ADVERTISEMENT

ವರ್ಷದ ಏಕೈಕ ಸಂಪೂರ್ಣ ಸೂರ್ಯಗ್ರಹಣಕ್ಕೆ ಸಾಕ್ಷಿಯಾದ ಚಿಲಿ, ಅರ್ಜೆಂಟೀನಾ

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 2:11 IST
Last Updated 3 ಜುಲೈ 2019, 2:11 IST
   

ಸ್ಯಾಂಟಿಯಾಗೊ(ಚಿಲಿ):ಈ ವರ್ಷದ ಏಕೈಕ ಸಂಪೂರ್ಣ ಸೂರ್ಯಗ್ರಹಣ ಮಂಗಳವಾರ ಸಂಭವಿಸಿತು. ಚಿಲಿ ಮತ್ತು ಅರ್ಜೆಂಟೀನಾ ದೇಶಗಳಲ್ಲಷ್ಟೇ ಈ ಅಪರೂಪದ ಖಗೋಳ ವಿದ್ಯಮಾನಗೋಚರಿಸಿದೆ.

ಭಾರತೀಯ ಕಾಲಮಾನ ರಾತ್ರಿ 10.25ಕ್ಕೆ ಸರಿಯಾಗಿ ಆರಂಭವಾದ ಗ್ರಹಣ 4.33 ನಿಮಿಷಗಳ ಕಾಲ ನಡೆಯಿತು. ನ್ಯೂಜಿಲೆಂಡ್ ಕರಾವಳಿಯಲ್ಲಿ ಆರಂಭವಾದ ವರ್ಷದ ಏಕೈಕ ಸಂಪೂರ್ಣ ಸೂರ್ಯಗ್ರಹಣವುಪೆಸಿಫಿಕ್‌ ಸಮುದ್ರ, ಚಿಲಿ, ಅರ್ಜೆಂಟೀನಾ ಹಾಗೂ ದಕ್ಷಿಣ ಅಮೆರಿಕದಲ್ಲಿ ಮಾತ್ರ ಗೋಚರಿಸಿತು.

ಈ ದೇಶಗಳಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ಜನ ಭಾರಿ ಉತ್ಸಾಹ ತೋರಿದರು. ಛಾಯಾಗ್ರಹಕರು ಈ ವಿದ್ಯಮಾನವನ್ನು ಸೆರೆಹಿಡಿಯಲು ಸಕಲ ತಯಾರಿಗಳನ್ನೂ ಮಾಡಿಕೊಂಡಿದ್ದರು.

ADVERTISEMENT

ಸೂರ್ಯ ಹಾಗೂ ಭೂಮಿಯ ನಡುವೆ ಚಂದ್ರ ಬಂದಾಗ ಸೂರ್ಯನ ಗೋಚರ ಬಿಂಬ ಚಂದ್ರನಿಂದ ಆವರಿಸಲ್ಪಡುತ್ತದೆ. ಈ ವೇಳೆ ಸೂರ್ಯಗ್ರಹಣ ಸಂಭವಿಸುತ್ತದೆ.

ಈ ದಶಕದಲ್ಲಿ ಈಗಾಗಲೇ ಎರಡು ಸಂಪೂರ್ಣಸೂರ್ಯಗ್ರಹಣಗಳನ್ನು ಕಂಡಿರುವ ಚಿಲಿ 2020ರಲ್ಲಿ ಮತ್ತೊಂದು ಸಂಪೂರ್ಣ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿದೆ.2010ರಲ್ಲಿ ದಶಕದ ಮೊದಲಸಂಪೂರ್ಣ ಸೂರ್ಯಗ್ರಹಣ ಸಂಭವಿಸಿತ್ತು. ಮಂಗಳವಾರ ಮತ್ತೊಂದು ಸಂಭವಿಸಿದೆ. 2020ರ ಡಿ.14ರಂದು ಇನ್ನೊಂದು ಸಂಪೂರ್ಣ ಸೂರ್ಯಗ್ರಹಣ ಅಲ್ಲಿ ಗೋಚರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.