ADVERTISEMENT

ಭಾರತದಲ್ಲಿ Mi ಬ್ಯಾಂಡ್‌ 3ಐ ಬಿಡುಗಡೆ; 20 ದಿನ ಬ್ಯಾಟರಿ, ₹1,299 ಬೆಲೆ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 11:43 IST
Last Updated 21 ನವೆಂಬರ್ 2019, 11:43 IST
ಎಂಐ ಬ್ಯಾಂಡ್‌ 3ಐ
ಎಂಐ ಬ್ಯಾಂಡ್‌ 3ಐ   

ಭಾರತದ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ ಟಿ.ವಿ ಮಾರುಕಟ್ಟೆಯಲ್ಲಿ ದಿನೇದಿನೆ ವಿಸ್ತರಿಸಿಕೊಳ್ಳುತ್ತಿರುವ ಶಿಯೋಮಿ ಗುರುವಾರ ಎಂಐ ಸ್ಮಾರ್ಟ್‌ ಬ್ಯಾಂಡ್‌ 3ಐ ಬಿಡುಗಡೆ ಮಾಡಿದೆ. ಇಟ್ಟ ಹೆಜ್ಜೆಗಳು, ಹೃದಯ ಬಡಿತದ ಲೆಕ್ಕ ಇಟ್ಟುಕೊಳ್ಳುವ ಎಂಐ ಬ್ಯಾಂಡ್‌ 4 ಈಗಾಗಲೇ ದೇಶದಲ್ಲಿ ಜನಪ್ರಿಯಗೊಂಡಿದ್ದು, ಅದಕ್ಕಿಂತಲೂ ಕಡಿಮೆ ಬೆಲೆಗೆ ಹೊಸ ಸ್ಮಾರ್ಟ್‌ ಬ್ಯಾಂಡ್‌ ಲಭ್ಯವಿದೆ.

ಎಂಐ ಅಧಿಕೃತ ವೆಬ್‌ಸೈಟ್‌(mi.com)ನಲ್ಲಿ ಸ್ಮಾರ್ಟ್‌ ಬ್ಯಾಂಡ್‌ 3ಐ ಖರೀದಿಗೆ ಅವಕಾಶವಿದ್ದು, ₹1,299 ಬೆಲೆ ನಿಗದಿಯಾಗಿದೆ. ಪ್ರಸ್ತುತ ಕಪ್ಪು ಬಣ್ಣದಲ್ಲಿ ಮಾತ್ರ ಸ್ಮಾರ್ಟ್‌ ಬ್ಯಾಂಡ್‌ ಸಿಗುತ್ತಿದೆ. ಬ್ಯಾಂಡ್‌ 3 ಮತ್ತು ಬ್ಯಾಂಡ್‌ 3ಐ ನಡುವಿನ ಬಹುಮುಖ್ಯ ವ್ಯತ್ಯಾಸವೆಂದರೆ, ಹೊಸ ಮಾದರಿಯು ಹೃದಯ ಬಡಿತವನ್ನು ಗ್ರಹಿಸುವುದಿಲ್ಲ. ಬ್ಯಾಂಡ್ 3 ಬೆಲೆ ₹1,799 ಇದ್ದು, ಕಡಿಮೆ ದರದ ಬ್ಯಾಂಡ್‌ಗಳಿಗಾಗಿ ಹುಡುಕಾಟ ನಡೆಸುವ ಯುವಜನತೆಯನ್ನು ಗುರಿಯಾಗಿಸಿ ಬ್ಯಾಂಡ್‌ 3ಐ ಬಿಡುಗಡೆ ಮಾಡಲಾಗಿದೆ.ಜನಪ್ರಿಯಗೊಂಡಿರುವ ಎಂಐ ಬ್ಯಾಂಡ್‌ 4 ಬೆಲೆ ₹2,299.

