ADVERTISEMENT

ಕ್ಷುದ್ರಗ್ರಹಕ್ಕೆ ಗಗನನೌಕೆ ಡಿಕ್ಕಿ: ಬಾಹ್ಯಾಕಾಶದಲ್ಲಿ ಹರಡಿದ ಶಿಲಾ ಅವಶೇಷಗಳು

ಪಿಟಿಐ
Published 5 ಅಕ್ಟೋಬರ್ 2022, 14:35 IST
Last Updated 5 ಅಕ್ಟೋಬರ್ 2022, 14:35 IST
ಡಿಮಾರ್ಫೋಸ್‌ ಕ್ಷುದ್ರಗ್ರಹಕ್ಕೆ ನಾಸಾದ ‘ಡಾರ್ಟ್‌’ ಬಾಹ್ಯಾಕಾಶ ನೌಕೆ ಡಿಕ್ಕಿ ಹೊಡೆದ ನಂತರ ಕ್ಷುದ್ರಗ್ರಹದಿಂದ ಹೊಮ್ಮಿದ ದೂಳು ಹಾಗೂ ಶಿಲಾಚೂರುಗಳು ಕಾಣಿಸಿಕೊಂಡಿದ್ದು ಹೀಗೆ –ಪಿಟಿಐ ಚಿತ್ರ
ಡಿಮಾರ್ಫೋಸ್‌ ಕ್ಷುದ್ರಗ್ರಹಕ್ಕೆ ನಾಸಾದ ‘ಡಾರ್ಟ್‌’ ಬಾಹ್ಯಾಕಾಶ ನೌಕೆ ಡಿಕ್ಕಿ ಹೊಡೆದ ನಂತರ ಕ್ಷುದ್ರಗ್ರಹದಿಂದ ಹೊಮ್ಮಿದ ದೂಳು ಹಾಗೂ ಶಿಲಾಚೂರುಗಳು ಕಾಣಿಸಿಕೊಂಡಿದ್ದು ಹೀಗೆ –ಪಿಟಿಐ ಚಿತ್ರ   

ವಾಶಿಂಗ್ಟನ್‌: ನಾಸಾದ ಬಾಹ್ಯಾಕಾಶ ನೌಕೆ ‘ಡಾರ್ಟ್‌’, ಕ್ಷುದ್ರಗ್ರಹಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಬಾಹ್ಯಾಕಾಶಲ್ಲಿ ಸಾವಿರಾರು ಕಿ.ಮೀ. ವರೆಗೂ ಕ್ಷುದ್ರಗ್ರಹದಿಂದ ಹೊಮ್ಮಿದ ದೂಳು ಹಾಗೂ ಶಿಲೆಗಳ ಚೂರುಗಳು ಚದುರಿವೆ. ಈ ವಿದ್ಯಮಾನದ ಚಿತ್ರಗಳನ್ನು ಚಿಲಿಯಲ್ಲಿರುವ ದೂರದರ್ಶಕ ಸೆರೆಹಿಡಿದಿದೆ.

ಸಂಭಾವ್ಯ ಅಪಾಯವನ್ನು ತಪ್ಪಿಸಲು, ಸೆಪ್ಟೆಂಬರ್‌ 26ರಂದು ‘ಡಾರ್ಟ್‌’ ನೌಕೆಯಿಂದ ಉದ್ದೇಶಪೂರ್ವಕವಾಗಿ ಡಿಮಾರ್ಫೋಸ್‌ ಕ್ಷುದ್ರಗ್ರಹಕ್ಕೆ ಡಿಕ್ಕಿ ಹೊಡೆಸಲಾಗಿತ್ತು. ಕ್ಷುದ್ರಗ್ರಹದ ಕಕ್ಷೆಯನ್ನು ಮಾರ್ಪಡಿಸಲು ಕೈಗೊಂಡ ಮೊದಲ ಗ್ರಹಗಳ ರಕ್ಷಣಾ ಪರೀಕ್ಷೆ ಇದಾಗಿದೆ.

ಈ ಪರೀಕ್ಷೆಯ ಎರಡು ದಿನಗಳ ನಂತರ, ಖಗೋಳವಿಜ್ಞಾನಿಗಳು ಚಿಲಿಯಲ್ಲಿರುವ ‘ಸೌಥ್ ಆಸ್ಟ್ರೋಫಿಸಿಕಲ್ ರಿಸರ್ಚ್‌ ಟೆಲಿಸ್ಕೋಪ್‌’ (ಎಸ್‌ಒಎಆರ್‌) ಮೂಲಕ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.