ಬೆಂಗಳೂರು: ಸ್ಮಾರ್ಟ್‌ಫೋನ್ ಮತ್ತು ಗ್ಯಾಜೆಟ್ ಮಾರುಕಟ್ಟೆಯ ಜನಪ್ರಿಯ ಬ್ರ್ಯಾಂಡ್ ಶಿಯೋಮಿ, ಆಕರ್ಷಕ ಮಾದರಿಯ ರೆಡ್ಮಿ ಲ್ಯಾಪ್‌ಟಾಪ್ ಪರಿಚಯಿಸಿದೆ.
ರೆಡ್ಮಿ ಜಿ 2021 ಗೇಮಿಂಗ್ ಲ್ಯಾಪ್‌ಟಾಪ್ ಚೀನಾದ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದು, ಶೀಘ್ರದಲ್ಲೇ ದೇಶದಲ್ಲೂ ಲಭ್ಯವಾಗಲಿದೆ.
ತಾಂತ್ರಿಕ ವೈಶಿಷ್ಟ್ಯ
ರೆಡ್ಮಿ ಜಿ 2021 ಗೇಮಿಂಗ್ ಲ್ಯಾಪ್‌ಟಾಪ್, ಇಂಟೆಲ್ ಮತ್ತು ಎಎಂಡಿ ಸರಣಿಯ ಪ್ರೊಸೆಸರ್ ಸಹಿತ ಮಾರುಕಟ್ಟೆ ಪ್ರವೇಶಿಸಿದೆ.
144hz ಡಿಸ್‌ಪ್ಲೇ, 16 GB RAM ಮತ್ತು 512 GB ಸ್ಟೋರೇಜ್ ಇದರಲ್ಲಿದೆ. ವಿಂಡೋಸ್ 11 ಅಪ್‌ಗ್ರೇಡ್, ಇಂಟೆಲ್ ಮಾದರಿಯಲ್ಲಿ 11th Gen ಇಂಟೆಲ್ ಕೋರ್ i5 ಪ್ರೊಸೆಸರ್ ಇದ್ದರೆ, ಎಎಂಡಿ ಆವೃತ್ತಿಯಲ್ಲಿ ಎಎಂಡಿ ರೈಜನ್ 7 ಪ್ರೊಸೆಸರ್ ಇದೆ.
ಬೆಲೆ ವಿವರ
ಚೀನಾದ ಮಾರುಕಟ್ಟೆಗೆ ನೂತನ ರೆಡ್ಮಿ ಲ್ಯಾಪ್‌ಟಾಪ್ ಬಿಡುಗಡೆಯಾಗಿದ್ದು, ಇಂಟೆಲ್ ಆವೃತ್ತಿಗೆ ಚೀನಾದಲ್ಲಿ CNY 5,699 ದರ (₹64,900) ಮತ್ತು ಎಎಂಡಿ ಆವೃತ್ತಿಗೆ CNY 6,999 (₹79,700) ದರವಿದೆ. ಭಾರತದ ಮಾರುಕಟ್ಟೆಗೆ ಬಿಡುಗಡೆ ಮತ್ತು ಬೆಲೆ ವಿವರವನ್ನು ಕಂಪನಿ ಪ್ರಕಟಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.