ಬೆಂಗಳೂರು: ಜಾಗತಿಕ ಪ್ರೀಮಿಯಂ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಆಗಿರುವ ಟೆಕ್ನೊ, ಭಾರತದ ಮಾರುಕಟ್ಟೆಗೆ ಟೆಕ್ನೊ ಕ್ಯಾಮನ್ 16 ಪ್ರೀಮಿಯರ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಬೆಲೆ ₹ 16,999 ಇದೆ.
ಸ್ಮಾರ್ಟ್‌ಫೋನ್ ವಿಡಿಯೊಗ್ರಫಿಯಲ್ಲಿ ಪರಿವರ್ತನೆಗೆ ಇದು ಕಾರಣವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಹೊಸ ತಂತ್ರಜ್ಞಾನ ಬಳಕೆಯನ್ನು ಇಷ್ಟಪಡುವವರಿಗೆಂದೇ ಇದನ್ನು ವಿನ್ಯಾಸಗೊಳಲಾಗಿದೆ. ವಿಡಿಯೊಗ್ರಫಿ ಮತ್ತು ಫೊಟೊಗ್ರಫಿಗಾಗಿ ಸ್ಮಾರ್ಟ್‌ಫೋನ್ ಅನ್ನು ಪ್ರಾಥಮಿಕ ಸಾಧನವಾಗಿ ಬಳಸುವವರಿಗೆ ಇದು ಸೂಕ್ತವಾಗಿದೆ. ಈ ವಿಭಾಗದಲ್ಲಿಯೇ ಹಲವು ಮೊದಲುಗಳನ್ನು ಇದು ಒಳಗೊಂಡಿದೆ. 64ಎಂಪಿ ಕ್ಯಾಡ್ ಕ್ಯಾಮೆರಾ ಮತ್ತು 48ಎಂಪಿ+8ಎಂಪಿ ಡ್ಯುಯಲ್ ಫ್ರಂಟ್ ಸೆಲ್ಫಿ ಕ್ಯಾಮೆರಾ ಇದೆ. ಸೋನಿ ಐಎಂಎ್ಕಸ್ 686 ಆರ್‌ಜಿಬಿ ಸೆನ್ಸಾರ್ ಮತ್ತು ಸೂಪರ್ ನೈಟ್ 2.0 ಹೊಂದಿದೆ. ಸೂಪರ್ ಹೈಬ್ರಿಡ್ ಇಮೇಜ್ ಸ್ಟೆಬಿಲಿಸೇಷನ್, ಸೂಪರ್ ಸ್ಲೋ ಮೋಷನ್ ವಿಡಿಯೊ, ಪೊಲಾರ್ ನೈಟ್ ಲೆನ್ಸ್ ಆಯ್ಕೆಗಳಿವೆ.
ಸ್ಥಳೀಯ ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮೊಬೈಲ್ ಫೊಟೊಗ್ರಫಿ ಮತ್ತು ವಿಡಿಯೊಗ್ರಫಿ ತಂತ್ರಜ್ಞಾನಗಳ ಮೂಲಕ 2021ರಲ್ಲಿ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಟೆಕ್ನೊ ಬ್ರ್ಯಾಂಡ್ ಅನ್ನು ಹೊಸ ಎತ್ತರಕ್ಕೆ ಒಯ್ಯಲು ನಿರ್ಧರಿಸಿದ್ದೇವೆ. ಈ ಉದ್ದೇಶದಿಂದಲೇ ಕ್ಯಾಮನ್ 16 ಪ್ರೀಮಿಯರ್ ಬಿಡುಗಡೆ ಮಾಡಲಾಗಿದೆ’ ಎಂದು ಟ್ರಾನ್ಶನ್ ಇಂಡಿಯಾದ ಸಿಇಒ ಅರ್ಜಿತ್ ತಲಪಾತ್ರಾ ತಿಳಿಸಿದರು.
ಪ್ರಮುಖ ಅಂಶಗಳು
* ಬೆಲೆ ₹ 16,999
* ಜನವರಿ 16 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಮೊದಲ ಮಾರಾಟ
* ಎಲ್ಲಾ ರೀಟೇಲ್ ಮಳಿಗೆಗಳಲ್ಲಿಯೂ ಲಭ್ಯ
* ಡಿಸ್‌ಪ್ಲೇ; 6.85 ಇಂಚು ಎಫ್‌ಎಚ್‌ಡಿ+ಡ್ಯಯಯಲ್ ಡಾಟ್ ಇನ್. ಸ್ಕ್ರೀನ್ ಆಸ್ಪೆಕ್ಟ್ ರೇಶಿಯೊ 20.5:9
* ಫ್ರಂಟ್ ಕ್ಯಾಮೆರಾ; 48ಎಂಪಿ+8ಎಂಪಿ ಡ್ಯುಯಲ್ ಎಐ ಸೆಲ್ಫಿ
* ಬ್ಯಾಕ್ ಕ್ಯಾಮೆರಾ; 64ಎಂಪಿ+8ಎಂಪಿ+2ಎಂಪಿ+2ಎಂಪಿ ಎಐ ಕ್ವಾಡ್ ಕ್ಯಾಮೆರಾ
* ಮೆಮೊರಿ; 8ಜಿಬಿ ಎಲ್‌ಪಿಡಿಡಿಆರ್4ಎಕ್ಸ್ ರ್‍ಯಾಮ್ & 128ಜಿಬಿ ಯುಎಫ್‌ಎಸ್ 2.1 ರೋಮ್. 256ಜಿಬಿವರೆಗೆ ವಿಸ್ತರಣೆ ಸಾಧ್ಯ
* ಬ್ಯಾಟರಿ; ಲಿ ಪಾಲಿಮರ್ 4,500 ಎಂಎಎಚ್ ಬ್ಯಾಟರಿ. 18ಡಬ್ಲ್ಯು ಟೈಪ್ ಸಿ ಫಾಸ್ಟ್ ಚರ್ಜರ್
* ಒಎಸ್; ಆಂಡ್ರಾಯ್ 10 ಆಧಾರಿತ HiOS v7.0
* ಮಲ್ಟಿ ಕಾರ್ಡ್ ಸ್ಲಾಟ್; ಡ್ಯುಯಲ್ 4ಜಿ ನ್ಯಾನೊ ಸಿಮ್ + 1 ಎಸ್‌ಡಿ ಕಾರ್ಡ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.