ADVERTISEMENT

 VoLTE ಸಪೋರ್ಟ್ ಮಾಡೋ HP Notebook ಬಿಡುಗಡೆ

ಏಜೆನ್ಸೀಸ್
Published 9 ಜೂನ್ 2020, 12:44 IST
Last Updated 9 ಜೂನ್ 2020, 12:44 IST
ಎಚ್‌ಪಿ ನೋಟ್‌ಬುಕ್‌
ಎಚ್‌ಪಿ ನೋಟ್‌ಬುಕ್‌   

ಬೆಂಗಳೂರು: ಟೆಕ್‌ ಮಾರುಕಟ್ಟೆಯಲ್ಲಿ ಉತ್ತಮ ಹೆಸರು ಮಾಡಿರುವ ಎಚ್‌ಪಿ ಕಂಪನಿಯು 4ಜಿ ಎಲ್‌ಟಿಇ (4G VoLTE ) ಸಂಪರ್ಕಿತ ಹೊಸ ನೋಟ್‌ಬುಕ್‌ ಬಿಡುಗಡೆ ಮಾಡಿದೆ.

ಭಾರತೀಯ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಈ ನೋಟ್‌ ಬುಕ್‌ ವಿನ್ಯಾಸ ಮಾಡಲಾಗಿದ್ದು ಇದರ ಆರಂಭಿಕ ಬೆಲೆ ₹ 44,999 ಎಂದು ಎಚ್‌ಪಿ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಕೊರೊನಾ ವೈರಸ್‌ ಪರಿಣಾಮ ಲಕ್ಷಾಂತರ ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಕಡಿಮೆ ತರಂಗಾಂತರಗಳು ಹಾಗೂ ಕಡಿಮೆ ಗುಣಮಟ್ಟದ ವೈಫೈನೊಂದಿಗೆ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ. ಈ ಹಿನ್ನೆಲೆಯಲ್ಲಿ ಎಚ್‌ಪಿ ಕಂಪನಿಯು ಹೊಸ ನೋಟ್‌ಬುಕ್‌ಗಳಲ್ಲಿ 4ಜಿ ಎಲ್‌ಟಿಇ ಸೌಕರ್ಯವನ್ನು ಕಲ್ಪಿಸಿದೆ. ಇದರಿಂದ ಕಡಿಮೆ ಗುಣಮಟ್ಟದ ತರಂಗಾಂತರಗಳಿದ್ದರೂ 4ಜಿ ಎಲ್‌ಟಿಇ ಮೂಲಕ ವೇಗವಾಗಿ ಕೆಲಸ ಮಾಡಬಹುದು ಎಂದು ಕಂಪನಿ ತಿಳಿಸಿದೆ.

ADVERTISEMENT

1.5 ಕೆಜಿ ತೂಕ ಇರುವ ಈ ಹೊಸ ಎಚ್‌ಪಿ 14 ಎಸ್ ನೋಟ್‌ಬುಕ್‌ ಹಗುರವಾಗಿದ್ದು ಆಕರ್ಷಕ ವಿನ್ಯಾಸಹೊಂದಿದೆ. ಇದು
ವೇಗವಾಗಿ ಚಾರ್ಜ್ ಆಗಬಹುದಾದ ಬ್ಯಾಟರಿ ಇದರಲ್ಲಿದೆ. ಸುಮಾರು 9 ಗಟೆಗಳ ಕಾಲ ನಿರಂತರವಾಗಿ ಕೆಲಸ ಮಾಡಬಹುದು. ಇಂಟೆಲ್‌ನ 10ನೇ ಪೀಳಿಗೆಯ 13/15 ಪ್ರೊಸೆಸರ್ ಒಳಗೊಂಡಿದ್ದು, ಮೈಕ್ರೋ ಎಡ್ಜ್ ಡಿಸ್‌ಪ್ಲೆ ಮೂಲಕ ವಿಡಿಯೊಗಳನ್ನು ಆನಂದಿಸಬಹುದು.

ಎಚ್‌ಪಿ 14 ಎಸ್ ನೋಟ್‌ಬುಕ್‌ ಬಿಡುಗಡೆ ಮಾಡಿ ಮಾತನಾಡಿದ ಎಚ್‌ಪಿ ಇಂಡಿಯಾ ಮಾರ್ಕೆಟಿಂಗ್‌ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ವಿನಯ್ ಅವಸ್ಥಿ,ನಮ್ಮ ಹೊಸ ನೋಟ್‌ಬುಕ್‌ನಲ್ಲಿ4ಜಿ ಎಲ್‌ಟಿಇ ತಂತ್ರಜ್ಞಾನಅಳವಡಿಸಿರುವುದರಿಂದಲಕ್ಷಾಂತರ ಭಾರತೀಯ ಬಳಕೆದಾರರಿಗೆ ಅನುಕೂಲವಾಗಲಿದೆ ಎಂದರು.

ಎಚ್‌ಪಿ 14 ಎಸ್ ನೋಟ್‌ಬುಕ್‌ ಬೆಲೆ

* HP14s ( ಐ3 ಪ್ರೊಸೆಸರ್, 4ಜಿಬಿ ರ‍್ಯಾಮ್): ₹ 44,999

* HP14s (ಐ5 ಪ್ರೊಸೆಸರ್, 8ಜಿಬಿ ರ‍್ಯಾಮ್): ₹ 64,999

* HP Pavilion 14 (i5): ₹ 84,999

ಈ ಹೊಸ ಎಚ್‌ಪಿ ನೋಟ್‌ಬುಕ್‌ಗಳ ಖರೀದಿ ಮೇಲೆ 6 ತಿಂಗಳವರೆಗೆ ಜಿಯೊ ಮೂಲಕ ಉಚಿತ ಡೇಟಾ( ಇಂಟರ್‌ನೆಟ್‌) ಪಡೆಯುವ ಕೊಡುಗೆಯನ್ನು ಕಂಪನಿ ನೀಡಿದೆ. ಈ ಹೊಸ ಸಾಧನಗಳು ಎಲ್ಲಾ ಎಚ್‌ಪಿ ವರ್ಲ್ಡ್ ಸ್ಟೋರ್ ಹಾಗೂ ಆನ್‌ಲೈನ್‌ ಸ್ಟೋರ್‌ನಲ್ಲಿ ಲಭ್ಯವಿವೆ.

ಮಾಹಿತಿಗೆ ಈ ವೆಬ್‌ಸೈಟ್‌ ಸಂಪರ್ಕಿಸಿ: https://www8.hp.com/in/en/home.html

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.