ಸ್ಯಾನ್‌ಫ್ರಾನ್ಸಿಸ್ಕೊ: ಪ್ರಮುಖ ವೆಬ್ ಬ್ರೌಸರ್ ಕಂಪನಿ ಒಪೆರಾ ತನ್ನ ವಿನ್ಯಾಸದ ಬದಲಾವಣೆಯೊಂದಿಗೆ ಹೊಸ ‘ಒಪೆರಾ ಒನ್‘ ಬ್ರೌಸರ್ ಅನ್ನು ಮಂಗಳವಾರ ಬಿಡುಗಡೆಗೊಳಿಸಿದೆ. ಇದು ಮುಂದಿನ ವರ್ಷಗಳಲ್ಲಿ ಮ್ಯಾಕ್ , ಲಿನಕ್ಸ್ ಹಾಗೂ ವಿಂಡೊಸ್‌ನ ಪ್ರಮುಖ ಬ್ರೌಸರ್ ಆಗಲಿದೆ ಎಂದು ಒಪೆರಾ ಅಭಿಪ್ರಾಯಪಟ್ಟಿದೆ.
‘ಒಪೆರಾ ಒನ್‘ ವೈಶಿಷ್ಟ್ಯಗಳೇನು?
‘ಒಪೆರಾ ಒನ್‘ ಬಳಕೆದಾರರಿಗೆ ಕ್ಷಿಪ್ರವಾಗಿ ಸ್ಪಂದಿಸುವ ಅನುಭವ ನೀಡುತ್ತದೆ. ವಿಷಯಗಳನ್ನು ಹುಡುಕುವಾಗ ಸರಳ ಮತ್ತು ಸುಲಭವಾಗಿ ಚಾಲನೆಯನ್ನು ಒದಗಿಸುತ್ತದೆ.
ಹಲವಾರು ವೆಬ್‌ಸೈಟ್‌ಗಳನ್ನು ಈ ಬ್ರೌಸರ್ ಸಂಪರ್ಕಿಸಬಹುದಾಗಿದ್ದು, ‘ಟ್ಯಾಬ್ ಐಲ್ಯಾಂಡ್‘ ಎಂಬ ಹೊಸ ಗುಣಲಕ್ಷಣವನ್ನು ಅಳವಡಿಸಿಕೊಳ್ಳಲಾಗಿದೆ. ಇದನ್ನು ಬಳಕೆದಾರರ ಆಶಯಕ್ಕೆ ತಕ್ಕಂತೆ ನಿರೂಪಿಸಲಾಗಿದೆ.
ಒಪೆರಾ ಒನ್ ಬೌಸರ್ ಒಪೆರಾದ ಅಪ್‌ಗ್ರೇಡ್ ಆವೃತ್ತಿ ಆಗಿದ್ದು, ಸದ್ಯ ತಂತ್ರಜ್ಞಾನದಲ್ಲಿ ಸದ್ದು ಮಾಡುತ್ತಿರುವ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಗುಣಲಕ್ಷಣವೂ ಸೇರಿಕೊಂಡಿದೆ. ಬ್ರೌಸರ್‌ನ ಬದಿಗಳಲ್ಲಿ ಚಾಟ್ ಜಿಪಿಟಿ ಹಾಗೂ ಚಾಟ್ ಸೋನಿಕ್ ಫೀಚರ್‌ಗಳನ್ನು ಅಳವಡಿಸಿಕೊಳ್ಳಲಾಗಿದೆ.
ಈ ಹಿಂದಿನ ನಮ್ಮ ಬ್ರೌಸರ್‌ಗಿಂತ ಈಗಿನ ನೂತವಾಗಿರುವ ಬ್ರೌಸರ್‌ನಲ್ಲಿ ಬಳಕೆದಾರನ ಅವಶ್ಯಕತೆಗಳ ಅನುಸಾರ ಫೀಚರ್‌ಗಳನ್ನು ಎಂಜಿನಿಯರ್‌ಗಳು ಬದಲಾವಣೆ ಮಾಡಿಕೊಳ್ಳಲಿದ್ದಾರೆ. ಈ ಮೂಲಕ ಬಳಕೆದಾರ ಬ್ರೌಸರ್ ಅನ್ನು ಇಚ್ಛೆಗೆ ತಕ್ಕಂತೆ ಅದರ ವಿನ್ಯಾಸವನ್ನು ಮಾರ್ಪಡಿಸಬಹುದು‘ ಎಂದು ಒಪೆರಾ ತನ್ನ ಬ್ಲಾಗ್‌ನಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.