ADVERTISEMENT

ಸಂಗೀತ ಪ್ರಿಯರಿಗೆ ‘ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ ಸಿಇ’

ವಿಶ್ವನಾಥ ಎಸ್.
Published 24 ಸೆಪ್ಟೆಂಬರ್ 2022, 11:27 IST
Last Updated 24 ಸೆಪ್ಟೆಂಬರ್ 2022, 11:27 IST
ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ ಸಿಇ
ಒನ್‌ಪ್ಲಸ್‌ ನಾರ್ಡ್‌ ಬಡ್ಸ್‌ ಸಿಇ   

ಈಚಿನ ದಿನಗಳಲ್ಲಿ ವಾಕಿಂಗ್‌ ಹೋಗುವವರು, ಪ್ರಯಾಣಿಸುವವರು ಹೀಗೆ ಬಹುತೇಕರು ಇಯರ್‌ ಬಡ್ಸ್‌ ಬಳಸುವುದು ಸಾಮಾನ್ಯವಾಗಿಬಿಟ್ಟಿದೆ. ಹಲವು ಕಂಪನಿಗಳು ವಿವಿಧ ವಿನ್ಯಾಸ, ಗುಣಮಟ್ಟ ಮತ್ತು ಬೆಲೆಯ ಇಯರ್‌ ಬಡ್ಸ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಈ ಸಾಲಿನಲ್ಲಿ ಒನ್‌ಪ್ಲಸ್‌ ಕಂಪನಿಯು ಈಚೆಗಷ್ಟೇ ‘ನಾರ್ಡ್‌ ಬಡ್ಸ್‌ ಸಿಇ’ ಬಿಡುಗಡೆ ಮಾಡಿದೆ. ಇದರ ಬೆಲೆ ₹1,899.

ಮೊಬೈಲ್‌ ಜೊತೆ ಸಂಪರ್ಕಿಸುವುದು ಬಹಳ ಸುಲಭ.ಬ್ಲುಟೂತ್ 5.2 ಇದೆ.ಮೊಬೈಲಿನಲ್ಲಿ ಬ್ಲುಟೂತ್‌ ಆನ್‌ ಮಾಡಿ ನಾರ್ಡ್‌ ಬಡ್ಸ್‌ ಸಿಇ ಮೇಲೆ ಕ್ಲಿಕ್ ಮಾಡಿದರೆ ಕನೆಕ್ಟ್‌ ಆಗುತ್ತದೆ. ವಿನ್ಯಾಸದಲ್ಲಿ ಮೇಲ್ನೋಟಕ್ಕೆ ಆ್ಯಪಲ್‌ನ ಎರಡನೇ ಪೀಳಿಗೆಯ ಏರ್‌ಪಾಡ್ಸ್‌ ರೀತಿ ಅನ್ನಿಸುತ್ತದೆ. ಆದರೆ, ಕೆಲವೊಂದಿಷ್ಟು ವ್ಯತ್ಯಾಸಗಳಿವೆ. ಇದರ ಬಡ್ಸ್‌ನ ಉದ್ದ ಮತ್ತು ದಪ್ಪವು ಏರ್‌ಪಾಡ್ಸ್‌ಗಿಂತಲು ಕಡಿಮೆ ಇದೆ. ಬಡ್ಸ್‌ಗೆ ಇಯರ್‌ ಟಿಪ್‌ ಇಲ್ಲದೇ ಇರುವುದು ಹಾಗೂ ಸ್ವಲ್ಪ ತೆಳು ಇರುವುದರಿಂದ ಕಿವಿಯೊಳಗೆ ಸರಿಯಾಗಿ ಕೂರುವುದಿಲ್ಲ. ಎಲ್ಲಾದರೂ ಬಿದ್ದುಬಡಿಬಹುದು ಎಂದು ಆಗಾಗ್ಗೆ ಅನ್ನಿಸುತ್ತಿರುತ್ತದೆ.ಕೇಸ್‌ ತೂಕ 33 ಗ್ರಾಂ, ಬಡ್ಸ್‌ ತೂಕ 3.5 ಗ್ರಾಂ.