ಎಂಐ ಬ್ಯಾಂಡ್‌ 3ಐ 0.78 ಇಂಚು ಅಮೋಲೆಡ್ ಟಚ್‌ ಡಿಸ್‌ಪ್ಲೇ(128*80 ಪಿಕ್ಸೆಲ್‌) ಹೊಂದಿದೆ. ನೀರಿನಲ್ಲಿ 50 ಮೀಟರ್‌ ಆಳದಲ್ಲಿ 10 ನಿಮಿಷದವರೆಗೂ ಬ್ಯಾಂಡ್‌ ನೀರಿನಿಂದ ರಕ್ಷಣೆ ಪಡೆಯುತ್ತದೆ. 110 ಎಂಎಎಚ್‌ ಬ್ಯಾಟರಿ ಇದ್ದು, 20 ದಿನಗಳ ವರೆಗೂ ಬ್ಯಾಟರಿ ಬ್ಯಾಕ್‌ಅಪ್ ಇರುತ್ತದೆ. 3 ಆಕ್ಸಿಸ್‌ ಆಕ್ಸೆಲೆರೊಮೀಟರ್‌, ಸ್ಮಾರ್ಟ್‌ಫೋನ್‌ ಜತೆಗೆ ಸಂಪರ್ಕಿಸಲು ಬ್ಲೂಟೂತ್‌ 4.2 ಒಳಗೊಂಡಿದೆ. ಆ್ಯಂಡ್ರಾಯ್ಡ್‌ 4.4 ಅಥವಾ ಐಒಎಸ್‌ 9.0 ಅಥವಾ ಮುಂದಿನ ವರ್ಶನ್‌ ಆಪರೇಟಿಂಗ್‌ ಸಿಸ್ಟಮ್‌ ಹೊಂದಿರುವ ಸ್ಮಾರ್ಟ್‌ಫೋನ್‌ಗಳೊಂದಿಗೆ ಈ ಬ್ಯಾಂಡ್‌ ಸಂಪರ್ಕಿಸಬಹುದು.

ADVERTISEMENT

ಫೋನ್‌ ಗುರಿತಿಸುತ್ತೆ ಬ್ಯಾಂಡ್‌

ಬ್ಯಾಂಡ್‌ 3ಐನಲ್ಲಿ ಫೈಂಡ್‌ ಡಿವೈಸ್‌ ಆಯ್ಕೆ ಇದ್ದು, ಬ್ಯಾಂಡ್‌ನೊಂದಿಗೆ ಸಂಪರ್ಕ ಹೊಂದಿರುವ ಸ್ಮಾರ್ಟ್‌ಫೋನ್‌ ಗುರುತಿಸಲು ನೆರವಾಗುತ್ತದೆ. ಬ್ಯಾಂಡ್‌ ಧರಿಸುವವರ ನಡಿಗೆ, ಓಟ ಹಾಗೂ ವ್ಯಾಯಾಮದಿಂದಾಗಿ ಕಳೆದುಕೊಂಡಿರುವ ಕ್ಯಾಲೋರಿ, ಮೊಬೈಲ್‌ಗೆ ಬರುವ ಕರೆ ಸ್ವೀಕರಿಸುವ ಅಥವಾ ನಿಯಂತ್ರಿಸುವ ಆಯ್ಕೆ, ಸಂದೇಶಗಳನ್ನು ನೋಡುವುದು, ನಿದ್ರಾ ಸಮಯದ ನಿರ್ವಹಣೆ, ಕಾರ್ಯಕ್ರಮಗಳ ಬಗ್ಗೆ ಸೂಚನೆ, ಇತರೆ ಆ್ಯಪ್‌ಗಳ ನೋಟಿಫಿಕೇಷನ್‌ಗಳು ಹಾಗೂ ಟೈಮರ್‌ ಸೇರಿದಂತೆ ಹಲವು ಆಯ್ಕೆಗಳನ್ನು ಈ ಬ್ಯಾಂಡ್‌ ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.