ಬೆಂಗಳೂರು: ಶಓಮಿ ರೆಡ್ಮಿ ಸರಣಿಯಲ್ಲಿ ನೂತನ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ರೆಡ್ಮಿ A1+ ಹೊಸದಾಗಿ ಮಾರುಕಟ್ಟೆಗೆ ಲಗ್ಗೆ ಇರಿಸಿದೆ.
ಬಜೆಟ್ ದರದ ಸ್ಮಾರ್ಟ್ಫೋನ್ ಇದಾಗಿದ್ದು, 5,000mAh ಬ್ಯಾಟರಿ ಹೊಂದಿದೆ ಎಂದು ಕಂಪನಿ ಹೇಳಿದೆ.
ಶಓಮಿ ರೆಡ್ಮಿ A1+ ಸ್ಮಾರ್ಟ್ಫೋನ್ನಲ್ಲಿ 2GB RAM + 32GB ಸ್ಟೋರೇಜ್ ಇದ್ದು, ದೇಶದಲ್ಲಿ ₹6,999 ದರಕ್ಕೆ ದೊರೆಯಲಿದೆ.
3GB + 32GB ಆವೃತ್ತಿಗೆ ₹7,999 ದರ ಇದೆ ಎಂದು ಶಓಮಿ ಹೇಳಿದೆ. ಅಕ್ಟೋಬರ್ 17ರಿಂದ ಶಓಮಿ ಆನ್ಲೈನ್ ಮತ್ತು ಸ್ಟೋರ್ಗಳಲ್ಲಿ, ಫ್ಲಿಪ್ಕಾರ್ಟ್ ಮೂಲಕ ದೊರೆಯಲಿದೆ.
ಕಪ್ಪು, ತಿಳಿ ನೀಲಿ ಮತ್ತು ತಿಳಿ ಹಸಿರು ಬಣ್ಣಗಳಲ್ಲಿ ನೂತನ ಶಓಮಿ ರೆಡ್ಮಿ A1+ ಸ್ಮಾರ್ಟ್ಫೋನ್ ದೊರೆಯುತ್ತದೆ.
6.52 ಇಂಚಿನ ಎಚ್ಡಿ+ ಡಿಸ್ಪ್ಲೇ, ಮೀಡಿಯಾಟೆಕ್ ಹೀಲಿಯೊ A22 ಪ್ರೊಸೆಸರ್ ಜತೆಗೆ 8 ಮೆಗಾಪಿಕ್ಸೆಲ್ ಸಹಿತ ಎರಡು ಕ್ಯಾಮೆರಾ ಹಾಗೂ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಸ ಶಓಮಿ ರೆಡ್ಮಿ A1+ ವಿಶೇಷತೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.