ADVERTISEMENT

ಶೀಘ್ರವೇ ಭಾರತದಲ್ಲಿ ವಾಟ್ಸ್‌ಆ್ಯಪ್‌ ಪೇ

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 19:30 IST
Last Updated 31 ಜುಲೈ 2019, 19:30 IST

ಬಿಮ್ ಪೇ ಆಯ್ತು. ಗೂಗಲ್ ಪೇ ಬಂದಾಯ್ತು. ಫೋನ್ ಪೇ, ಪೇಟಿಎಂ, ಯನೋ ಕೂಡ ಚಾಲ್ತಿಯಲ್ಲಿದೆ. ಅಮೆಜಾನ್ ಸೇರಿದಂತೆ ಇನ್ನೂ ಹಲವು ಕಂಪನಿಗಳು ‘ಪೇ ಅಪ್ಲಿಕೇಷನ್’ ಅನ್ನು ಚಾಲನೆಯಲ್ಲಿಟ್ಟಿವೆ. ಈಗ ವಾಟ್ಸ್ಆ್ಯಪ್ ಮೂಲಕವೂ ‘ಪೇ’ ಮಾಡುವಂತಹ ವ್ಯವಸ್ಥೆ ಶೀಘ್ರದಲ್ಲೇ ಬರಲಿದೆ.

‘ಈ ವರ್ಷವೇ ಭಾರತದಲ್ಲಿ ಡಿಜಿಟಲ್‌ ಪಾವತಿ ಸೇವೆಯಾದ ‘ವಾಟ್ಸ್‌ಆ್ಯಪ್‌ ಪೇ’ ಆರಂಭಿಸುವುದಾಗಿ ವಾಟ್ಸ್‌ಆ್ಯಪ್‌ ಹೇಳಿದೆ.

ಇದು ದೇಶದಲ್ಲಿ 40 ಕೋಟಿ ಬಳಕೆದಾರರನ್ನು ಹೊಂದಿದ್ದು, ಅತ್ಯಂತ ದೊಡ್ಡ ಮಾರುಕಟ್ಟೆಯಾಗಿದೆ. ಒಂದು ವರ್ಷದಲ್ಲಿ 10 ಲಕ್ಷ ಜನರು ಈ ಸೇವೆಯನ್ನು ಪ್ರಾಯೋಗಿಕವಾಗಿ ಬಳಕೆ ಮಾಡಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಸೇವೆ ಆರಂಭಿಸಲು ದೇಶದಲ್ಲಿ ಬ್ಯಾಂಕಿಂಗ್‌ ನಿಯಂತ್ರಕ ‘ಆರ್‌ಬಿಐ’ನ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದೆ.

ADVERTISEMENT

ವಾಟ್ಸ್‌ಆ್ಯಪ್‌ ಪೇ ಅತ್ಯಂತ ಸರಳವಾಗಿದೆ. ವಾಟ್ಸ್‌ಆ್ಯಪ್‌ನಲ್ಲಿ ಮೆಸೆಜ್‌ ಕಳುಹಿಸುವಷ್ಟೇ ಸುಲಭವಾಗಿ ಹಣ ವರ್ಗಾಯಿಸಬಹುದು ಎಂದು ಕಂಪನಿಯ ಜಾಗತಿಕ ಮುಖ್ಯಸ್ಥ ವಿಲ್‌ ಕ್ಯಾತ್‌ಕಾರ್ಟ್‌ ತಿಳಿಸಿದ್ದಾರೆ.

ಇಂತಹ ಸೇವೆಗಳಿಂದ ವಿತ್ತೀಯ ಒಳಗೊಳ್ಳುವಿಕೆಯ ಪ್ರಕ್ರಿಯೆಗೆ ವೇಗ ಸಿಗಲಿದೆ. ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಡಿಜಿಟಲ್‌ ಆರ್ಥಿಕತೆಗೆ ಇನ್ನಷ್ಟು ಜನರು ಸೇರಲಿದ್ದಾರೆ. ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದ್ದು, ಆನ್‌ಲೈನ್‌ ವಹಿವಾಟು ನಡೆಸುವವರ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಇದೆ.

ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಆದ ಬಳಿಕ ಸ್ಥಳೀಯ ಡಿಜಿಟಲ್ ಪಾವತಿ ಪಾವತಿ ಕಂಪನಿಗಳಾದ ಪೇಟಿಎಂ ಮತ್ತು ಫೋನ್‌ ಪೇ ಹಾಗೂ ಜಾಗತಿಕ ಕಂಪನಿಗಳಾದ ಅಮೆಜಾನ್‌ ಪೇ ಮತ್ತು ಗೂಗಲ್‌ ಪೇಗೆ ಪೈಪೋಟಿ ನೀಡುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.