ನೀರು ಮತ್ತು ಬೆವರಿನಿಂದ ರಕ್ಷಣೆ ಪಡೆಯಲು ಐಪಿಎಕ್ಸ್‌4 ಸೌಲಭ್ಯ ನೀಡಲಾಗಿದೆ. ಒನ್‌ಪ್ಲಸ್‌ ಫೋನ್‌ ಜೊತೆ ಇದನ್ನು ಬಳಸುವುದಾದರೆ ಸೆಟ್ಟಿಂಗ್ಸ್‌ನಲ್ಲಿ ಹೆಚ್ಚು ಬದಲಾವಣೆ ಅಗತ್ಯ ಇಲ್ಲ. ಬೇರೆ ಫೋನ್‌ಗಳ ಜೊತೆ ಬಳಸಲುಹೇ-ಮೆಲೋಡಿ (HeyMelody) ಆ್ಯಪ್‌ ಡೌನ್ಲೋಡ್‌ ಮಾಡಿಕೊಳ್ಳಬೇಕು.

ವಿಡಿಯೊ, ಆಡಿಯೊ ಗುಣಮಟ್ಟ ಚೆನ್ನಾಗಿದೆ, ಸ್ಪಷ್ಟವಾಗಿದೆ. ಸಂಗೀತ ಆಲಿಸಲು ಇದರ ಆಡಿಯೊ ಗುಣಮಟ್ಟ ಉತ್ತಮವಾಗಿದೆ. ಆ್ಯಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಷನ್‌ (ಎಎನ್‌ಸಿ) ಇಲ್ಲದೇ ಇರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಕರೆ ಮಾಡಲು ಅಥವಾ ಸ್ವೀಕರಿಸಲು ಇದನ್ನು ಬಳಸುವುದು ಕಷ್ಟ. ನಮ್ಮ ಧ್ವನಿಯು ಫೋನ್‌ ಮಾಡಿರುವವರಿಗೆ ಸ್ಪಷ್ಟವಾಗಿ ಕೇಳಿಸುವುದಿಲ್ಲ. ಆದರೆ, ಕಡಿಮೆ ಶಬ್ಧ ಇರುವ ಕಡೆಗಳಲ್ಲಿ ಮತ್ತು ಮನೆಯೊಳಗೆ ಕಾಲ್‌ ಮಾಡಲು ಇದನ್ನು ಬಳಸಲು ಯಾವುದೇ ತೊಂದರೆ ಆಗುವುದಿಲ್ಲ.

ಯುಎಸ್‌ಬಿ ಟೈಪ್‌ ಸಿ ಕೇಬಲ್ ಇದೆ. ‌ಪ್ಲೆಬ್ಯಾಕ್‌ 4.5 ಗಂಟೆ, ಕಾಲ್‌ 3 ಗಂಟೆ, 20 ಗಂಟೆ ಒಟ್ಟಾರೆ ಕೇಳುವ ಅವಧಿ ಇದೆ. 10 ನಿಮಿಷ ಫ್ಲ್ಯಾಷ್‌ ಚಾರ್ಜ್ ಮಾಡಿದರೆ 81 ನಿಮಿಷ ಪ್ಲೆಬ್ಯಾಕ್‌. ಕೇಸ್‌ 300 ಎಂಎಎಚ್‌, ಬಡ್ಸ್‌ ತಲಾ 27 ಎಂಎಎಚ್‌ ಸಾಮರ್ಥ್ಯ ಹೊಂದಿದೆ. ಒಂದು ಬಾರಿ ಟ್ಯಾಪ್‌ ಮಾಡಿದರೆ ಪ್ಲೇ‌‌ /ಪಾಸ್, ಎರಡು ಬಾರಿ ಟ್ಯಾಪ್‌ ಮಾಡಿದರೆ ನೆಕ್ಸ್ಟ್ ಟ್ರ್ಯಾಕ್‌, ಕಾಲ್ ಆನ್ಸರ್‌/ ಎಂಡ್, ಮೂರು ಬಾರಿ ಟ್ಯಾಪ್‌ ಮಾಡಿದರೆ ವಾಯ್ಸ್‌ ಅಸಿಸ್ಟಂಟ್‌, ಗೇಮಿಂಗ್ ಮೋಡ್ ತೆರೆದುಕೊಳ್ಳುತ್ತದೆ.ಫೋನ್‌ ಇರುವಲ್ಲಿಂದ 10ಮೀಟರ್‌ ವ್ಯಾಪ್ತಿಯಲ್ಲಿ ಹಾಡು ಕೇಳಲು, ಮಾತನಾಡಲು ಬಳಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.