ಬೆಂಗಳೂರು: ಚೀನಾ ಮೂಲದ ಪ್ರಮುಖ ಸ್ಮಾರ್ಟ್‌ಫೋನ್ ಮತ್ತು ಗ್ಯಾಜೆಟ್ ತಯಾರಿಕ ಸಂಸ್ಥೆ ಶಓಮಿ, 200 ಮೆಗಾಪಿಕ್ಸೆಲ್ ಕ್ಯಾಮೆರಾ ಇರುವ ಹೊಸ ಪ್ರೀಮಿಯಂ ಸ್ಮಾರ್ಟ್‌ಫೋನ್ ಪರಿಚಯಿಸಿದೆ.
ಬರ್ಲಿನ್ ಮಾರುಕಟ್ಟೆಗೆ ಶಓಮಿ 12T ಮತ್ತು ಶಓಮಿ 12T Pro ಲಗ್ಗೆ ಇರಿಸಿದೆ.
ಶಓಮಿ 12T Pro ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳು
6.7 ಇಂಚಿನ ಅಮೊಲೆಡ್ ಡಿಸ್‌ಪ್ಲೇ
ಇನ್ ಸ್ಕ್ರೀನ್ ಫಿಂಗರ್‌ಪ್ರಿಂಟ್ ಸೆನ್ಸರ್
ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 8+ ಜೆನ್. 1 ಪ್ರೊಸೆಸರ್ ಜತೆಗೆ ಅಡ್ರೆನೊ 730 ಗ್ರಾಫಿಕ್ಸ್ ಬೆಂಬಲ ಹೊಂದಿದೆ.
ಆ್ಯಂಡ್ರಾಯ್ಡ್ 12 ಆಧಾರಿತ MIUI 13 OS ಇದರಲ್ಲಿದೆ.
8GB/12GB LPDDR5 ಎಂಬ ಎರಡು RAM ಆಯ್ಕೆ, 128GB/256GB ಸ್ಟೋರೇಜ್ ಜತೆಗೆ 5,000mAh ಬ್ಯಾಟರಿ ಹಾಗೂ 120W ಫಾಸ್ಟ್ ಚಾರ್ಜಿಂಗ್ ಬೆಂಬಲ ಹೊಂದಿದೆ.
ಕ್ಯಾಮೆರಾ ವಿವರ
ನೂತನ ಶಓಮಿ 12T Pro ಸ್ಮಾರ್ಟ್‌ಫೋನ್‌ನಲ್ಲಿ 200 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಜತೆಗೆ 8 ಮೆಗಾಪಿಕ್ಸೆಲ್+2 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. 20 ಮೆಗಾಪಿಕ್ಸೆಲ್ ಸೆಲ್ಫಿ ಇದರ ವಿಶೇಷತೆಯಾಗಿದೆ.
ಭಾರತದಲ್ಲಿ ಬೆಲೆ ವಿವರ ಮತ್ತು ಬಿಡುಗಡೆ ದಿನಾಂಕವನ್ನು ಕಂಪನಿ ಬಹಿರಂಗಪಡಿಸಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.