕೆಯೊಂದಿಗೆ 128 GB/256 GB ಎಂಬ ಎರಡು ಸ್ಟೋರೇಜ್ ಇರಲಿದೆ. 4,500mAh ಬ್ಯಾಟರಿ ಮತ್ತು 44w ಚಾರ್ಜಿಂಗ್ ಇರಲಿದೆ ಎಂದು ವಿವೊ ಹೇಳಿದೆ.
64 ಮೆಗಾಪಿಕ್ಸೆಲ್ ತ್ರಿವಳಿ ಕ್ಯಾಮೆರಾ ಜತೆಗೆ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೊ ಕ್ಯಾಮೆರಾ ಇದೆ. ಮುಂಭಾಗದಲ್ಲಿ 50 ಮೆಗಾಪಿಕ್ಸೆಲ್ ಅಟೋಫೋಕಸ್ ಸೆಲ್ಫಿ ಕ್ಯಾಮೆರಾ ವಿವೊ ವಿಶೇಷತೆಯಾಗಿದೆ ಎಂದು ಕಂಪನಿ ತಿಳಿಸಿದೆ.
ವಿವೊ V25 5G ಸ್ಮಾರ್ಟ್‌ಫೋನ್ ಕಪ್ಪು ಮತ್ತು ನೀಲಿ ಬಣ್ಣದಲ್ಲಿ ದೊರೆಯಲಿದ್ದು, 8 GB RAM + 128 GB ಮಾದರಿಗೆ ₹27,999 ಹಾಗೂ 12 GB RAM + 256 GB ಆವೃತ್ತಿಗೆ ₹31,999 ದರದಲ್ಲಿ ಫ್ಲಿಪ್‌ಕಾರ್ಟ್ ಮೂಲಕ ಸೆಪ್ಟೆಂಬರ್ 20ರಿಂದ ದೊರೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.