ADVERTISEMENT

ಖನಿಜ ಪತ್ತೆಗೆ ಸ್ಪೇಸ್ ಸ್ಟಾರ್ಟ್‌ಅಪ್‌ ‘ಪಿಕ್ಸೆಲ್‌’ನಲ್ಲಿ ಗೂಗಲ್ ಹೂಡಿಕೆ

ರಾಯಿಟರ್ಸ್
Published 2 ಜೂನ್ 2023, 7:33 IST
Last Updated 2 ಜೂನ್ 2023, 7:33 IST
   

ಬೆಂಗಳೂರು: ಆಲ್ಪಬೆಟ್‌ ಇಂಕ್ಸ್‌ ಗೂಗಲ್‌ ಕಂಪನಿಯು ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಕಾಲಿಡಲು ಉತ್ಸುಕವಾಗಿದ್ದು, ಬೆಂಗಳೂರು ಮೂಲದ ಉಪಗ್ರಹ ಚಿತ್ರ ಕ್ಷೇತ್ರದ ಸ್ಟಾರ್ಟ್‌ಅಪ್‌ ’ಪಿಕ್ಸೆಲ್‌‘ ನಲ್ಲಿ 36 ದಶಲಕ್ಷ ಅಮೆರಿಕನ್ ಡಾಲರ್‌ ಹೂಡಲು ಉತ್ಸುಕತೆ ತೋರಿದೆ.

ಕಳೆದ ಏಪ್ರಿಲ್‌ನಲ್ಲಿ ಖಾಸಗೀಕರಣ ನೀತಿಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದ ಬೆನ್ನಲ್ಲೇ ಗೂಗಲ್‌, ಭಾರತದ ಬಾಹ್ಯಾಕಾಶ ಕ್ಷೆತ್ರದತ್ತ ಉತ್ಸುಕತೆ ತೋರಿದೆ. 2019ರಲ್ಲಿ ಸ್ಥಾಪನೆಯಾದ ಪಿಕ್ಸೆಲ್‌, ಉಪಗ್ರಹ ಗುಚ್ಛಗಳನ್ನು ಅಭಿವೃದ್ಧಿಪಡಿಸುತ್ತಿದೆ. ಆಮೂಲಕ ಭೂಗರ್ಭದಲ್ಲಿನ ಖನಿಜ ನಿಕ್ಷೇಪಗಳನ್ನು ಚಿತ್ರಸಹಿತ ಮಾಹಿತಿ ಸಂಗ್ರಹಿಸುವ ತಂತ್ರಾಂಶವನ್ನು ಅಭಿವೃದ್ಧಿಪಡಿಸುತ್ತಿದೆ. 71ದಶಲಕ್ಷ ಅಮೆರಿಕನ್ ಡಾಲರ್ ಹೂಡಿಕೆ ಹೊಂದಿರುವ ಪಿಕ್ಸೆಲ್, ಈಗಾಗಲೇ ಆಸ್ಟ್ರೇಲಿಯಾ ಮೂಲದ ಕೃಷಿ ತಂತ್ರಜ್ಞಾನ ಕಂಪನಿ ಮೈನರ್‌ ರಿಯೊ ಟಿಂಟೊ ಕಂಪನಿಗೆ ಮಾಹಿತಿ ನೀಡಲು ಒಡಂಬಡಿಕೆ ಮಾಡಿಕೊಂಡಿದೆ.ಇದರಲ್ಲಿ ಅಕ್ಸೆಂಚರ್ ಪಿಎಲ್‌ಸಿ ಕೂಡಾ ಸೇರಿದೆ. 

ಹೂಡಿಕೆ ಕುರಿತು ಮಾಹಿತಿ ಹಂಚಿಕೊಂಡಿರುವ ಗೂಗಲ್, ’ಭಾರತ ಡಿಜಟಲೀಕರಣ ನಿಧಿಯ ಮೂಲಕ ಪಿಕ್ಸೆಲ್‌ನಲ್ಲಿ ಹೂಡಿಕೆಯನ್ನು ಕಂಪನಿ ಆರಂಭಿಸಿದೆ. ಆ ಮೂಲಕ ಭಾರತ ಮೂಲದ ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಕೆಯತ್ತ ಗೂಗಲ್‌ ತನ್ನ ಗಮನ ಕೇಂದ್ರೀಕರಿಸಿದೆ‘ ಎಂದಿದೆ.

ADVERTISEMENT

ಪಿಕ್ಸೆಲ್ ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ಅವೈಸ್ ಅಹ್ಮದ್ ಪ್ರತಿಕ್ರಿಯಿಸಿ, ’ಈ ಹೂಡಿಕೆ ಮೂಲಕ ಭಾರತದ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಅತ್ಯಂತ ಮೌಲ್ಯಯುತ ಕಂಪನಿಯಾಗಿ ಹೊರಹೊಮ್ಮಲಿದೆ‘ ಎಂದು ತಿಳಿಸಿದ್ದಾರೆ.

