ADVERTISEMENT

‘ಪಿಟ್ರಾನ್‌ ಮ್ಯೂಸಿಕ್‌ಬಾಟ್‌ ಇವೊ’ ಬೆಲೆಗೆ ತಕ್ಕ ಸೌಂಡ್‌ಬಾರ್‌

ವಿಶ್ವನಾಥ ಎಸ್.
Published 31 ಡಿಸೆಂಬರ್ 2022, 23:15 IST
Last Updated 31 ಡಿಸೆಂಬರ್ 2022, 23:15 IST
ಪಿಟ್ರಾನ್‌ ಮ್ಯೂಸಿಕ್‌ಬಾಟ್‌ ಇವೊ
ಪಿಟ್ರಾನ್‌ ಮ್ಯೂಸಿಕ್‌ಬಾಟ್‌ ಇವೊ   

ಪಿಟ್ರಾನ್‌ ಕಂಪನಿಯ ಹೊಸ ಸೌಂಡ್‌ಬಾರ್‌ ‘ಪಿಟ್ರಾನ್‌ ಮ್ಯೂಸಿಕ್‌ಬಾಟ್‌ ಇವೊ’ ತೆಳುವಾಗಿದ್ದು, ಉತ್ತಮ ವಿನ್ಯಾಸ ಹೊಂದಿದೆ. ಕಂಪನಿಯ ಜಾಲತಾಣ, ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ₹999ಕ್ಕೆ ಖರೀದಿಸಬಹುದು.

ವಿನ್ಯಾಸದಲ್ಲಿ 38.7 ಸೆಂಟಿಮೀಟರ್‌ ಉದ್ದ ಮತ್ತು 6.5 ಸೆಂಟಿಮೀಟರ್‌ ಎತ್ತರ ಇದೆ. ಇದರಲ್ಲಿ 4 ಬಟನ್‌ಗಳಿವೆ. ವಾಲ್ಯುಂ ಹೊಂದಿಸಲು/ಮುಂದಿನ/ಹಿಂದಿನ ಹಾಡು ಕೇಳಲು ಎರಡು ಬಟನ್‌, ಒಂದು ಎಫ್‌ಎಂ ಬಟನ್‌ ಹಾಗೂ ಕೊನೆಯದಾಗಿ ಪ್ಲೇ ಅಥವಾ ಪಾಸ್‌ ಮಾಡುವ ಬಟನ್‌ ಇದೆ.

ವಾಲ್ಯುಂ ಕಡಿಮೆ ಅಥವಾ ಜಾಸ್ತಿ ಮಾಡಲು ಬಟನ್‌ ಅನ್ನು ಕೆಲಹೊತ್ತು ಒತ್ತಿ ಹಿಡಿದಿಟ್ಟುಕೊಳ್ಳಬೇಕು. ಒಮ್ಮೆ ಒತ್ತಿ ಬಿಟ್ಟರೆ ಮುಂದಿನ/ಹಿಂದಿನ ಹಾಡು ಆರಂಭ ಆಗುತ್ತದೆ.

ADVERTISEMENT

ಈ ಸೌಂಡ್‌ಬಾರ್‌ನಲ್ಲಿ ಎರಡು ಸ್ಪೀಕರ್‌ ಇದೆ. ಉತ್ತಮ ಬಾಸ್‌ನೊಂದಿಗೆ ಗುಣಮಟ್ಟದ ಆಡಿಯೊ ಹೊಂದಿದೆ. ಮೆಮೊರಿ ಕಾರ್ಡ್‌ ಹಾಕಲು ಜಾಗ ಇದ್ದು, 32ಜಿಬಿವರೆಗಿನ ಸಾಮರ್ಥ್ಯದ ಕಾರ್ಡ್‌ ಹಾಕಬಹುದಾಗಿದೆ. ಸಂಗೀತ ಕೇಳಲಷ್ಟೇ ಅಲ್ಲದೆ, ಮೂವಿ ಅಥವಾ ವಿಡಿಯೊ ನೋಡಲು ಸಹ ಈ ಸೌಂಡ್‌ ಬಾರ್‌ ಬಳಸಬಹುದು.

ಬ್ಯಾಟರಿ: 1,200 ಎಂಎಎಚ್‌ ಬ್ಯಾಟಿ ಹೊಂದಿದ್ದು, ಒಮ್ಮೆ ಚಾರ್ಜ್ ಮಾಡಿದರೆ 10 ಗಂಟೆಗಳ ಪ್ಲೇಬ್ಯಾಕ್‌ ಸಾಮರ್ಥ್ಯ ಹೊಂದಿದೆ. ಪೂರ್ತಿ ಚಾರ್ಜ್ ಆಗಲು 4 ಗಂಟೆ ಬೇಕು. ಟಿವಿ, ಲ್ಯಾಪ್‌ಟಾಪ್‌ ಅಥವಾ ಟ್ಯಾಬ್ಲೆಟ್‌, ಸ್ಮಾರ್ಟ್‌ಫೋನ್‌ಗೆ ಸಂಪರ್ಕಿಸಬಹುದು. ಬ್ಲುಟೂತ್‌ 5 ವರ್ಷನ್‌ ಇದೆ. ಅಲ್ಲದೆ, 3.5 ಎಂಎಂ ಎಯುಎಕ್ಸ್ ಔಟ್‌ಪುಟ್‌, ಯುಎಸ್‌ಬಿ ಡ್ರೈವ್‌ ಅಥವಾ ಟಿಎಫ್‌ ಕಾರ್ಡ್‌ ಸಹ ಇದೆ. ವಯರ್‌ ಅಥವಾ ವಯರ್‌ಲೆಸ್‌ ಆಗಿ ಬಳಕೆ ಮಾಡಬಹುದು. ಫಾಸ್ಟ್‌ ಚಾರ್ಜರ್‌ ಬಳಸಿ ಚಾರ್ಜ್‌ ಮಾಡದಂತೆ ಕಂಪನಿ ಎಚ್ಚರಿಕೆ ನೀಡಿದೆ.

ಸ್ಪೀಕರ್‌ ಆನ್‌ ಮಾಡುವಾಗ ಮತ್ತು ಮೊಬೈಲ್‌ ಅಥವಾ ಇನ್ಯಾವುದೇ ಸಾಧನದ ಜೊತೆ ಸಂಪರ್ಕಿಸುವಾಗ ಪಿಟ್ರಾನ್‌ ಬ್ಲುಟೂತ್‌ ಕೆನೆಕ್ಟಿಂಗ್‌ ಎನ್ನುವ ಧ್ವನಿಯು ಸ್ವಲ್ಪ ಕಿರಿಕಿರಿ ಉಂಟುಮಾಡುತ್ತದೆ.

ಇದರಲ್ಲಿ ಬಿಲ್ಟ್‌ ಇನ್ ಎಫ್‌ಎಂ ಆಯ್ಕೆ ಇದೆ. ಸೌಂಡ್‌ಬಾರ್‌ಮೂಲಕವೇ ಕರೆಯನ್ನು ಸ್ವೀಕರಿಸುವ ಮತ್ತು ರಿಜೆಕ್ಟ್‌ ಮಾಡುವ ಆಯ್ಕೆ ಇದೆ. ಒಳಬರುವ ಕರೆಯ ಫೋನ್‌ ನಂಬರ್‌ ಅನ್ನು ಧ್ವನಿಯ ಮೂಲಕ ಹೇಳುವುದು ಅತ್ಯಂತ ಉಪಯುಕ್ತವಾದ ವೈಶಿಷ್ಟ್ಞ. ಕರೆ ಬಂದಾಕ್ಷಣ ನಂಬರ್ ಅನ್ನು ಏರುದನಿಯಲ್ಲಿ ಹೇಳುತ್ತದೆ. ಕಾಲ್‌ ರಿಸೀವ್‌ ಮಾಡಿ ಮಾತನಾಡುವಾಗ ಸೌಂಡ್‌ಬಾರ್‌ನಲ್ಲಿ ದ್ವನಿಯು ಸ್ಪಷ್ಟವಾಗಿ ಕೇಳಿಸುತ್ತದೆ. ಮೊಬೈಲ್‌ನಲ್ಲಿ ನಂಬರ್ ಸೇವ್ ಆಗಿದ್ದರೂ ಹೆಸರು ಹೇಳುವುದಿಲ್ಲ.

ಒಟ್ಟಾರೆಯಾಗಿ ಹಲವು ಸಾಧನಗಳೊಂದಿಗೆ ಸಂಪರ್ಕಿಸುವ ವ್ಯವಸ್ಥೆ ಹೊಂದಿರುವುದರಿಂದ ಮನೆಯಲ್ಲಿ ಟಿವಿ ನೋಡುವಾಗ, ಸಂಗೀತ ಆಲಿಸುವಾಗ ಬಳಸಲು ಒಂದು ಉತ್ತಮ ಸಾಧನ ಇದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.