’ಕೃಷಿ ಹಾಗೂ ಪರಿಸರ ಕ್ಷೇತ್ರದಲ್ಲಿ ಉಪಗ್ರಹ ಮಾಹಿತಿ ಹಾಗೂ ಗೂಗಲ್‌ ಜತೆ ಕಂಪನಿ ಕೆಲಸ ಮಾಡುತ್ತಿದೆ. ಅವರ ಬಳಿ ಗೂಗಲ್ ಅರ್ಥ್ ಇದೆ. ಹೀಗಾಗಿ ಎರಡೂ ಕಂಪನಿಗಳು ಜತೆಗೂಡಿದ್ದರಿಂದ ಉತ್ತಮವಾದದ್ದು ಸಾಧ್ಯವಾಗಲಿದೆ‘ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

’ಗೂಗಲ್ ಕಂಪನಿ ಹೂಡಿಕೆಯನ್ನು ತನ್ನದೇ ಆದ ಉಪಗ್ರಹ ಜಾಲದ ಅಭಿವೃದ್ಧಿಗೆ ಬಳಸಿಕೊಳ್ಳಲಾಗುವುದು. ಮುಂದಿನ ವರ್ಷ ಪಿಕ್ಸೆಲ್ ಕಂಪನಿ ಆರು ಉಪಗ್ರಹಗಳ ಉಡಾವಣೆಗೆ ಸಿದ್ಧತೆ ನಡೆಸಿದೆ. ಈಗಾಗಲೇ ಮೂರು ಉಪಗ್ರಹಗಳು ಸಿದ್ಧಗೊಂಡಿವೆ. ಉಳಿದವು ಪ್ರಗತಿಯ ಹಂತದಲ್ಲಿದೆ‘ ಎಂದು ಅಹ್ಮದ್ ತಿಳಿಸಿದ್ದಾರೆ.

’ನಮ್ಮ ಈ ಸ್ಟಾರ್ಟ್‌ಅಪ್‌ಗೆ ಇಲಾನ್‌ ಮಸ್ಕ್ ಅವರ ಸ್ಪೇಸ್‌ಎಕ್ಸ್‌ ಸ್ಪೂರ್ತಿ. ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಹೈಪರ್‌ಲೂಪ್ ಟ್ರಾನ್ಸ್‌ಪೋರ್ಟ್ ಪಾಡ್‌ನ ಪ್ರದರ್ಶನ ವೀಕ್ಷಣೆಗೆ ಸ್ಪೇಸ್‌ಎಕ್ಸ್‌ಗೆ ತೆರಳಿದಾಗ ಅಂಥದ್ದೊಂದು ಬಾಹ್ಯಾಕಾಶ ಸಂಸ್ಥೆಯನ್ನು ಹುಟ್ಟುಹಾಕುವ ಆಲೋಚನೆ ಮೂಡಿತು‘ ಎಂದು ಪಿಕ್ಸೆಲ್ ಆರಂಭದ ಹಿನ್ನೆಲೆಯನ್ನು ವಿವರಿಸಿದ್ದಾರೆ.

ಪಿಕ್ಸೆಲ್‌ನ ಸಹ ಸಂಸ್ಥಾಪಕ ಕ್ಷಿತಿಜ್‌ ಖಂಡೇವಾಲ್ ಅವರ ಉಪಗ್ರಹ ಮಾಹಿತಿಯನ್ನು ಬಳಸಿಕೊಂಡು ಬೆಳೆಯ ಇಳುವರಿ ಅಂದಾಜಿಸುವ, ಅಕ್ರಮ ಗಣಿಕಗಾರಿಕೆ ಪತ್ತೆಹಚ್ಚುವ ಹಾಗೂ ನೈಸರ್ಗಿಕ ವಿಕೋಪದ ಕ್ಷಣ ಕ್ಷಣದ ಮಾಹಿತಿ ನೀಡುವ ಕೃತಕ ಬುದ್ಧಿಮತ್ತೆಯ ಮಾದರಿಯನ್ನು ಅಭಿವೃದ್ಧಿಪಡಿಸುತ್ತಿದ್ದಾರೆ.

ನೀತಿ ಬದಲಾವಣೆಯಿಂದ ಭರವಸೆಯ ನಿರೀಕ್ಷೆಯಲ್ಲಿ ಕಂಪನಿಗಳು: ಏಪ್ರಿಲ್‌ನಲ್ಲಿ ಖಾಸಗಿ ಕಂಪನಿಗಳಲ್ಲಿನ ಹೂಡಿಕೆ ಕುರಿತ ನೀತಿಯನ್ನು ಘೋಷಿಸಿತ್ತು. ಇದು ಖಾಸಗಿ ವಲಯದಲ್ಲಿ ಸಾಕಷ್ಟು ಉತ್ಸಾಹ ಮೂಡಿಸಿದೆ. ಇದಕ್ಕೂ ಮೊದಲು ರಿಚರ್ಡ್‌ ಬ್ರಾನ್ಸ್‌ನ್ಸ್‌ ವರ್ಗಿನ್ ಆರ್ಬಿಟ್ ಲಾಂಚ್ ಕಂಪನಿ ದಿವಾಳಿಯಾದ ನಂತರ ಬಾಹ್ಯಾಕಾಶ ಕ್ಷೇತ್ರದ ಸ್ಟಾರ್ಟ್‌ಅಪ್‌ಗಳು ಒತ್ತಡಕ್ಕೆ ಸಿಲುಕಿದ್ದವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.